ಅಪ್ಪ ಶಾರುಖ್ ಖಾನ್ ಜೊತೆ ನಟಿಸಲಿರುವ ಪುತ್ರಿ ಸುಹಾನಾ ಖಾನ್
Suhana Khan: ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ನಟಿಸಿರುವ ಮೊದಲ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ, ಆಗಲೇ ಅವರಿಗೆ ದೊಡ್ಡ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಿದೆ. ಸುಹಾನಾ ಖಾನ್, ತಮ್ಮ ತಂದೆ ಶಾರುಖ್ ಖಾನ್ರ ಸಿನಿಮಾದಲ್ಲಿ ನಟಿಸಲಿದ್ದಾರೆ.
1 / 7
ಸುಹಾನಾ ಖಾನ್ ನಟನೆಯ ಒಂದೂ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ ಆಗಲೇ ಸುಹಾನಾಗೆ ಅವಕಾಶಗಳು ಅರಸಿ ಬರುತ್ತಿವೆ.
2 / 7
ಸುಹಾನಾ ಖಾನ್ ‘ಆರ್ಚಿಸ್’ ಸಿನಿಮಾದಲ್ಲಿ ನಟಿಸಿದ್ದಾರೆ ಇದು ಅವರ ಮೊದಲ ಸಿನಿಮಾ, ‘ಆರ್ಚೀಸ್’ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ.
3 / 7
ಈಗಾಗಲೇ ಸುಹಾನಾ ಖಾನ್ಗೆ ಹಲವು ಸಿನಿಮಾ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಆದರೆ ಒಂದು ಸಿನಿಮಾವನ್ನು ಮಾತ್ರ ಸುಹಾನಾ ಒಪ್ಪಿಕೊಂಡಿದ್ದಾರಂತೆ.
4 / 7
ಸುಹಾನಾ ಖಾನ್ ತಮ್ಮ ತಂದೆ ಶಾರುಖ್ ಖಾನ್ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ, ಆ ಸಿನಿಮಾದ ಚಿತ್ರೀಕರಣ ಜನವರಿಯಿಂದ ಪ್ರಾರಂಭವಾಗಲಿದೆ.
5 / 7
ಶಾರುಖ್ ಖಾನ್ ಹಾಗೂ ಸುಹಾನಾ ಖಾನ್ ಒಟ್ಟಿಗೆ ನಟಿಸಲಿರುವ ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಆಗಿರಲಿದ್ದು, ಸಿನಿಮಾದಲ್ಲಿಯೂ ಸಹ ಅಪ್ಪ-ಮಗಳಾಗಿಯೇ ಶಾರುಖ್-ಸುಹಾನಾ ನಟಿಸಲಿದ್ದಾರೆ.
6 / 7
ಸುಹಾನಾ ಖಾನ್, ವಿದೇಶದಲ್ಲಿ ಸಿನಿಮಾ ಕುರಿತಾದ ಕೋರ್ಸ ಮುಗಿಸಿ ಬಂದಿದ್ದಾರೆ, ಅಲ್ಲದೆ ಸಿನಿಮಾ ಕುಟುಂಬದವರೇ ಆಗಿರುವ ಕಾರಣ ಅವರಿಗೆ ನಟನೆ ಹೊಸದೇನೂ ಅಲ್ಲ.
7 / 7
ಸುಹಾನಾ ಖಾನ್ ‘ಆರ್ಚೀಸ್’ ಸಿನಿಮಾದಲ್ಲಿ ಚೆನ್ನಾಗಿ ನಟಿಸಿದ್ದಾರೆ ಎನ್ನಲಾಗುತ್ತಿದ್ದು, ಮುಂದಿನ ಅವಕಾಶಗಳನ್ನು ಪ್ರತಿಭೆಯ ಆಧಾರದಲ್ಲಿ ಪಡೆದುಕೊಳ್ಳುತ್ತಾರೆಯೇ ಎಂದು ನೋಡಬೇಕಿದೆ.