ಸನ್ನಿ ಲಿಯೋನ್​ ಮನೆಯಲ್ಲಿ ಗಣಪತಿ ಹಬ್ಬದ ಸಂಭ್ರಮ; ಫ್ಯಾಮಿಲಿ ಸಡಗರಕ್ಕೆ ಈ ಪೋಟೋಗಳೇ ಸಾಕ್ಷಿ

| Updated By: ಮದನ್​ ಕುಮಾರ್​

Updated on: Sep 12, 2021 | 11:57 AM

ಮಾದಕ ನಟಿ ಸನ್ನಿ ಲಿಯೋನ್​ ಮನೆಯಲ್ಲಿ ಗಣೇಶ ಚತುರ್ಥಿ ಆಚರಿಸಲಾಗಿದೆ. ಭಾರತೀಯ ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ಅವರು ಇಲ್ಲಿನ ಹಬ್ಬಗಳ ಬಗ್ಗೆಯೂ ಆಸಕ್ತಿ ತೋರಿಸುತ್ತಿದ್ದಾರೆ. ಇಡೀ ಫ್ಯಾಮಿಲಿ ಜೊತೆ ಅವರು ಗಣಪತಿ ಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ.

1 / 6
ಗಣಪತಿ ಹಬ್ಬಕ್ಕಾಗಿ ನಟಿ ಸನ್ನಿ ಲಿಯೋನ್​ ಶೂಟಿಂಗ್​ಗೆ ಬಿಡುವು ನೀಡಿದ್ದಾರೆ. ಮನೆಯಲ್ಲಿ ಕುಟುಂಬದವರು ಮತ್ತು ಸ್ನೇಹಿತರ ಜೊತೆ ಸೇರಿಕೊಂಡು ಗಣೇಶ ಚತುರ್ಥಿ ಆಚರಿಸಿದ್ದಾರೆ.

2 / 6
ಗಣೇಶನ ವಿಗ್ರಹಕ್ಕೆ ಹೂವಿನಿಂದ ಅಲಂಕಾರ ಮಾಡಲಾಗಿದೆ. ಭಕ್ತಿ ಭಾವದಿಂದ ಪೂಜೆ ನೆರವೇರಿಸಿ ಹಬ್ಬ ಆಚರಿಸಲಾಗಿದೆ. ಈ ಫೋಟೋಗಳನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಸನ್ನಿ ಸನ್ನಿ ಲಿಯೋನ್​ ಶೇರ್​ ಮಾಡಿಕೊಂಡಿದ್ದಾರೆ.

3 / 6
ಸನ್ನಿ ಲಿಯೋನ್​ ಪಾಲಿಗೆ ಗಣೇಶ ಚತುರ್ಥಿ ಎಂದರೆ ತುಂಬ ಸ್ಪೆಷಲ್​. 2018ರಲ್ಲಿ ಗಣೇಶೋತ್ಸವದ ದಿನವೇ ಅವರು ಮುಂಬೈನ ತಮ್ಮ ಹೊಸ ಮನೆಗೆ ಪ್ರವೇಶಿದ್ದರು. ಈ ವರ್ಷವೂ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

4 / 6
ಸನ್ನಿ ಲಿಯೋನ್​ ಜೊತೆ ಅವರ ಪತಿ ಡೇನಿಯಲ್​ ವೆಬರ್​ ಕೂಡ ಗಣೇಶ ಚತುರ್ಥಿ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಸ್ನೇಹಿತರ ಕುಟುಂಬಗಳಿಗೂ ಆಹ್ವಾನ ನೀಡಲಾಗಿತ್ತು. ಎಲ್ಲರೂ ಒಟ್ಟಾಗಿ ಗಣೇಶನಿಗೆ ನಮಿಸಿದ್ದಾರೆ.

5 / 6
ಸನ್ನಿ ಲಿಯೋನ್​-ಡೇನಿಯಲ್​ ವೆಬರ್​ ದಂಪತಿಯ ದತ್ತು ಮಗಳು ನಿಶಾ ಹಾಗೂ ಬಾಡಿಗೆ ತಾಯಿ ಮೂಲಕ ಪಡೆದ ಅವಳಿ ಮಕ್ಕಳಾದ ಅಶೇರ್​, ನೋಹ ಕೂಡ ಗಣೇಶೋತ್ಸವದ ಖುಷಿಯಲ್ಲಿ ಮಿಂದೆಂದಿದ್ದಾರೆ.

6 / 6
ಸನ್ನಿ ಲಿಯೋನ್​ ಕೈಯಲ್ಲಿ ಹಲವು ಆಫರ್​ಗಳಿವೆ. ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ಅವರು ಬಿಗ್​ ಬಾಸ್​ ಓಟಿಟಿ ಕಾರ್ಯಕ್ರಮದ ವಿಶೇಷ ಎಪಿಸೋಡ್​ನಲ್ಲಿ ಭಾಗಿ ಆಗಿದ್ದರು.