
ಬಾಲಿವುಡ್ ನಟಿ ಸನ್ನಿ ಲಿಯೋನ್ ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಇದಕ್ಕೆ ಅವರ ಪತಿ ಡೇನಿಯಲ್ ವೆಬರ್ ಕೂಡ ಹೊರತಾಗಿಲ್ಲ. ಆದರೆ ಇತ್ತೀಚೆಗೆ ಫೋಟೋ ಒಂದನ್ನು ತೆಗೆದುಕೊಂಡು ಅದನ್ನು ಟ್ರೋಲ್ ಮಾಡಲಾಗಿದೆ. ಅಷ್ಟಕ್ಕೂ ಸನ್ನಿ ಮಾಡಿದ್ದೇನು ಅಂತೀರಾ? ಮುಂದೆ ಓದಿ.

ಡೇನಿಯಲ್ ಹಾಗೂ ಸನ್ನಿಗೆ ನಿಶಾ ಎಂಬ ದತ್ತುಪುತ್ರಿಯಿದ್ದಾಳೆ. ಜತೆಗೆ ಬಾಡಿಗೆ ತಾಯ್ತನದ ಮೂಲಕ ಅಶೆರ್ ಹಾಗೂ ನೋಹಾ ಎಂಬ ಮಕ್ಕಳನ್ನು ತಾರಾ ದಂಪತಿ ಪಡೆದಿದ್ದಾರೆ. ಆದರೆ ಇತ್ತೀಚಿನ ಫೋಟೋ ಒಂದರಲ್ಲಿ ಸನ್ನಿ ಹಾಗೂ ಡೇನಿಯಲ್ ನಿಶಾರ ಕೈ ಹಿಡಿದುಕೊಂಡಿರಲಿಲ್ಲ. ಬದಲಾಗಿ ಮತ್ತೀರ್ವರು ಮಕ್ಕಳ ಕೈಹಿಡಿದಿದ್ದರು. ನಿಶಾ ದತ್ತುಪುತ್ರಿಯಾಗಿದ್ದರಿಂದ ಅವರ ಕೈಹಿಡಿಯಲಾಗಿಲ್ಲ ಎಂದು ಟ್ರೋಲ್ ಮಾಡಲಾಗಿತ್ತು. ಇದಕ್ಕೆ ಸನ್ನಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

‘‘ಪೋಷಕರಾಗಿ ನಾವೇನು ಮಾಡುತ್ತಿದ್ದೇವೆ ಎನ್ನುವುದನ್ನು ಒಂದು ಫೋಟೋ ತಿಳಿಸುವುದಿಲ್ಲ. ಒಂದು ಫೋಟೋದಿಂದಲೇ ಎಲ್ಲವನ್ನೂ ಹೇಗೆ ಅಳೆಯುತ್ತೀರಿ? ಮಕ್ಕಳನ್ನು ನಾವು ಅದ್ಭುತವಾಗಿ ನೋಡಿಕೊಳ್ಳುತ್ತಿದ್ದೇವೆ. ಡೇನಿಯಲ್ಗೆ ನಿಶಾ ಎಂದರೆ ಪ್ರಾಣ’’ ಎಂದು ಉತ್ತರಿಸಿದ್ದಾರೆ ಸನ್ನಿ.


Published On - 12:01 pm, Sun, 20 March 22