ಬಾಲಿವುಡ್ ನಟಿ ಸನ್ನಿ ಲಿಯೋನ್ ಹೊಸ ವರ್ಷವನ್ನು ಗೋವಾದಲ್ಲಿ ಸಂಭ್ರಮದಿಂದ ಬರಮಾಡಿಕೊಂಡಿದ್ದು, ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
2022ರಲ್ಲಿ ಸನ್ನಿ ಲಿಯೋನ್ ನಟನೆಯ ಹಲವು ಚಿತ್ರಗಳು ತೆರೆ ಕಾಣಲಿವೆ. ಆದ್ದರಿಂದಲೇ ನಟಿಗೆ ಈ ವರ್ಷದ ಕುರಿತು ಅಪಾರ ನಿರೀಕ್ಷೆಗಳಿವೆ.
ಮುಖ್ಯ ಪಾತ್ರ ನಿರ್ವಹಿಸುತ್ತಿರುವ ‘ಕೊಕಾ ಕೋಲಾ’, ‘ಹೆಲೆನ್’ ಚಿತ್ರಗಳೂ ಸೇರಿದಂತೆ ಸನ್ನಿ ಲಿಯೋನ್ ಕೈಯಲ್ಲಿ ಒಟ್ಟು 7 ಸಿನಿಮಾಗಳಿವೆ.
2022ರಲ್ಲಿ ‘ವೀರಮ್ಮದೇವಿ’ ಚಿತ್ರದ ಮೂಲಕ ತಮಿಳಿಗೆ ಹಾಗೂ ‘ರಂಗೀಲಾ’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಸನ್ನಿ ಪದಾರ್ಪಣೆ ಮಾಡಲಿದ್ದಾರೆ.
ಇದಲ್ಲದೇ ಹಲವು ಮ್ಯೂಸಿಕ್ ಆಲ್ಬಂಗಳೂ ತೆರೆಕಾಣಲಿವೆ.
ಆದ್ದರಿಂದಲೇ 2022ನ್ನು ಹೊಸ ಭರವಸೆಯೊಂದಿಗೆ ಬರಮಾಡಿಕೊಂಡಿರುವ ಸನ್ನಿ, ದೊಡ್ಡ ಗೆಲುವನ್ನು ನಿರೀಕ್ಷಿಸುತ್ತಿದ್ದಾರೆ.