Swetha Changappa: ಕಿರುತೆರೆಯಲ್ಲಿ 20 ವರ್ಷ ಪೂರೈಸಿದ ಶ್ವೇತಾ ಚಂಗಪ್ಪ; ಸಿನಿಮಾದಲ್ಲೂ ನಟಿಯ ಯಶಸ್ವಿ ಪಯಣ

Updated on: Jan 28, 2023 | 8:30 AM

ಶ್ವೇತಾ ಚಂಗಪ್ಪ ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ನಟಿಯಾಗಿ, ನಿರೂಪಕಿಯಾಗಿ, ರಿಯಾಲಿಟಿ ಶೋ ಸ್ಪರ್ಧಿಯಾಗಿ ಅವರು ವೀಕ್ಷಕರ ಮನ ಗೆದ್ದಿದ್ದಾರೆ.

1 / 7
ಖ್ಯಾತ ನಟಿ ಶ್ವೇತಾ ಚಂಗಪ್ಪ ಅವರು ಬಣ್ಣದ ಲೋಕದಲ್ಲಿ 20 ವರ್ಷಗಳ ಪಯಣವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಅದಕ್ಕಾಗಿ ಅವರಿಗೆ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ಖ್ಯಾತ ನಟಿ ಶ್ವೇತಾ ಚಂಗಪ್ಪ ಅವರು ಬಣ್ಣದ ಲೋಕದಲ್ಲಿ 20 ವರ್ಷಗಳ ಪಯಣವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಅದಕ್ಕಾಗಿ ಅವರಿಗೆ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

2 / 7

‘ಸುಮತಿ’, ‘ಕಾದಂಬರಿ’, ‘ಸುಕನ್ಯಾ’, ‘ಅರುಂಧತಿ’, ‘ಸಂಗೀತಾ’ ಮುಂತಾದ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಶ್ವೇತಾ ಚಂಗಪ್ಪ ಅವರು ವೀಕ್ಷಕರನ್ನು ರಂಜಿಸಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.

3 / 7

ಧಾರಾವಾಹಿ ಮಾತ್ರವಲ್ಲದೇ ಅನೇಕ ರಿಯಾಲಿಟಿ ಶೋಗಳಲ್ಲೂ ಅವರು ಭಾಗವಹಿಸಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 2’, ‘ಹಾಕು ಹೆಜ್ಜೆ ಹಾಕು’, ‘ಕುಣಿಯೋಣು ಬಾರ’, ‘ಡಾನ್ಸಿಂಗ್ ಸ್ಟಾರ್​’, ‘ಮಜಾ ಟಾಕೀಸ್​’ ಮುಂತಾದ ಕಾರ್ಯಕ್ರಮಗಳಿಂದ ಅವರು ಮನೆಮಾತಾಗಿದ್ದಾರೆ.

4 / 7

ನಿರೂಪಕಿ ಆಗಿಯೂ ಶ್ವೇತಾ ಚಂಗಪ್ಪ ಫೇಮಸ್​. ‘ಯಾರಿಗುಂಟು ಯಾರಿಗಿಲ್ಲ’, ‘ಡ್ಯಾನ್ಸ್​ ಡ್ಯಾನ್ಸ್​ ಜೂನಿಯರ್ಸ್​’, ‘ಜೋಡಿ ನಂಬರ್​ 1’, ‘ಸೂಪರ್​ ಕ್ವೀನ್​’ ಮುಂತಾದ ಕಾರ್ಯಕ್ರಮಗಳ ನಿರೂಪಣೆ ಮಾಡಿದ ಅನುಭವವೂ ಅವರಿಗೆ ಇದೆ. ಹಲವು ಪ್ರಶಸ್ತಿ ಪ್ರದಾನ ಸಮಾರಂಭಗಳನ್ನೂ ನಡೆಸಿಕೊಟ್ಟಿದ್ದಾರೆ.

5 / 7

ಶ್ವೇತಾ ಚಂಗಪ್ಪ ಅವರು ಕಿರುತೆರೆಗೆ ಮಾತ್ರ ಸೀಮಿತವಾಗಿಲ್ಲ. ಸಿನಿಮಾ ಲೋಕದಲ್ಲೂ ಅವರು ಸಕ್ರಿಯರಾಗಿದ್ದಾರೆ. ‘ವರ್ಷಾ’, ‘ತಂಗಿಗಾಗಿ’, ‘ವೇದ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ‘ವೇದ’ ಚಿತ್ರದಲ್ಲಿ ಅವರು ಮಾಡಿದ ಪಾತ್ರ ಜನಮೆಚ್ಚುಗೆ ಗಳಿಸಿದೆ.

6 / 7

ಬಣ್ಣದ ಲೋಕದಲ್ಲಿ 20 ವರ್ಷಗಳನ್ನು ಪೂರೈಸುವುದು ಎಂದರೆ ತಮಾಷೆಯೇ ಅಲ್ಲ. ಮೊದಲ ದಿನದಿಂದ ಇಂದಿನ ತನಕ ಡಿಮ್ಯಾಂಡ್​ ಉಳಿಸಿಕೊಳ್ಳುವುದು ಸವಾಲಿನ ಕೆಲಸ. ಅದಕ್ಕಾಗಿ ಶ್ವೇತಾ ಚಂಗಪ್ಪ ಅವರಿಗೆ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

7 / 7

ಈ ಸುದೀರ್ಘ ಜರ್ನಿಯಲ್ಲಿ ತಮಗೆ ಬೆಂಬಲವಾಗಿ ನಿಂತ ಎಲ್ಲರಿಗೂ ಶ್ವೇತಾ ಚಂಗಪ್ಪ ಅವರು ಧನ್ಯವಾದ ಅರ್ಪಿಸಿದ್ದಾರೆ. ಕೇಕ್​ ಕತ್ತರಿಸುವ ಮೂಲಕ ಅವರು ಸಂಭ್ರಮಿಸಿದ್ದಾರೆ. ತಾವು ನಡೆದು ಬಂದ ಹಾದಿಯನ್ನು ಸೋಶಿಯಲ್​ ಮೀಡಿಯಾದಲ್ಲಿ ಮೆಲುಕು ಹಾಕಿದ್ದಾರೆ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us