
‘ಸ್ತ್ರೀ’ ಸಿನಿಮಾ ರಿಲೀಸ್ ಆಗೋಕೆ ರೆಡಿ ಆಗಿದೆ. ಆಗಸ್ಟ್ 15ರಂದು ಈ ಚಿತ್ರ ಬಿಡುಗಡೆ ಕಾಣಲಿದೆ. ಈ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ತಮನ್ನಾ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

‘ಆಜ್ ಕಿ ರಾತ್’ ಹೆಸರಿನ ಐಟಂ ಸಾಂಗ್ನಲ್ಲಿ ತಮನ್ನಾ ಕಾಣಿಸಿಕೊಂಡಿದ್ದಾರೆ. ಅವರು ಮೈ ಬಳುಕಿಸಿದ ಪರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ತಮನ್ನಾ ಅವರ ಅಭಿಮಾನಿ ಬಳಗ ಹಿರಿದಾಗಿದೆ. ಈ ಹಾಡು ಎರಡು ದಿನಕ್ಕೆ ಸುಮಾರು 2 ಕೋಟಿ ಬಾರಿ ವೀಕ್ಷಣೆ ಕಂಡಿದೆ.

ಈ ಮೊದಲು ‘ಜೈಲರ್’ ಸಿನಿಮಾದಲ್ಲಿ ತಮನ್ನಾ ವಿಶೇಷ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಈಗ ಇದೇ ರೀತಿಯ ಮತ್ತೊಂದು ಹಾಡಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರ ಮೈಮಾಟಕ್ಕೆ ಹಿಂದಿ ಮಂದಿ ಕಣ್ಣರಳಿಸಿದ್ದಾರೆ.

ತಮನ್ನಾ ಅವರ ಹವಾ ಈ ಚಿತ್ರದ ಹಾಡಿನ ಮೂಲಕ ಹೆಚ್ಚಾಗಿದೆ. ಈ ಚಿತ್ರದಲ್ಲಿ ರಾಜ್ಕುಮಾರ್ ರಾವ್, ಶ್ರದ್ಧಾ ಕಪೂರ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ತಮನ್ನಾ ಅವರು ಕೇವಲ ಹಾಡಿಗೆ ಮಾತ್ರ ಸೀಮಿತ ಆಗಿದ್ದಾರೆ.

ತಮನ್ನಾ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 25 ಕೋಟಿಗೂ ಅಧಿಕ ಹಿಂಬಾಲಕರು ಇದ್ದಾರೆ. ಅವರ ಹಿಂಬಾಲಕರ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ.