
ನಟಿ ತೇಜಸ್ವಿ ಪ್ರಕಾಶ್ ಅವರು ಬಣ್ಣದ ಲೋಕದಲ್ಲಿ ಬ್ಯುಸಿ ಆಗಿದ್ದಾರೆ. ಹಿಂದಿ ಬಿಗ್ ಬಾಸ್ ಟೈಟಲ್ ಗೆಲ್ಲುವ ಮೂಲಕ ಅವರು ಜನಪ್ರಿಯತೆ ಪಡೆದರು. ಈಗ ಅವರು ಒಂದು ವಿಚಾರ ಹೇಳಿಕೊಂಡಿದ್ದಾರೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.

ನಟಿ ತೇಜಸ್ವಿ ಪ್ರಕಾಶ್ ಅವರು 20 ಸಾವಿರ ರೂಪಾಯಿ ನೀಡಿ ಪ್ರಶ್ನೆ ಪತ್ರಿಕೆ ಖರೀದಿಸುವ ಪ್ರಯತ್ನ ಮಾಡಿದ್ದರು. ಆದರೆ, ಯಶಸ್ವಿ ಆಗಲೇ ಇಲ್ಲ. ಈ ವಿಚಾರವನ್ನು ಸ್ವತಃ ತೇಜಸ್ವಿ ಪ್ರಕಾಶ್ ರಿವೀಲ್ ಮಾಡಿದ್ದಾರೆ.

‘ನಾನು ಎಂದಿಗೂ ಪ್ರಶ್ನೆ ಪತ್ರಿಕೆಗಳನ್ನು ಖರೀದಿಸಿಲ್ಲ. ಅದು ಸಾಧ್ಯವಿಲ್ಲ ಎಂಬುದು ನನ್ನ ಭಾವನೆ. ಏಕೆಂದರೆ ನಾನು ಪ್ರಯತ್ನಿಸಿದ್ದೇನೆ’ ಎಂದಿದ್ದಾರೆ ತೇಜಸ್ವಿ. ಈ ಮೂಲಕ 20 ಸಾವಿರ ರೂಪಾಯಿ ನಷ್ಟ ಆಯಿತು ಎಂದು ಪರೋಕ್ಷವಾಗಿ ಹೇಳಿದ್ದಾರೆ.

ತೇಜಸ್ವಿ ಅವರು ಇಂಜಿನಿಯರಿಂಗ್ ಓದಿದ್ದಾರೆ. ಅವರಿಗೆ ಕಾಲೇಜು ದಿನಗಳಲ್ಲಿ ನಟಿ ಆಗಬೇಕು ಎನ್ನುವ ಆಸೆ ಅವರಿಗೆ ಇರಲಿಲ್ಲ. ಮಾಡೆಲ್ ಆದ ಅವರು ನಂತರ ಬಣ್ಣದ ಲೋಕಕ್ಕೆ ಬಂದರು.

ತೇಜಸ್ವಿ ಪ್ರಕಾಶ್ ಅವರು ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಬ್ಯುಸಿ ಇದ್ದಾರೆ. ಅವರು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ.