ಐಪಿಎಲ್ ಮಾದರಿಯಲ್ಲಿ ‘ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ 3’ ಆಟಗಾರರ ಹರಾಜು ಪ್ರಕ್ರಿಯೆ
ನಟಿ ರಾಗಿಣಿ ದ್ವಿವೇದಿ ಅವರು ‘ಟೆಲಿವಿಷನ್ ಪ್ರೀಮಿಯರ್ ಲೀಗ್’ಗೆ ಪ್ರಚಾರ ರಾಯಭಾರಿ ಆಗಿದ್ದಾರೆ. 3ನೇ ಸೀಸನ್ಗೆ ಸಿದ್ಧತೆ ನಡೆಯುತ್ತಿದೆ. ಅದರ ಪ್ರಮುಖ ಹಂತವಾಗಿ ಬೆಂಗಳೂರಿನ ಸ್ಟಾರ್ ಹೋಟೆಲ್ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ. ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಅತಿಥಿಯಾಗಿ ಬಂದು ಶುಭ ಕೋರಿದ್ದಾರೆ.
1 / 6
ಕ್ರಿಕೆಟ್ ಜಗತ್ತಿಗೂ ಸಿನಿಮಾ ಲೋಕಕ್ಕೂ ಹತ್ತಿರದ ನಂಟಿದೆ. ಸಿನಿಮಾ ಕ್ಷೇತ್ರದಲ್ಲಿ ಮಿಂಚಿದ ಕಲಾವಿದರ ಪೈಕಿ ಎಷ್ಟೋ ಜನರಿಗೆ ಕ್ರಿಕೆಟ್ ಬಗ್ಗೆ ಆಸಕ್ತಿ ಇದೆ. ತಾವೂ ಕೂಡ ಉತ್ತಮ ಕ್ರಿಕೆಟರ್ ಆಗಬೇಕು ಎಂದು ಬಯಸಿದವರಿದ್ದಾರೆ. ಎಲ್ಲ ಭಾಷೆಯ ಕಲಾವಿದರು ಸಹ ಕ್ರಿಕೆಟ್ ಆಡಲು ಬಯಸುತ್ತಾರೆ. ಅಂಥವರಿಗೆ ಕೆಲವು ಅವಕಾಶಗಳು ಇವೆ. ಕಿರುತೆರೆ ಕಲಾವಿದರು ಕೂಡ ಇದಕ್ಕೆ ಹೊರತಾಗಿಲ್ಲ. ಹಾಗಾಗಿ ಕಳೆದ ಎರಡು ವರ್ಷದಿಂದ ‘ಟೆಲಿವಿಷನ್ ಪ್ರೀಮಿಯರ್ ಲೀಗ್’ ನಡೆಸಲಾಗುತ್ತಿದೆ. ಈಗ ಇದರ ಮೂರನೇ ಆವೃತ್ತಿಯ ಪ್ರಾರಂಭಕ್ಕೆ ಸಕಲ ತಯಾರಿ ಮಾಡಿಕೊಳ್ಳಲಾಗುತ್ತಿದೆ.
2 / 6
2024ರ ಜನವರಿ ತಿಂಗಳಲ್ಲಿ ಅದ್ದೂರಿಯಾಗಿ ‘ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ 3’ ಪಂದ್ಯಗಳು ನಡೆಯಲಿವೆ. ವಿಶೇಷ ಏನೆಂದರೆ, ಕಲಾವಿದರು ಹಾಗೂ ತಂತ್ರಜ್ಞರ ಜೀವನಕ್ಕೆ ಸಹಾಯವಾಗಲಿ ಎಂಬ ಉದ್ದೇಶದಿಂದ ಎನ್ 1 ಕ್ರಿಕೆಟ್ ಅಕಾಡೆಮಿಯ ಬಿಆರ್ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಈ ಲೀಗ್ ನಡೆಯುತ್ತಿದೆ. ಈಗಾಗಲೇ ಯಶಸ್ವಿಯಾಗಿ ಎರಡು ಆವೃತ್ತಿಗಳು ಮುಗಿದಿದೆ. ಈಗ 3ನೇ ಸೀಸನ್ಗೆ ಸಿದ್ಧತೆ ನಡೆಯುತ್ತಿದೆ. ಅದರ ಪ್ರಮುಖ ಹಂತವಾಗಿ ಬೆಂಗಳೂರಿನ ಸ್ಟಾರ್ ಹೋಟೆಲ್ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ.
3 / 6
ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಈ ಇವೆಂಟ್ಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಟೂರ್ನಮೆಂಟ್ಗೆ ಅವರು ಶುಭ ಕೋರಿದರು. ನಟಿ ರಾಗಿಣಿ ದ್ವಿವೇದಿ ಅವರು ‘ಟೆಲಿವಿಷನ್ ಪ್ರೀಮಿಯರ್ ಲೀಗ್’ಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಟಿಪಿಎಲ್ಗೆ ಬಗ್ಗೆ ಬಸವರಾಜ್ ಹೊರಟ್ಟಿ ಮಾತನಾಡಿದರು. ‘ಬಹಳ ಸಂತೋಷ ಎನಿಸುತ್ತಿದೆ. ಎರಡು ಪ್ರಕಾರದ ವ್ಯಕ್ತಿಗಳನ್ನು ನೋಡುತ್ತೀರಿ. ಸತ್ತರೂ ಬದುಕಿದ್ದ ಹಾಗೆ ಇರುವವರು ಒಂದು ಪ್ರಕಾರದವರು. ಬದುಕಿದ್ದೂ ಸತ್ತಂತೆ ಇರುವವರು ಮತ್ತೊಂದು ಪ್ರಕಾರದವರ. ಸತ್ತೂ ಬದುಕಿರುವವರು ಪುನೀತ್. ಅಪ್ಪು ನನ್ನೊಂದಿಗೆ ಆತ್ಮೀಯವಾಗಿ ಇದ್ದವರು’ ಎಂದು ಅವರು ಹೇಳಿದರು.
4 / 6
‘ಮಾಧ್ಯಮದವರು ಮತ್ತು ಕಿರುತೆರೆಯವರು ಜೊತೆಗೂಡಿ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸುತ್ತಿರುವುದು ತುಂಬ ಹೆಮ್ಮೆಯ ಸಂಗತಿ. ನಾವು ಕೂಡ ಜೀವನದಲ್ಲಿ ಕ್ರಿಕೆಟ್ ಆಡುತ್ತಿದ್ವಿ. ಅದು ಮನುಷ್ಯನಿಗೆ ಆರಾಮ ನೀಡುತ್ತದೆ. ನಿಮಗೆ ಏನು ಅನುಕೂಲ ಬೇಕಾದರೂ ಸಾಧ್ಯವಾದಷ್ಟು ನಾನು ನೀಡುತ್ತೇನೆ. ನೀವು ಏನಾದರೂ ಹೊಸದನ್ನು ಮಾಡಬೇಕು. ಜೀವನದಲ್ಲಿ ಏನೇ ಮಾಡಿ, ನಿಮ್ಮನ್ನು ಜನರು ನೆನಪಿಡುವಂತಹ ಕೆಲಸ ಮಾಡಿ’ ಎಂದು ಬಸವರಾಜ್ ಹೊರಟ್ಟಿ ಹೇಳಿದರು.
5 / 6
ಐಪಿಎಲ್ ಮಾದರಿಯಲ್ಲಿ ಟಿಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲಾಗಿದೆ. 150 ಆಟಗಾರರ ಪೈಕಿ ಹೆಚ್ಚು ಬಿಡ್ಗೆ ಆಯ್ಕೆಯಾದ ಆಟಗಾರರಿಗೆ N1 ಅಕಾಡೆಮಿ ವತಿಯಿಂದ ನಗದು ರೂಪದಲ್ಲಿ ಬಹುಮಾನ ನೀಡಲಾಗಿದೆ. ಗೋಲ್ಡನ್ ಈಗಲ್, ಅಶ್ವಸೂರ್ಯ ರೈಡರ್ಸ್, ಕೆಕೆಆರ್ ಮೀಡಿಯಾ ಹೌಸ್, ಎವಿಆರ್ ಟಸ್ಕರ್ಸ್, ಬಯೋಟಾಪ್ ಲೈಫ್ ಸೇವಿಯರ್ಸ್, ರಾಸು ವಾರಿಯರ್, ದಿ ಬುಲ್ ಸ್ಕ್ವಾಡ್, ಭಜರಂಗಿ ಬಾಯ್ಸ್, ಜಿಎಲ್‌ಆರ್ ವಾರಿಯರ್ಸ್, ಇನ್‌ಸೇನ್ ಕ್ರಿಕೆಟ್ ಟೀಂ ಸೇರಿದಂತೆ 10 ತಂಡಗಳಲ್ಲಿ ಒಟ್ಟು 150 ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಎಲ್ಲ ಹತ್ತು ಟೀಮ್ಗಳಿಗೂ ಅಂಬಾಸಿಡರ್ ಮತ್ತು ಓನರ್ ಇರಲಿದ್ದಾರೆ. ಹೆಚ್. ವೆಂಕಟೇಶ್ ರೆಡ್ಡಿ ಹಾಗೂ ಅರವಿಂದ್ ವೆಂಕಟೇಶ್ ರೆಡ್ಡಿ ಟೈಟಲ್ ಸ್ಪಾನ್ಸರ್ ಮಾಡಿದ್ದಾರೆ.
6 / 6
ಅಶ್ವಸೂರ್ಯ ರೈಡರ್ಸ್ ಟೀಮ್ಗೆ ಹರ್ಷ ಸಿಎಂ ಗೌಡ ಕ್ಯಾಪ್ಟನ್. ರಂಜಿತ್ ಕುಮಾರ್ ಎಸ್ ಓನರ್ ಆಗಿದ್ದಾರೆ. ಜಿಎಲ್‌ಆರ್ ವಾರಿಯರ್ಸ್ ತಂಡಕ್ಕೆ ಲೂಸ್ ಮಾದ ಯೋಗಿ ನಾಯಕ. ರಾಜೇಶ್ ಎಲ್. ಓನರ್ ಆಗಿದ್ದಾರೆ. ಇನ್‌ಸೇನ್ ಕ್ರಿಕೆಟ್ ಟೀಂಗೆ ರವಿಶಂಕರ್ ಗೌಡ ಅವರು ನಾಯಕನಾಗಿದ್ದು, ಫೈಜಾನ್ ಖಾನ್ ಮಾಲಿಕರಾಗಿದ್ದರೆ. ದಿ ಬುಲ್ ಸ್ಕ್ವಾಡ್ ಟೀಮ್ಗೆ ಶರತ್ ಪದ್ಮನಾಭ್ ನಾಯಕ ಹಾಗೂ ಮೋನಿಶ್ ಓನರ್ ಆಗಿದ್ದಾರೆ. ಭಜರಂಗಿ ಬಾಯ್ಸ್ ತಂಡವನ್ನು ಸಾಗರ್ ಬಿಳಿಗೌಡ ನಾಯಕನಾಗಿ ಮುನ್ನಡೆಸುತ್ತಾರೆ. ಅದಕ್ಕೆ ಸ್ವಸ್ತಿಕ್ ಆರ್ಯ ಮಾಲಿಕರಾಗಿದ್ದಾರೆ. ದೀಕ್ಷಿತ್ ಶೆಟ್ಟಿ ಅವರು ರಾಸು ವಾರಿಯರ್ಸ್ ಟೀಂಗೆ ನಾಯಕನಾಗಿದ್ದು, ರಘು ಭಟ್ ಮತ್ತು ಸುಗುಣ ಓನರ್ ಆಗಿದ್ದಾರೆ. ಎವಿಆರ್ ಟಸ್ಕರ್ಸ್ ತಂಡಕ್ಕೆ ಚೇತನ್ ಸೂರ್ಯ ಕ್ಯಾಪ್ಟನ್ ಆಗಿದ್ದು, ಅರವಿಂದ್ ವೆಂಕಟ್ ರೆಡ್ಡಿ ಓನರ್ ಆಗಿದ್ದಾರೆ. ಬಯೋಟಾಪ್ ಲೈಫ್ ಸೇವಿಯರ್ಸ್ ತಂಡಕ್ಕೆ ಅಲಕಾ ನಂದ ಶ್ರೀನಿವಾಸ್ ನಾಯಕನಾಗಿದ್ದಾರೆ. ಡಾ. ವಿಶ್ವನಾಥ್ ಸಿದ್ದರಾಮರೆಡ್ಡಿ ಮತ್ತು ಪ್ರಸನ್ನ ಓನರ್. ಮೀಡಿಯಾ ಹೌಸ್‌ಗೆ ಅರುಣ್ ರಾಮ್ ಗೌಡ ನಾಯಕನಾಗಿದ್ದು, ಲಕ್ಷ್ಮೀ ಕಾಂತ್ ರೆಡ್ಡಿ ಓನರ್ ಆಗಿದ್ದಾರೆ. ಗೋಲ್ಡನ್ ಈಗಲ್ಗೆ ವಿಹಾನ್ ಕ್ಯಾಪ್ಟನ್ ಆಗಿದ್ದು, ಕುಶಾಲ್ ಗೌಡ ಮಾಲಿಕರಾಗಿದ್ದಾರೆ.