
ತಮನ್ನಾ ಭಾಟಿಯಾ ನಟಿಯಾಗಿ ಜನಪ್ರಿಯವಾಗಿದ್ದೇ ತೆಲುಗು, ತಮಿಳು ಚಿತ್ರರಂಗದ ಮೂಲಕ.

ಅದರಲ್ಲಿಯೂ ತೆಲುಗು ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳ ಭಾಗವಾಗಿದ್ದಾರೆ ತಮ್ಮನಾ ಭಾಟಿಯಾ.

ಆದರೆ ಇನ್ನು ಮುಂದೆ ತೆಲುಗು ಚಿತ್ರರಂಗದ ಬಾಗಿಲು ತಮನ್ನಾ ಭಾಟಿಯಾ ಪಾಲಿಗೆ ಮುಚ್ಚಿದೆ ಎನ್ನಲಾಗುತ್ತಿದೆ.

ಇತ್ತೀಚೆಗಿನ ಸಂದರ್ಶನದಲ್ಲಿ ತಮನ್ನಾ ಭಾಟಿಯಾ, ತೆಲುಗು ಚಿತ್ರರಂಗದ ಹೀರೋಗಿರಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು.

ದಕ್ಷಿಣದ ಚಿತ್ರರಂಗದಲ್ಲಿ ವಿಷಕಾರಿ ಪುರುಷತ್ವವನ್ನು ಸಂಭ್ರಮಿಸಲಾಗುತ್ತದೆ ಎಂದು ತಮನ್ನಾ ಹೇಳಿದ್ದರು.

ಇದೇ ಕಾರಣಕ್ಕೆ ತೆಲುಗು ಚಿತ್ರರಂಗವು ತಮನ್ನಾ ಮೇಲೆ ಸಿಟ್ಟಾಗಿದೆ ಎನ್ನಲಾಗುತ್ತಿದೆ.

ಇನ್ನು ಮುಂದೆ ತಮನ್ನಾಗೆ ಅವಕಾಶ ನೀಡಬಾರದು ಎಂದು ನಿರ್ಮಾಪಕರು, ನಿರ್ಮಾಣ ಸಂಸ್ಥೆಗಳು ತೀರ್ಮಾನಿಸಿವೆ ಎನ್ನಲಾಗುತ್ತಿದೆ.