
ದಳಪತಿ ವಿಜಯ್ ಅವರು ಹೊಸ ಸಿನಿಮಾದ ಘೋಷಣೆ ಮಾಡಿದ್ದು, ಸಿನಿಮಾದ ಹೆಸರು ‘ಗೋಟ್’ (GOAT)

‘ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಸಿನಿಮಾದ ಪೂರ್ತಿ ಹೆಸರು ಇದನ್ನು ಚುಟುಕಾಗಿ ‘ಗೋಟ್’ ಎಂದು ಕರೆಯಲಾಗುತ್ತಿದೆ.

ಈ ಸಿನಿಮಾವು ಫೈಟರ್ ಜೆಟ್ ವಿಮಾನವನ್ನು ಚಲಾಯಿಸುವ ಫೈಟರ್ ಜೆಟ್ ಪೈಲೆಟ್ಗಳ ಕತೆಯನ್ನು ಒಳಗೊಂಡಿದೆ.

‘ಗೋಟ್’ ಸಿನಿಮಾವನ್ನು ಜನಪ್ರಿಯ ನಿರ್ದೇಶಕ ವೆಂಕಟ್ ಪ್ರಭು ನಿರ್ದೇಶನ ಮಾಡಲಿದ್ದಾರೆ.

ಸಿನಿಮಾದಲ್ಲಿ ವಿಜಯ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಪ್ಪನಾಗಿ ಹಾಗೂ ಮಗನಾಗಿ ವಿಜಯ್ ಅವರು ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾದಲ್ಲಿ ವಿಜಯ್ ಜೊತೆಗೆ ಪ್ರಭುದೇವ, ಮೀನಾಕ್ಷಿ ಚೌಧರಿ, ಲೀಲಾ, ಮೋಹನ್, ಜಯರಾಂ ಅವರುಗಳು ಸಹ ಇದ್ದಾರೆ.

ವಿಜಯ್ರ ಈ ಹಿಂದಿನ ಸಿನಿಮಾ ‘ಲಿಯೋ’ ದೊಡ್ಡ ಹಿಟ್ ಆಗಿದೆ. ಸಿನಿಮಾವು ತಮಿಳಿನ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆದಿದೆ.