AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Healthy Food: ಈ ಐದು ಆಹಾರ, ಆಹಾರ ಪದ್ಧತಿಗಳ ಬಗ್ಗೆ ಕಡುಜಾಗ್ರತೆ ವಹಿಸಿ

ನಮ್ಮ ಆರೋಗ್ಯ ಪೋಷಣೆಗೆಂದು ತೆಗೆದುಕೊಳ್ಳುವ ಆಹಾರಗಳ ಪೈಕಿ ಅನೇಕವು ನಮ್ಮ ದೈಹಿಕ ಆರೋಗ್ಯವನ್ನು ಕೊಲ್ಲುವುದಷ್ಟೇ ಅಲ್ಲ, ಮಾನಸಿಕ ಆಹ್ಲಾದತೆಯನ್ನು ಕಸಿದುಬಿಡುತ್ತದೆ. ಇದು ಆರೋಗ್ಯ ಮತ್ತು ಆಹಾರ ತಜ್ಞರ ಜಂಟಿ ಅಭಿಮತ (Good Food) ಎಂಬುದು ಗಮನಾರ್ಹ. ಹಾಗಾಗಿ ಇದರ ಬಗ್ಗೆ ಅಸಡ್ಡೆ ಬೇಡ, ಈಗಿಂದೀಗಲೇ ಇದರ ಬಗ್ಗೆ ಎಚ್ಚರಿಕೆ ವಹಿಸಿ, ಸಾಧ್ಯಾವದಷ್ಟೂ ತ್ಯಜಿಸಿ ನಿಮ್ಮ ಮಾನಸಿಕ-ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ. ಅಂತಹ ಐದು ಆಹಾರಗಳು, ಆಹಾರ ಪದ್ಧತಿಗಳ ಬಗ್ಗೆ ತಿಳಿಯೋಣ ಬನ್ನಿ (Healthy Food).

TV9 Web
| Updated By: ಸಾಧು ಶ್ರೀನಾಥ್​|

Updated on: Mar 03, 2022 | 6:16 AM

Share
ಆಲ್ಕೋಹಾಲ್: ಆರೋಗ್ಯ-ಆಹಾರ ಕ್ರಮದಲ್ಲಿ ಇದು ನಿಜಕ್ಕೂ ದುರಭ್ಯಾಸವೇ ಸರಿ. ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬುದು ನಿಖರ. ಇದು ದೇಹದ ಮೇಲಷ್ಟೇ ಅಲ್ಲ; ಮಾನಸಿಕವಾಗಿಯೂ ಪರಿಣಾಮ ಬೀರಬಲ್ಲದು.

1 / 5
ಉಪ್ಪು: ಉಪ್ಪಿಗಿಂತ ರುಚಿಯಿಲ್ಲ ಎಂಬುದೇನೋ ಸರಿ. ಆದರೆ ಅತಿಯಾದರೆ ಅಮೃತವೂ ವಿಷಯವಾಗಬಲ್ಲದು ಅಲ್ಲವೇ!? ಇದನ್ನು ಹೆಚ್ಚು ತಿಂದಷ್ಟೂ.. ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಎಂಬ ನಾಣ್ಣುಡಿಯಂತೆ ಅದರ ಅಡ್ಡ ಪರಿಣಾಮಗಳನ್ನು ಎದುರಿಸಲೇಬೇಕಾಗುತ್ತದೆ. ಇದು ನೇರವಾಗಿ ರಕ್ತಗತ ಆರೋಗ್ಯ ಸಮಸ್ಯೆ ತರಬಲ್ಲದು. ಬ್ಲಡ್​ ಪ್ರೆಷರ್​ ಎಂಬುದು ರೊಯ್ಯನೇ ಏರುಗತಿಯಲ್ಲಿ ಸಾಗುತ್ತದೆ. ಹಾಗಾಗಿಯೇ ಉಪ್ಪು ರುಚಿಗೆ ತಕ್ಕಷ್ಟು ಮಾತ್ರವೇ ಇರಲಿ.

2 / 5
ಸ್ವೀಟ್ಸ್​ - ಹೆಸರಿಗಷ್ಟೆ ಸಿಹಿ; ಆರೋಗ್ಯಕ್ಕೆ ಕಹಿ ಕಹಿ! ಸಿಹಿ ಪದಾರ್ಥ ಯಾರಿಗೆತಾನೆ ಇಷ್ಟವಿರೋಲ್ಲ ಹೇಳಿ. ಆದರೆ ಸಕ್ಕರೆ ಹೆಚ್ಚಾಗಿರುವ ಸಿಹಿ ಪದಾರ್ಥಗಳು ಖಂಡಿತಾ ಆರೋಗ್ಯಕ್ಕೆ ಮಾರಕವಾಗಬಲ್ಲದು. ಮೈ-ಮನಸ್ಸಿಗೆ ಆ ಕ್ಷಣಕ್ಕೆ ಸಿಹಿ ತರಬಲ್ಲದಾದರೂ ಕಾಲಾಂತರದಲ್ಲಿ ಜೀವನವನ್ನು ಕಹಿಯಾಗಿಸಿಬಿಡುತ್ತದೆ ಎಂದು ಉಚಿತ ಸಲಹೆ ನೀಡುತ್ತಾರೆ ವೈದ್ಯರು.

3 / 5
ಕೆಫಿನ್: ದಿನವೂ ಕಾಫಿ ಅಥವಾ ಚಹಾ ಸೇವನೆ ಬಹುತೇಕ ಮಂದಗೆ ಕಡ್ಡಾಯವಾಗಿರುತ್ತದೆ. ಅದಿಲ್ಲದೆ ದೈನಂದಿನ ಜೀವನ ಮುಂದೆ ಸಾಗದು. ಆದರೆ ಇದರಲ್ಲಿ ಅಡಗಿರುವ ಕೆಫಿನ್ ಅಸಿಡಿಟಿ ಅಥವಾ ಗ್ಯಾಸ್​ ಸಮಸ್ಯೆಯನ್ನು ಸೃಷ್ಟಿಸಿಬಿಡುತ್ತದೆ. ನಿದ್ರಾಹೀನತೆಗೂ ಇದು ಕಾರಣವಾಗುತ್ತದೆ. ಪ್ರತಿ ದಿನ ಹಿತಮಿತವಾಗಿ ಕಾಫಿ ಅಥವಾ ಚಹಾ ಸೇವನೆ ಮಾಡಿದರೆ ಆರೋಗ್ಯಕ್ಕೆಒಳ್ಳೆಯದು ಅನ್ನುತ್ತಾರೆ ಆರೋಗ್ಯ-ಆಹಾರ ತಜ್ಞರು.

4 / 5
ಜಂಕ್ ಫುಡ್​: ಇದು ದೈಹಿಕಕ್ಷಮತೆಯನ್ನೇ ಜಂಕ್​ ಮಾಡಿಬಿಡುವ ಆಹಾರಗಳು. ಈ ಜಂಕ್​ ಆಹಾರ ಪದಾರ್ಥಗಳಲ್ಲಿ ರೀಫೈನ್ಡ್​ ಶುಗರ್​, ಫ್ಯಾಟ್​ ಹೆಚ್ಚಾಗಿರುತ್ತದೆ. ಹಾಗಾಗಿ ಈ ಆಹಾರದ ಪ್ರಭಾವ ಕೇವಲ ಹೊಟ್ಟೆಯ ಮೇಲಷ್ಟೇ ಅಲ್ಲ, ಮೆದುಳಿನ ಮೇಲೂ ಇರುತ್ತದೆ. ಸತತವಾಗಿ ಜಂಕ್ ಫುಡ್​ ತಿನ್ನುತ್ತಾ ಬಂದರೆ ನಮ್ಮಲ್ಲಿ ನಾನಾ ವ್ಯಾಧಿಗಳು ಹುಟ್ಟಿಕೊಳ್ಳುತ್ತವೆ.

5 / 5
ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!

ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್

‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು

ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!

ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ

ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ

ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ

ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ

ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ

ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ