ಕುಡುಕರ ಗಮನಕ್ಕೆ: ಪ್ರತಿದಿನ ಬಿಯರ್ ಕುಡಿಯುವುದು ಒಳ್ಳೆದಂತೆ

| Updated By: ಝಾಹಿರ್ ಯೂಸುಫ್

Updated on: Sep 06, 2021 | 8:01 PM

Health Benefits of Drinking Beer: ಬಿಯರ್ ಕುಡಿಯುವುದರಿಂದ ಕೂಡ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎನ್ನುತ್ತದೆ ಸಂಶೋಧನೆ. ಇತರೆ ಆಲ್ಕೋಹಾಲ್​ ಪಾನೀಯಗಳಿಗೆ ಹೋಲಿಸಿದರೆ ಬಿಯರ್ ಆರೋಗ್ಯಕ್ಕೆ ಅಷ್ಟು ಹಾನಿಕಾರಕ ಅಲ್ಲ.

1 / 6
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಆದರೆ ಕೆಲವೊಂದು ಡ್ರಿಂಕ್ಸ್​ಗಳನ್ನು ಮಿತಿಯಲ್ಲಿ ಕುಡಿದರೆ ಆರೋಗ್ಯಕರ ಪ್ರಯೋಜನಗಳನ್ನು ಸಹ ಪಡೆಯಬಹುದು. ಹಾಗೆಯೇ ಬಿಯರ್ ಕುಡಿಯುವುದರಿಂದ ಕೂಡ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎನ್ನುತ್ತದೆ ಸಂಶೋಧನೆ. ಇತರೆ ಆಲ್ಕೋಹಾಲ್​ ಪಾನೀಯಗಳಿಗೆ ಹೋಲಿಸಿದರೆ ಬಿಯರ್ ಆರೋಗ್ಯಕ್ಕೆ ಅಷ್ಟು ಹಾನಿಕಾರಕ ಅಲ್ಲ. ಹೀಗಾಗಿಯೇ ಕಿಡ್ನಿ ಸ್ಟೋನ್​ ಸೇರಿದಂತೆ ಕೆಲ ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ಡಾಕ್ಟರ್​ಗಳೇ ಬಿಯರ್ ಕುಡಿಯಲು ಸಲಹೆ ನೀಡುತ್ತಾರೆ. ಆದರೆ ಎಲ್ಲವೂ ಮಿತಿಯಲ್ಲಿರಬೇಕು ಎಂಬುದು ಕೂಡ ಗಮನದಲ್ಲಿರಲಿದೆ. ಹಾಗಿದ್ರೆ ಬಿಯರ್ ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು ನೋಡೋಣ.

2 / 6
#1. ಕಿಡ್ನಿ ಸ್ಟೋನ್​ಗೆ ಪರಿಹಾರ: ಮೂತ್ರಪಿಂಡದಲ್ಲಿನ ಕಲ್ಲಿನ ಸಮಸ್ಯೆಗೆ ಬಿಯರ್ ಮನೆಮದ್ದು ಎನ್ನಲಾಗುತ್ತದೆ. ಏಕೆಂದರೆ ಪ್ರತಿದಿನ ಬಿಯರ್ ಕುಡಿಯುವುದರಿಂದ ಕಿಡ್ನಿ ಸ್ಟೋನ್ ನಿಧಾನವಾಗಿ ಮೂತ್ರದ ಮೂಲಕ ಹಾದುಹೋಗುವ ಸಾಧ್ಯತೆಯಿದೆ. ಫಿನ್ಲೆಂಡ್‌ನ ಹೆಲ್ಸಿಂಕಿಯಲ್ಲಿ 27,000 ಜನರ ಮೇಲೆ ನಡೆಸಿದ ಸಂಶೋಧನೆಯಲ್ಲೂ ಇದು ದೃಢಪಟ್ಟಿದೆ. ಈ ಸಂಶೋಧನೆಯಲ್ಲಿ ಬಿಯರ್ ಕುಡಿಯುವುದರಿಂದ ಶೇ.40 ರಷ್ಟು ಕಿಡ್ನಿ ಸ್ಟೋನ್  ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದು ತಿಳಿದು ಬಂದಿದೆ.

3 / 6
#2. ಹೃದಯದ ಆರೋಗ್ಯ: ಹೃದಯದ ಒಳ ಮೇಲ್ಮೈಯಲ್ಲಿ ಕೊಲೆಸ್ಟ್ರಾಲ್ ಮತ್ತು ಇತರ ಕೊಬ್ಬಿನ ಪದಾರ್ಥಗಳು ಸಂಗ್ರಹವಾಗುತ್ತದೆ. ಇದರಿಂದ ಹೃದಯಾಘಾತವಾಗುವ ಸಾಧ್ಯತೆ ಕೂಡ ಇದೆ. ಈ ಬಗ್ಗೆ ಅಧ್ಯಯನ ನಡೆಸಿದ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಬಿಯರ್ ಕುಡಿಯುವುದರಿಂದ ಈ ಅಪಾಯವನ್ನು ದೂರ ಮಾಡಬಹುದು ಎಂದು ತಿಳಿಸಿದೆ.

4 / 6
#3. ಸ್ಟ್ರೋಕ್ ಅಪಾಯ ಕಡಿಮೆ:  ಸಾಮಾನ್ಯವಾಗಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದಾಗ ಪಾರ್ಶ್ವವಾಯು ಉಂಟಾಗುತ್ತದೆ. ಇದು ಮೆದುಳಿಗೆ ರಕ್ತ ಮತ್ತು ಆಮ್ಲಜನಕದ ಹರಿವನ್ನು ತಡೆಯುತ್ತದೆ. ಆದರೆ ಬಿಯರ್ ಕುಡಿಯುವುದರಿಂದ, ರಕ್ತ ಪರಿಚಲನೆ ಮಾಡುವ ಅಪಧಮನಿಗಳು ಮೃದುವಾಗುತ್ತವೆ ಮತ್ತು ರಕ್ತದ ಪರಿಚಲನೆ ವೇಗವಾಗಿಸಿ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಸ್ಟ್ರೋಕ್ ಬರುವ ಸಮಸ್ಯೆಯನ್ನು ಬಿಯರ್ ಕುಡಿಯುವುದರಿಂದ ದೂರ ಮಾಡಬಹುದು ಎನ್ನುತ್ತದೆ ಸಂಶೋಧನೆ.

5 / 6
 #4. ಮೂಳೆಗಳ ಬೆಳವಣಿಗೆ: ಉತ್ತಮ ಆರೋಗ್ಯಕ್ಕಾಗಿ ಸ್ನಾಯುಗಳು ಕೂಡ ಬಲವಾಗಿರಬೇಕು. ಹೀಗೆ ಮೂಳೆಗಳನ್ನು ಬೆಳವಣಿಗೆ ಸಹಕಾರಿಯಾಗಿರುವ ಅಂಶ ಕೂಡ ಬಿಯರ್​ನಲ್ಲಿದೆ.  ಬಿಯರ್​ನಲ್ಲಿ ಸಿಲಿಕಾನ್ ಎಂಬ ಅಂಶವಿದ್ದು, ಇದು ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.  ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯು ನೀವು ದಿನಕ್ಕೆ ಒಂದರಿಂದ ಎರಡು ಗ್ಲಾಸ್ ಬಿಯರ್ ಕುಡಿದರೆ, ಮೂಳೆ ಮುರಿತದ ಸಾಧ್ಯತೆಗಳು ಕಡಿಮೆ ಎಂಬುದನ್ನು ಸೂಚಿಸಿದೆ.

6 / 6
#5. ಮಧುಮೇಹದ ಅಪಾಯ ಕಡಿಮೆ: ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ರೋಗಗಳಲ್ಲಿ ಮಧುಮೇಹ ಕೂಡ ಒಂದು. ಆದರೆ ಈ ರೋಗದ ಅಪಾಯವನ್ನು ಕಡಿಮೆ ಮಾಡುವಲ್ಲಿ ಬಿಯರ್ ಸಹಕಾರಿ. 2011 ರಲ್ಲಿ  38,000 ಮಧ್ಯ ವಯಸ್ಕರ ಮೇಲೆ ಹೊವಾರ್ಡ್ ಅಧ್ಯಯನ ತಂಡವು ನಡೆಸಿದ ಸಂಶೋಧನೆಯಲ್ಲಿ ದಿನಕ್ಕೆ ಒಂದರಿಂದ ಎರಡು ಗ್ಲಾಸ್ ಬಿಯರ್ ಕುಡಿಯುವುದರಿಂದ ಟೈಪ್ -2 ಡಯಾಬಿಟಿಸ್ ಅಪಾಯವನ್ನು ಶೇ. 25ರಷ್ಟು ಕಡಿಮೆ ಮಾಡುತ್ತದೆ ಎಂದು ತಿಳಿಸಿದೆ. ಇದಕ್ಕೆ ಬಹುಮುಖ್ಯ ಕಾರಣವೆಂದರೆ ಬಿಯರ್‌ನಲ್ಲಿರುವ ಆಲ್ಕೋಹಾಲ್ ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ, ಇದು ಮಧುಮೇಹವನ್ನು ತಡೆಯಲು ಸಹಾಯ ಮಾಡುತ್ತದೆ.