Updated on: Oct 17, 2022 | 7:00 AM
The most ancient temples in the world
ಹಾಲ್-ಸಫ್ಲೀನಿಯ ಹೈಪೋಜಿಯಮ್: ಯುರೋಪಿನ ಮಾಲ್ಟಾದಲ್ಲಿರುವ ಹೈಪೋಜಿಯಂ ದೇವಾಲಯವನ್ನು ಸುಮಾರು ಕ್ರಿಸ್ತ ಪೂರ್ವ 2500ರಲ್ಲಿ ನಿರ್ಮಿಸಲಾಯಿತು. ಇದನ್ನು ಭೂಗತವಾಗಿ ನಿರ್ಮಿಸಲಾಗಿದೆ. ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ.
ಸ್ಟೋನ್ಹೆಂಜ್, ಇಂಗ್ಲೆಂಡ್: ನೈಋತ್ಯ ಇಂಗ್ಲೆಂಡ್‌ನಲ್ಲಿರುವ ಈ ದೇವಸ್ಥಾನವನ್ನು ಕ್ರಿಸ್ತ ಪೂರ್ವ 3000ರಲ್ಲಿ ನಿರ್ಮಿಸಲಾಯಿತು. ಇದು ವಿಶ್ವದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
ಅಪೊಲೊ ದೇವಾಲಯ, ಗ್ರೀಸ್: ಅಪೊಲೊ ದೇವಾಲಯವು ಗ್ರೀಸ್‌ನ ಡೆಲ್ಫಿಯಲ್ಲಿದೆ. ಇದನ್ನು ಕ್ರಿಸ್ತ ಪೂರ್ವ 330ರಲ್ಲಿ ನಿರ್ಮಿಸಲಾಗಿದೆ.
ಮುಂಡೇಶ್ವರಿ ದೇವಿ ದೇವಸ್ಥಾನ, ಬಿಹಾರ : ಬಿಹಾರದ ಕೈಮೂರ್‌ನಲ್ಲಿರುವ ಮುಂಡೇಶ್ವರಿ ದೇವಿ ದೇವಸ್ಥಾನವನ್ನು ವಿಶ್ವದ ಅತ್ಯಂತ ಹಳೆಯ ಹಿಂದೂ ದೇವಾಲಯ ಎಂದು ನಂಬಲಾಗಿದೆ. ಕ್ರಿಸ್ತ ಪೂರ್ವ 625 ರಲ್ಲಿ ಗುಪ್ತರ ಅವಧಿಯಲ್ಲಿ ನಿರ್ಮಿಸಲಾಯಿತು.
ಒಂದನೇ ಸೇಟಿ ದೇವಾಲಯ: ಈ ದೇವಾಲಯವು 19 ನೇ ರಾಜವಂಶಸ್ಥ ರಾಜ ಒಂದನೇ ಸೇಟಿಯದ್ದಾಗಿದೆ. ಈ ದೇವಸ್ಥಾನವನ್ನು ರಾಜ ಒಂದನೇ ಸೇಟಿ ಮತ್ತು ಅವನ ಮಗ ಎರಡನೇ ರಾಮ್ಸೆಸ್ ನಿರ್ಮಿಸಿದರು. ಅಬಿಡೋಸ್‌ನಲ್ಲಿ ನೈಲ್ ನದಿಯ ದಡದಲ್ಲಿದೆ
ಗೋಬೆಕ್ಲಿ ಟೆಪೆ, ಟರ್ಕಿ: ಸ್ಟೋನ್‌ಹೆಂಜ್ ದೇವಾಲಯಕ್ಕಿಂತ 6000 ವರ್ಷಗಳ ಹಿಂದೆ ನಿರ್ಮಿಸಲಾದ ಈ ದೇವಾಲಯವು ಟರ್ಕಿಯಲ್ಲಿದೆ.