- Kannada News Photo gallery There are many meanings hidden in this embrace of a soul-pleasing partner
ಮನಸ್ಸಿಗೆ ಹಿತವೆನಿಸುವ ಸಂಗಾತಿಯ ಈ ಆಲಿಂಗನದಲ್ಲಿ ಅಡಗಿದೆ ನಾನಾ ಅರ್ಥ
ಫೆಬ್ರವರಿ ತಿಂಗಳಿನಲ್ಲಿ ಬರುವ ಪ್ರೇಮಿಗಳ ವಾರದಲ್ಲಿ ಅಪ್ಪುಗೆಯ ದಿನ ಕೂಡ ಒಂದು. ಅಪ್ಪುಗೆಯು ಇಬ್ಬರೂ ವ್ಯಕ್ತಿಗಳ ನಡುವಿನ ಪ್ರೀತಿಯ ವ್ಯಕ್ತಪಡಿಸುವ ರೀತಿ. ದುಃಖದಲ್ಲಿರುವ ವ್ಯಕ್ತಿಯನ್ನು ಆಲಿಂಗಿಸಿದಾಗ ಅವರ ನೋವಿಗೆ ಸಾಂತ್ವನ ಸಿಗುತ್ತದೆ. ಇಷ್ಟವಾದವರನ್ನು ತಬ್ಬಿಕೊಳ್ಳುವುದು ಅವರೆಷ್ಟು ಮುಖ್ಯ ಎನ್ನುವುದನ್ನು ತಿಳಿಸುತ್ತದೆ. ಆದರೆ ಈ ಅಪ್ಪುಗೆಯಲ್ಲಿ ನಾನಾ ವಿಧಗಳಿದ್ದು ಒಂದೊಂದು ಅಪ್ಪುಗೆಯ ಒಂದೊಂದು ಅರ್ಥವನ್ನು ನೀಡುತ್ತದೆ. ನಿಮ್ಮ ಸಂಗಾತಿಯು ಅಥವಾ ಪ್ರೇಮಿಯು ನಿಮ್ಮನ್ನು ಅಪ್ಪಿಕೊಳ್ಳುವ ರೀತಿಯಿಂದಲೇ ಅವರಿಗೆ ನಿಮ್ಮ ಮೇಲೆ ಇರುವ ಭಾವನೆಯನ್ನು ತಿಳಿದುಕೊಳ್ಳಬಹುದು.
Updated on: Feb 12, 2024 | 2:30 PM

ಪ್ರೇಮಿಗಳ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಂದು ದಿನವು ಒಂದೊಂದು ವಿಶೇಷತೆಗಳಿಂದ ಕೂಡಿದೆ. ಪ್ರತಿ ದಿನವು ಪ್ರೇಮಿಗಳು ವಿಶೇಷವಾಗಿ ಸೆಲೆಬ್ರೇಟ್ ಮಾಡುವ ಮೂಲಕ ಸಂಭ್ರಮಿಸುತ್ತಾರೆ. ಫೆಬ್ರವರಿ 12 ರ ಅಪ್ಪುಗೆಯ ದಿನವು ಸಂಗಾತಿ ಅಥವಾ ಪ್ರೇಮಿಗಳ ನಡುವಿನ ದೈಹಿಕ ಆಕರ್ಷಣೆಯನ್ನು ವ್ಯಕ್ತಪಡಿಸಲು ಇರುವ ದಿನವಾಗಿದೆ. ಈ ಅಪ್ಪುಗೆಯು ಸಣ್ಣ ಪುಟ್ಟ ಮುನಿಸುಗಳನ್ನು ಮರೆಸಿ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

ಬಿಗಿದಪ್ಪುಗೆ : ಸುಮಾರು ಸಮಯದ ಬಳಿಕ ಇಬ್ಬರೂ ಪ್ರೇಮಿಗಳು ಸಿಕ್ಕಾಗ ಬಿಗಿದಪ್ಪಿಕೊಳ್ಳುವುದು ಸಂಬಂಧದ ಆಳವನ್ನು ಹಾಗೂ ಭಾವನೆಗಳನ್ನು ಹೇಳುತ್ತವೆ. ಈ ಅಪ್ಪುಗೆಯು ಒಬ್ಬರು ಇನ್ನೊಬ್ಬರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎನ್ನುವುದನ್ನು ತಿಳಿಸುತ್ತದೆ. ಸಂಬಂಧದ ಆಳವನ್ನು ಅರ್ಥ ಮಾಡಿಕೊಳ್ಳಬಹುದು.

ಹಿಂಬದಿಯ ಅಪ್ಪುಗೆ : ಸಂಗಾತಿಯನ್ನು ಹಿಂಬದಿಯನ್ನು ಅಪ್ಪಿಕೊಳ್ಳುವುದು ರೋಮ್ಯಾಂಟಿಕ್ ಅನುಭವವನ್ನು ತಂದುಕೊಡುತ್ತದೆ. ಈ ಅಪ್ಪುಗೆಯು ಸಂಗಾತಿ ತುಂಬಾನೇ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದಾಗ ಸಹಜವಾಗಿ ಕಾಣಿಸುತ್ತದೆ. ಈ ಅಪ್ಪುಗೆಯಿಂದ ಸಂಗಾತಿಯು ದೈಹಿಕ ಆಸೆಯನ್ನು ವ್ಯಕ್ತಪಡಿಸುತ್ತಾರೆ ಎನ್ನುವುದು ಅರ್ಥೈಸಿಕೊಳ್ಳಬಹುದಾಗಿದೆ

ಮಡಿಲಿನಲ್ಲಿ ಕೂರಿಸಿ ತಬ್ಬಿಕೊಳ್ಳುವುದು : ಅಪ್ಪುಗೆಯು ಪ್ರೀತಿಯನ್ನು ತೋರಿಸುತ್ತದೆಯಾದರೂ ದೈಹಿಕ ಆಸಕ್ತಿಯನ್ನು ವ್ಯಕ್ತಪಡಿಸಲು ಸಹಕಾರಿಯಾಗಿದೆ. ಸಂಗಾತಿ ಅಥವಾ ಪ್ರೇಮಿಯು ಮಡಿಲಿನಲ್ಲಿ ಕೂರಿಸಿಕೊಂಡು ಅಪ್ಪಿಕೊಂಡರೆ ಅದು ದೈಹಿಕ ಆಸಕ್ತಿಯನ್ನು ತೋರಿಸುತ್ತದೆ. ಈ ಆಲಿಂಗನದಿಂದ ಒಬ್ಬರಿಗೊಬ್ಬರು ಹತ್ತಿರವಾಗಲು ಸಾಧ್ಯ.

ಸೈಡ್ ಅಪ್ಪುಗೆ: ಒಂದು ಬದಿಯಲ್ಲಿ ತಬ್ಬಿಕೊಳ್ಳುವುದು ಇಬ್ಬರಿಗೂ ಕಂಫರ್ಟ್ ಅನುಭವವನ್ನು ನೀಡುತ್ತದೆ. ಭವಿಷ್ಯದ ಬಗ್ಗೆ ಇಬ್ಬರೂ ಕೂತು ಚರ್ಚಿಸುವಾಗ ಇಬ್ಬರೂ ಒಂದು ಬದಿಯಲ್ಲಿ ಅಪ್ಪಿಕೊಂಡು ಮಾತನಾಡಿದರೆ ಮಾತುಕತೆಯಲ್ಲಿ ಇಬ್ಬರೂ ಬೆರೆತುಹೋಗಬಹುದು.

ತೋಳಿನಲ್ಲಿ ತಲೆಹಿಟ್ಟು ಪ್ರೀತಿಯ ಅಪ್ಪುಗೆ : ಸಾಮಾನ್ಯವಾಗಿ ಈ ಅಪ್ಪುಗೆಯ ಎಲ್ಲರೂ ಕೂಡ ಸಂಗಾತಿ ಅಥವಾ ಪ್ರೇಮಿಗಳು ಇಷ್ಟ ಪಡುತ್ತಾರೆ. ಈ ಅಪ್ಪುಗೆಯಲ್ಲಿ ಒಬ್ಬರ ತೋಳಿಗೆ ಮತ್ತೊಬ್ಬರು ತಲೆಹಿಟ್ಟು ಆಲಿಂಗಿಸಿದರೆ ಸಂಗಾತಿಯು ಸುರಕ್ಷಿತ ಭಾವವನ್ನು ಅನುಭವಿಸುತ್ತಾರೆ. ಈ ರೀತಿ ತಬ್ಬಿಕೊಳ್ಳುವುದರಿಂದ ನೀವೆಷ್ಟು ಮುಖ್ಯ ಎನ್ನುವುದನ್ನು ತಿಳಿಸುತ್ತದೆ.

ಇಬ್ಬರೂ ತೋಳಿನಲ್ಲಿ ಬಂಧಿಯಾಗುವುದು : ಸಂಗಾತಿಗಳಿಬ್ಬರೂ ತೋಳಿನಲ್ಲಿ ಬಂಧಿಯಾಗುವುದರಿಂದ ಈ ಅಪ್ಪುಗೆಯು ಎನರ್ಜಿ ಬೂಸ್ಟರ್ ನಂತೆಯೇ ಕೆಲಸ ಮಾಡುತ್ತದೆ. ಎಷ್ಟೇ ಬ್ಯುಸಿಯಿದ್ದರೂ ದಿನದಲ್ಲಿ ಒಮ್ಮೆಯಾದರೂ ಹೀಗೆ ಅಪ್ಪಿಕೊಂಡರೆ ನಾನು ಸದಾ ನಿನ್ನೊಂದಿಗೆ ಇದ್ದೇನೆ ಎನ್ನುವುದನ್ನು ಹೇಳುತ್ತದೆ




