
ವಿಕ್ಕಿ ಕೌಶಲ್- ಕತ್ರಿನಾ ಕೈಫ್, ಪ್ರಸ್ತುತ ಈರ್ವರೂ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಹೇಗೆ ಪ್ರೇಮಿಗಳ ದಿನವನ್ನು ಆಚರಿಸಲಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಕುತೂಹಲ.

ಮೌನಿ ರಾಯ್- ಸೂರಜ್ ನಂಬಿಯಾರ್, ಇತ್ತೀಚೆಗಷ್ಟೇ ವಿವಾಹವಾಗಿದ್ದ ಕೆಜಿಎಫ್ ಬೆಡಗಿ ಮೌನಿ ರಾಯ್, ಸದ್ಯ ಪತಿಯೊಂದಿಗೆ ಸುತ್ತಾಡುತ್ತಿದ್ದಾರೆ.

ಬರೋಬ್ಬರಿ 11 ವರ್ಷಗಳ ಕಾಲ ಪ್ರೇಮಿಗಳಾಗಿ ಸುತ್ತಾಡಿದ್ದ ರಾಜ್ಕುಮಾರ್ ರಾವ್- ಪತ್ರಲೇಖಾ ಈ ಬಾರಿ ಮೊದಲ ಬಾರಿಗೆ ದಂಪತಿಗಳಾಗಿ ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದಾರೆ.

ಯಾಮಿ ಗೌತಮ್- ಆದಿತ್ಯ ಧರ್ ಕೂಡ ಇದೇ ಮೊದಲ ಬಾರಿಗೆ ವಿವಾಹವಾದ ನಂತರ ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದಾರೆ.

ಅಂಕಿತಾ ಲೋಖಂಡೆ- ವಿಕ್ಕಿ ಜೈನ್ಗೆ ಕೂಡ ಇದು ವಿವಾಹದ ನಂತರ ಮೊದಲ ಪ್ರೇಮಿಗಳ ದಿನ.

ಕರಿಷ್ಮಾ ತನ್ನಾ- ವರುಣ್ ಬಂಗೇರ ತೀರಾ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇವರಿಗೂ ಕೂಡ ಇದು ಮೊದಲ ಪ್ರೇಮಿಗಳ ದಿನ.