Kannada News » Photo gallery » These Five Women are like your Mother Do not insult them keep them happy with respect
Chanakya Niti: ಈ 5 ಸ್ತ್ರೀಯರು ನಿಮ್ಮ ತಾಯಿಗೆ ಸಮಾನ; ಅವರನ್ನು ಅವಮಾನಿಸಬೇಡಿ- ಚಾಣಕ್ಯ ನೀತಿ
ಆಚಾರ್ಯ ಚಾಣಕ್ಯ ಬಹಳಷ್ಟು ಸನ್ನಿವೇಶಗಳನ್ನು ಎದುರಿಗಿರಿಸಿ ವಿಚಾರವನ್ನು ತಿಳಿಸಿದ್ದಾನೆ. ಅದನ್ನು ಸದಾ ನೆನಪಿನಲ್ಲಿ ಇರಿಸಿಕೊಂಡು, ಅಳವಡಿಸಿಕೊಳ್ಳಲು ಕೂಡ ಪ್ರಯತ್ನಿಸಿದರೆ ಬಹುತೇಕ ಸಮಸ್ಯೆಗಳನ್ನು ತಡೆಯಬಹುದು. ಎಚ್ಚರವಾಗಿ ಇರಬಹುದು.
ರಾಜನ ಹೆಂಡತಿಯು ತಾಯಿಯಂತೆ ಇರುತ್ತಾಳೆ ಏಕೆಂದರೆ ರಾಜನು ಪ್ರಜೆಗಳ ರಕ್ಷಕನಾಗಿದ್ದಾನೆ. ಪೋಷಕನನ್ನು, ರಾಜ್ಯ ಪೊರೆಯುವವನನ್ನು ತಂದೆಯಂತೆ ಪರಿಗಣಿಸಿದರೆ, ಅವನ ಹೆಂಡತಿಯನ್ನು ತಾಯಿಯಂತೆ ಕಾಣಬೇಕು. ಆದ್ದರಿಂದ ನಿಮ್ಮ ತಾಯಿಯಂತೆ ನಿಮ್ಮ ರಾಜನ ಪತ್ನಿಯನ್ನು ಯಾವಾಗಲೂ ಗೌರವಿಸಿ.
1 / 5
ಗುರು ಕೂಡ ಪ್ರತಿಯೊಬ್ಬ ಶಿಷ್ಯನಿಗೆ ಮಾರ್ಗದರ್ಶನ ಮಾಡುವ ಮೂಲಕ ಜೀವನದ ದಾರಿದೀಪವಾಗುತ್ತಾರೆ. ಉತ್ತಮ ಸಂಸ್ಕಾರವನ್ನು ರೂಢಿಸಿಕೊಳ್ಳಲು ಸಹಾಯ ಮಾಡುತ್ತಾರೆ. ಆದ್ದರಿಂದಲೇ ಅವರನ್ನು ಕೂಡ ತಂದೆಗೆ ಹೋಲಿಕೆ ಮಾಡಲಾಗಿದೆ, ಗುರುವಿನ ಗೌರವ ತಂದೆಗೆ ಸಮಾನ. ಆದ್ದರಿಂದ ಗುರುವಿನ ಹೆಂಡತಿ ತಾಯಿಗೆ ಸಮಾನ. ಅವರನ್ನು ಅವಮಾನಿಸುವ ತಪ್ಪು ಎಂದೂ ಮಾಡಬೇಡಿ.
2 / 5
ನಿಮ್ಮ ಸ್ನೇಹಿತ ನಿಮಗೆ ಸಹೋದರನಂತೆ. ಅವರ ಪತ್ನಿ ನಿಮಗೆ ಅತ್ತಿಗೆಯಂತೆ. ಅತ್ತಿಗೆಗೆ ತಾಯಿಯ ಸ್ಥಾನವನ್ನು ನೀಡಲಾಗಿದೆ. ಆದ್ದರಿಂದ, ನಿಮ್ಮ ಸ್ನೇಹಿತನ ಹೆಂದತಿಯನ್ನು ತಾಯಿಯಂತೆ ಗೌರವದಿಂದ ಕಾಣುವ ಮೂಲಕ ಎಂದೂ ಗೌರವ ತೋರಿರಿ.
3 / 5
ನಿಮ್ಮ ಪತ್ನಿ ನಿಮ್ಮ ಜೀವನ ಸಂಗಾತಿ ಆಗಿದ್ದಾಳೆ. ನೀವು ದುರ್ಬಲರು ಆಗಿರುವಾಗ ಅವರು ನಿಮ್ಮನ್ನು ನಿಮ್ಮ ತಾಯಿಯಂತೆ ನೋಡಿಕೊಳ್ಳುತ್ತಾರೆ. ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ. ನಿಮ್ಮ ಬಗ್ಗೆ ಕಾಳಜಿ ಇಟ್ಟುಕೊಂಡು ನಿಮ್ಮ ಜೀವನದ ಪ್ರಗತಿಗಾಗಿ ಪ್ರಾರ್ಥಿಸುತ್ತಾರೆ. ಹಾಗಾಗಿ ಹೆಂಡತಿಯನ್ನು ಸಹ ತಾಯಿಯಂತೆಯೇ ಗೌರವದಿಂದ ಕಾಣಬೇಕು.
4 / 5
ಜನ್ಮ ನೀಡಿದ ತಾಯಿಯಿಂದ ಮಾತ್ರ ನಿಮ್ಮ ಅಸ್ತಿತ್ವ ಇದೆ. ನಿಮ್ಮ ಗುರಿಯತ್ತ ನಿಮ್ಮನ್ನು ಕರೆದೊಯ್ಯುವ ಮಾರ್ಗವನ್ನು ಅವರು ತೋರಿಸುತ್ತಾರೆ. ಅಂತಹ ತಾಯಿ ಪೂಜ್ಯರು. ಅವರನ್ನು ಯಾವತ್ತೂ ಗೌರವದಿಂದ ಕಾಣಬೇಕು.