- Kannada News Photo gallery These spiritual plants helps to over come stress and will bring positivity in house
ಮನೆಯಲ್ಲಿ ನೆಮ್ಮದಿ ಮತ್ತು ಆರೋಗ್ಯ ತುಂಬಿರಲು ಈ ಗಿಡಗಳನ್ನು ನೆಡುವುದು ಸೂಕ್ತ
ಅನಿಯಂತ್ರಿತ ಆಲೋಚನೆಗಳಿಂದ ದೂರವಿರಲು ಶಾಂತಿಯುತ ವಾತಾವರಣ ಇರಬೇಕು. ಖಿನ್ನತೆಯನ್ನು ಹೋಗಲಾಡಿಸಲು ಈ ಗಿಡಗಳನ್ನು ಮನೆಯಲ್ಲಿ ನೆಡುವುದು ಸೂಕ್ತ.
Updated on: Aug 17, 2021 | 8:21 AM

These spiritual plants helps to over come stress and will bring positivity in house

These spiritual plants helps to over come stress and will bring positivity in house

ಆರ್ಕಿಡ್ ಹೂವು ಒತ್ತಡವನ್ನು ನಿವಾರಿಸುತ್ತದೆ ಮತ್ತು ನಿಮಗೆ ವಿಶ್ರಾಂತಿಗೆ ಸಹಾಯ ಮಾಡುತ್ತದೆ. ಇದನ್ನು ಹೊರತುಪಡಿಸಿದರೆ ಆರ್ಕಿಡ್ ಗಿಡ ನೋಡಲು ತುಂಬಾ ಸುಂದರವಾಗಿರುತ್ತದೆ. ಸರಿಯಾದ ಸೂರ್ಯನ ಬೆಳಕನ್ನು ಪಡೆಯುವ ಮತ್ತು ಬೆಳಕಿರುವ ಯಾವುದೇ ಕೋಣೆಯಲ್ಲಿ ನೀವು ಈ ಗಿಡವನ್ನು ಇರಿಸಬಹುದು.

ಅಲೋವೆರಾ ಅತ್ಯಂತ ಮುಖ್ಯವಾದ ಗಿಡ. ಹೆಚ್ಚಿನ ಜನರು ತಮ್ಮ ಮುಖ, ಕೂದಲು ಮತ್ತು ತುರಿಕೆಯಂತಹ ಕಾಯಿಲೆಗಳಿಗೆ ಬಳಸುತ್ತಾರೆ. ಆದರೆ ಈ ಸಸ್ಯವು ಗಾಳಿಯನ್ನು ಶುದ್ಧಗೊಳಿಸುತ್ತದೆ. ಅಲೋವೆರಾ ಸಸ್ಯವನ್ನು ಎಲ್ಲಾ ಕೋಣೆಗಳಲ್ಲಿ ಇರಿಸಬಹುದು, ಆದರೆ ವಿಶೇಷವಾಗಿ ಮಲಗುವ ಕೋಣೆಯಲ್ಲಿ ಇಡುವುದು ಉತ್ತಮ. ಮನೆಯಲ್ಲಿ ನೆಮ್ಮದಿ ಹೆಚ್ಚಳಕ್ಕೆ ಇದು ಕಾರಣವಾಗುತ್ತದೆ.

ಮಲ್ಲಿಗೆ ಹೂವುಗಳ ಪರಿಮಳ ಬಹಳ ಆಕರ್ಷಕವಾಗಿದೆ. ಮಲ್ಲಿಗೆ ಗಿಡವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ವಿಶ್ವದ ಅನೇಕ ದೇಶಗಳಲ್ಲಿ ಈ ಗಿಡವನ್ನು ಪೂಜಿಸಲಾಗುತ್ತದೆ. ಮಲ್ಲಿಗೆ ಹೂವನ್ನು ವಿಶ್ವಾಸ, ಪ್ರೀತಿ ಮತ್ತು ಸಂಬಂಧವನ್ನು ಬಲಪಡಿಸುವ ಸಂಕೇತವಾಗಿ ಪರಿಗಣಿಸಲಾಗಿದೆ. ಈ ಸಸ್ಯಗಳನ್ನು ನೆಡುವುದರಿಂದ ರಾತ್ರಿಯಲ್ಲಿ ಉತ್ತಮ ಕನಸುಗಳು ಬರುತ್ತವೆ ಮತ್ತು ಒತ್ತಡ ದೂರವಾಗುತ್ತದೆ.

ಭಾರತೀಯ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನವಿದೆ. ತುಳಸಿಯನ್ನು ದೇವತೆಯಾಗಿ ಪೂಜಿಸಲಾಗುತ್ತದೆ. ತುಳಸಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ತುಳಸಿ ಗಿಡವನ್ನು ಮನೆಯಲ್ಲಿ ಇಡುವುದರಿಂದ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುವುದಲ್ಲದೆ ಒತ್ತಡ ಕಡಿಮೆಯಾಗುತ್ತದೆ. ಈ ಗಿಡವನ್ನು ಬೆಳಿಗ್ಗೆ ನೋಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಪುಟ್ಟ ಪಾಟ್ನಲ್ಲಿ ಈ ಗಿಡ ಹಾಕಬಹುದು.




