Thug Life: ಕಮಲ್ ಹಾಸನ್ ಅವರ ‘ಥಗ್ ಲೈಫ್’ ಹೇಗಿದೆ ನೋಡಿ..
‘ಥಗ್ ಲೈಫ್’ ಅನ್ನೋದು ಚಿತ್ರದ ಶೀರ್ಷಿಕೆ. ಕಮಲ್ ಹಾಸನ್ ಅವರು ಮಾಸ್ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ಟೈಟಲ್ ಟೀಸರ್ ನೋಡಿದ ಅನೇಕರಿಗೆ ಸಿನಿಮಾ ಬಗ್ಗೆ ಇರೋ ನಿರೀಕ್ಷೆ ಹೆಚ್ಚಿದೆ. ಈ ಸಿನಿಮಾ ನೋಡಲು ಫ್ಯಾನ್ಸ್ ಕಾದಿದ್ದಾರೆ.
1 / 6
ಕಮಲ್ ಹಾಸನ್ ಹಾಗೂ ಮಣಿರತ್ನಂ ಅವರು ಒಟ್ಟಾಗಿ ಕೆಲಸ ಮಾಡುತ್ತಿರುವ ಚಿತ್ರಕ್ಕೆ ಟೈಟಲ್ ಫೈನಲ್ ಆಗಿದೆ. ಕಮಲ್ ಹಾಸನ್ ಬರ್ತ್ಡೇ (ನವೆಂಬರ್ 7) ಪ್ರಯುಕ್ತ ಶೀರ್ಷಿಕೆಯ ಟೀಸರ್ ಬಿಡುಗಡೆ ಮಾಡಲಾಗಿದೆ. ಇದು ಎಲ್ಲರ ಗಮನ ಸೆಳೆದಿದೆ.
2 / 6
‘ಥಗ್ ಲೈಫ್’ ಅನ್ನೋದು ಚಿತ್ರದ ಶೀರ್ಷಿಕೆ. ಕಮಲ್ ಹಾಸನ್ ಅವರು ಮಾಸ್ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ಟೈಟಲ್ ಟೀಸರ್ ನೋಡಿದ ಅನೇಕರಿಗೆ ಸಿನಿಮಾ ಬಗ್ಗೆ ಇರೋ ನಿರೀಕ್ಷೆ ಹೆಚ್ಚಿದೆ. ಈ ಸಿನಿಮಾ ನೋಡಲು ಫ್ಯಾನ್ಸ್ ಕಾದಿದ್ದಾರೆ.
3 / 6
ಕಮಲ್ ಹಾಸನ್ ಮಾಡುತ್ತಿರುವ ಪಾತ್ರದ ಹೆಸರು ರಂಗರಾಯ ಶಕ್ತಿವೇಲ್ ನಾಯಕ. ಕಮಲ್ ಹಾಸನ್ ಅವರ ಪಾತ್ರದ ಲುಕ್ ಸಾಕಷ್ಟು ಗಮನ ಸೆಳೆದಿದೆ. ಕೆಲವೇ ಗಂಟೆಗಳಲ್ಲಿ ಟೀಸರ್ ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ.
4 / 6
ಕಮಲ್ ಹಾಸನ್ ಜೊತೆ ತ್ರಿಷಾ ಕೃಷ್ಣನ್, ದುಲ್ಕರ್ ಸಲ್ಮಾನ್ ಹಾಗೂ ಜಯಮ್ ರವಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಮುಂದಿನ ವರ್ಷ ಸಿನಿಮಾ ರಿಲೀಸ್ ಆಗಲಿದೆ.
5 / 6
ಕಮಲ್ ಹಾಸನ್ ಅವರು ದರೋಡೆಕೋರನ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಅವರ ವೇಷಭೂಷಣ ಆ ರೀತಿಯಲ್ಲಿ ಕಾಣಿಸಿದೆ. ಬರ್ತ್ಡೇ ದಿನ ಕಮಲ್ ಹಾಸನ್ ಅವರಿಗೆ ಸಿಕ್ಕ ಅತ್ಯುತ್ತಮ ಉಡುಗೊರೆ ಇದು ಎಂಬುದು ಅಭಿಮಾನಿಗಳ ಅಭಿಪ್ರಾಯ.
6 / 6
‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದ ಮೂಲಕ ಮಣಿರತ್ನಂ ಅವರು ದೊಡ್ಡ ಗೆಲುವು ಕಂಡಿದ್ದಾರೆ. ಕಮಲ್ ಹಾಸನ್ ಜೊತೆ ಅವರು ಕೈ ಜೋಡಿಸಿದಾಗ ಕುತೂಹಲ ಸೃಷ್ಟಿ ಆಗಿತ್ತು. ಈ ಕುತೂಹಲ ಈಗ ಹೆಚ್ಚಿದೆ.
Published On - 12:09 pm, Tue, 7 November 23