‘ನೀರ್ ದೋಸೆ’ ಚಿತ್ರದ ಬಳಿಕ ಮತ್ತೊಮ್ಮೆ ‘ನವರಸ ನಾಯಕ’ ಜಗ್ಗೇಶ್ ಮತ್ತು ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಷನ್ನಲ್ಲಿ ‘ತೋತಾಪುರಿ’ ಸಿನಿಮಾ ಮೂಡಿಬಂದಿದೆ. ಈ ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿ.
‘ತೋತಾಪುರಿ’ ಚಿತ್ರದ ‘ಬಾಗ್ಲು ತೆಗಿ ಮೇರಿ ಜಾನ್..’ ಹಾಡು ಸೂಪರ್ ಹಿಟ್ ಆಗಿದೆ. ಯೂಟ್ಯೂಬ್ನಲ್ಲಿ ಈ ಹಾಡನ್ನು ಈವರೆಗೆ 3.54 ಮಿಲಿಯನ್, ಅಂದರೆ 35 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಮಾಡಿದ್ದಾರೆ ಸಿನಿಪ್ರಿಯರು. ಇದು ತಂಡದ ಸಂತಸಕ್ಕೆ ಕಾರಣ ಆಗಿದೆ.
ಈ ಹಾಡಿಗೆ ವಿಜಯ್ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಅನೂಪ್ ಸಿಳೀನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಮುರಳಿ ಅವರ ನೃತ್ಯ ನಿರ್ದೇಶನದಲ್ಲಿ ‘ಬಾಗ್ಲು ತೆಗಿ ಮೇರಿ ಜಾನ್..’ ಹಾಡು ಸಖತ್ ತಮಾಷೆಯಾಗಿ ಮೂಡಿಬಂದಿದೆ.
ಈ ಹಾಡು ಬಿಡುಗಡೆ ಆಗುವುದಕ್ಕೂ ಮುನ್ನ ಒಂದು ಚಿಕ್ಕ ಟೀಸರ್ ರಿಲೀಸ್ ಮಾಡಲಾಗಿತ್ತು. ಅದರಲ್ಲಿ ಇದ್ದ ಒಂದು ಪದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಆ ಕಾರಣದಿಂದ ವಿರೋಧ ಸೃಷ್ಟಿ ಆಗುವ ಸಾಧ್ಯತೆ ಕೂಡ ಇತ್ತು. ಅದೆಲ್ಲವನ್ನೂ ಮೀರಿ ಈಗ ಈ ಸಾಂಗ್ ಸೂಪರ್ ಹಿಟ್ ಆಗಿದೆ.
ಜಗ್ಗೇಶ್ ಅವರ ಮ್ಯಾನರಿಸಂ, ಅದಿತಿ ಪ್ರಭುದೇವ ಅವರ ಡ್ಯಾನ್ಸ್, ಇತರೆ ಕಲಾವಿದರ ಅಭಿನಯದಿಂದಾಗಿ ಈ ಗೀತೆ ಯಶಸ್ವಿ ಆಗಿದೆ. ಹಾಡು ಹಿಟ್ ಆಗಿದ್ದರ ಬಗ್ಗೆ ನಿರ್ದೇಶಕ ವಿಜಯ್ ಪ್ರಸಾದ್ ಅವರಿಗೆ ಸಖತ್ ಖುಷಿ ಇದೆ.