Updated on: Feb 04, 2022 | 3:27 PM
ನಟ ಜಾಕಿ ಚಾನ್ ಗುರುವಾರ ಚೀನಾದ ಬೀಜಿಂಗ್‌ನ ಹೊರವಲಯದಲ್ಲಿರುವ ಬಡಾಲಿಂಗ್ ಗ್ರೇಟ್ ವಾಲ್‌ನಲ್ಲಿ ವಿಂಟರ್ ಒಲಿಂಪಿಕ್ಸ್ ಟಾರ್ಚ್ ರಿಲೇಯಲ್ಲಿ ಭಾಗವಹಿಸಿದ್ದರು.
‘‘ನಾನು ಮುಂಜಾನೆ 4ಕ್ಕೆ ಎದ್ದೆ. ಇದು ನಾಲ್ಕನೇ ಬಾರಿ ಒಲಂಪಿಕ್ ಜ್ಯೋತಿಯನ್ನು ಹಿಡಿದು ಓಡುತ್ತಿರುವುದು’’ ಎಂದು ಹೇಳಿದ್ಧಾರೆ ಜಾಕಿ ಚಾನ್.
ಒಲಂಪಿಕ್ಸ್ ಜ್ಯೋತಿ ಹಿಡಿದು ಓಡಿದ ನಂತರ ಮಕ್ಕಳೊಂದಿಗೆ ಫೋಟೋಗೆ ಪೋಸ್ ನೀಡಿದ ಜಾಕಿ ಚಾನ್.
ಅಚ್ಚರಿಯ ವಿಷಯವೆಂದರೆ 67 ವರ್ಷದ ಜಾಕಿ ಚಾನ್ ಅವರ ಹೆಸರು ದಾಖಲೆಗಳಲ್ಲಿ ಚೆನ್ ಗ್ಯಾಂಗ್‌ಶೆಂಗ್ ಎಂದಿದೆ.
ಒಲಂಪಿಕ್ ಜ್ಯೋತಿಯ ರಿಲೇಯ ನಂತರ ಜಾಕಿ ಚಾನ್ ಮಾತು.
ವರದಿಗಳ ಪ್ರಕಾರ ಸುಮಾರು 1200 ಗಣ್ಯರು ಒಲಂಪಿಕ್ ಜ್ಯೋತಿಯನ್ನು ಹಿಡಿದು ಓಡಲಿದ್ದಾರೆ.