ಸಿಕ್ಕಿಂ ತನ್ನ ನೈಸರ್ಗಿಕ ಸೌಂದರ್ಯದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪರ್ವತಗಳು ಮತ್ತು ಹಸಿರಿನ ನಡುವೆ ನೆಲೆಗೊಂಡಿರುವ ಈ ರಾಜ್ಯದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ನೀವು ಕುಟುಂಬ ಅಥವಾ ಸ್ನೇಹಿತರೊಂದಿಗೆ ಪ್ರವಾಸವನ್ನು ಆನಂದಿಸಲು ಯೋಜಿಸಿದ್ದರೆ, ಅದಕ್ಕೆ ಪೂರಕವಾಗುವ ಮಾಹಿತಿ ಇಲ್ಲಿದೆ. ನೀವು ಯಾವೆಲ್ಲಾ ತಾಣಗಳನ್ನು ಮಿಸ್ ಮಾಡಲೇಬಾರದು ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಪೆಲ್ಲಿಂಗ್: ಇದು ಸಿಕ್ಕಿಂನ ಒಂದು ಸುಂದರ ತಾಣ. ಸುಮಾರು 7200 ಅಡಿ ಎತ್ತರದಲ್ಲಿರುವ ಈ ನಗರದಲ್ಲಿ ನೀವು ಸಾಹಸ ಕ್ರೀಡೆಗಳನ್ನು ಆಡಬಹುದು, ಚಾರಣ ಮಾಡಬಹುದು. ಪ್ರಶಾಂತವಾಗಿರುವ ಪೆಲ್ಲಿಂಗ್ನ ವಾತಾವರಣಕ್ಕೆ ನೀವು ಮನಸೋಲೋದು ಗ್ಯಾರಂಟಿ.
ಜುಲುಕ್: ಈ ನಗರಕ್ಕೆ ಭೇಟಿ ನೀಡಿದರೆ ನಿಮ್ಮ ಸಿಕ್ಕಿಂ ಪ್ರವಾಸಕ್ಕೆ ಮತ್ತಷ್ಟು ಮೆರುಗು ತುಂಬುತ್ತದೆ ಎಂದೇ ಹೇಳಬಹುದು. ಇದು ಪೂರ್ವ ಹಿಮಾಲಯದ ಮಡಿಲಲ್ಲಿರುವ ಸುಂದರ ನಗರ. ಇಲ್ಲಿನ ನೈಸರ್ಗಿಕ ಸೌಂದರ್ಯ ಪ್ರಖ್ಯಾತವಾಗಿದ್ದು, ಪ್ರವಾಸಿಗರು ಭೇಟಿ ನೀಡಲು ಹಾತೊರೆಯುತ್ತಾರೆ.
ಗ್ಯಾಂಗ್ಟಾಕ್: ಸಿಕ್ಕಿಂನ ರಾಜಧಾನಿಯಾಗಿರುವ ಗ್ಯಾಂಗ್ಟಾಕ್ನ ಹೆಸರು ಕೇಳದವರು ವಿರಳ. ಈ ನಗರಕ್ಕೆ ಭೇಟಿ ನೀಡಿದರೆ ನೀವು ರಾಜ್ಯದ ಸಂಸ್ಕೃತಿಯನ್ನು ಹತ್ತಿರದಿಂದ ತಿಳಿಯಬಹುದು. ಮೋಡಗಳಿಂದ ಆವೃತವಾಗಿರುವ ಈ ನಗರ ಹಾಗೂ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯಕ್ಕೆ ನೀವು ಫಿದಾ ಆಗೋದು ಪಕ್ಕಾ.
ಬುದ್ಧ ಪಾರ್ಕ್: ಸಿಕ್ಕಿಂನಲ್ಲಿ ಬುದ್ಧನ ಚಿಂತನೆಗಳನ್ನು ಅನುಸರಿಸುವ ಜನರು ಹೆಚ್ಚಿದ್ದಾರೆ. ಸಿಕ್ಕಿಂನಲ್ಲಿ ಬುದ್ಧನ ಪ್ರತಿಮೆಯನ್ನು ಒಳಗೊಂಡ ‘ಬುದ್ಧ ಪಾರ್ಕ್’ ಬಹುಪ್ರಸಿದ್ಧವಾಗಿದೆ. ನಿಮ್ಮ ಸಿಕ್ಕಿಂ ಭೇಟಿಯಲ್ಲಿ ಇದನ್ನು ಮಿಸ್ ಮಾಡಲೇಬೇಡಿ.