- Kannada News Photo gallery Trees uprooted in several localities of Bengaluru after heavy rain lashed the city in May 21.
Bengaluru Rain: ಬೆಂಗಳೂರಿನಲ್ಲಿ ಮಳೆರಾಯ ಸೃಷ್ಟಿಸಿದ ಅವಾಂತರಗಳನ್ನು ಫೋಟೋಗಳಲ್ಲಿ ನೋಡಿ
ಬೆಂಗಳೂರಿನಾದ್ಯಂತ ಭಾನುವಾರ ಗುಡುಗು ಸಹಿತ ಭಾರೀ ಆಲಿಕಲ್ಲು ಮಳೆಯಾಗಿದ್ದು, ಸುರಿದ ವಿಪರೀತ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ನಗರದ ಹಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ವಿದ್ಯುತ್ ಕಂಬಗಳು, ಮರಗಳು ರಸ್ತೆ ಬಿದ್ದಿವೆ. ಇದರಿಂದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ವರುಣಾ ಹೇಗೆಲ್ಲ ಅವಾಂತರ ಸೃಷ್ಟಿಸಿದ್ದಾನೆ ಎನ್ನುವುದನ್ನು ಫೋಟೋಗಳಲ್ಲಿ ನೋಡಿ.
Updated on: May 21, 2023 | 7:25 PM

ಬೆಂಗಳೂರು ನಗರದಲ್ಲಿ ಇಂದು(ಭಾನುವಾರ( ಹಲವೆಡೆ ಸುರಿದ ಧಾರಾಕಾರ ಮಳೆಯಿಂದ ಭಾರೀ ಅವಾಂತರಗಳು ಆಗಿವೆ.

ಬೆಂಗಳೂರು ನಗರದ ಹಲವು ರಸ್ತೆಗಳಲ್ಲಿ ನೀರು ತುಂಬಿಕೊಂಡು ನದಿಯಂತಾಗಿವೆ.

ಬೆಂಗಳೂರು ನಗರದ ಬಳ್ಳಾರಿ ರಸ್ತೆಯ ಸಿಬಿಐ ಬಳಿ ಮರ ಬಿದ್ದಿದೆ. ಪರಿಣಾಮ ಬಳ್ಳಾರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.

ಕಬ್ಬನ್ ರಸ್ತೆಯಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ.

ಬಸವ ಮಂಟಪ,ಭಾಷ್ಯಂ ಸರ್ಕಲ್ ಮಧ್ಯ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿರುವುದರಿಂದ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಬಸವನಗುಡಿ ಬಿಪಿ ವಾಡಿಯಾ ರಸ್ತೆಯಲ್ಲಿ ಮರ ಮುರಿದು ಬಿದ್ದಿದೆ

ಕುಮಾರ ಕೃಪಾ ರಸ್ತೆಯ ಚಿತ್ರಕಲಾ ಪರಿಷತ್ ಗೆಟ್ ಬಳಿ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿರುವುದರಿಂದ ಮರ ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದ್ದು ವಾಹನ ಸವಾರರು ಪರ್ಯಾಯ ಮಾರ್ಗವನ್ನು ಅನುಸರಿಸಬೇಕು.

ರಾಜಾಜಿನಗರ 50ನೇ ಕ್ರಾಸ್‌ನಲ್ಲಿ ಮರ ಬಿದ್ದು ಕೆಲವು ವಾಹನಗಳಿಗೆ ಹಾನಿಯಾಗಿದೆ.

ಬೆಂಗಳೂರಿನ ಕೆ.ಆರ್. ಸರ್ಕಲ್ ಬಳಿಯ ಅಂಡರ್‌ಪಾಸ್‌ನಲ್ಲಿ ನಿಂತ ನೀರಿನಲ್ಲಿ ಮುಳುಗಿದ ಕಾರನಲ್ಲಿ ಸಿಲುಕಿದ್ದ ಕುಟುಂಬವನ್ನು ರಕ್ಷಣೆ ಮಾಡುವಷ್ಟರಲ್ಲಿ ಯುವತಿ ಹಾಗೂ ವೃದ್ಧೆ ಇಬ್ಬರೂ ನೀರು ಕುಡಿದು ಅಸ್ವಸ್ಥರಾಗಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು ಆದರೂ ಸಹ ಯುವತಿ ಮೃತಪಟ್ಟಿದ್ದಾಳೆ.

ಬೆಂಗಳೂರಿನ ಕೆ.ಆರ್. ಸರ್ಕಲ್ ಬಳಿಯ ಅಂಡರ್‌ಪಾಸ್‌ನಲ್ಲಿ ನಿಂತ ನೀರಿನಲ್ಲಿ ಕಾರು ಮುಳಿಗಿದ್ದ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.









