- Kannada News Photo gallery Tulsi Vastu: If you follow these tips while performing Tulisi Puja, wealth growth is guaranteed
Tulsi Vastu: ತುಳಿಸಿ ಪೂಜೆ ಮಾಡುವಾಗ ಈ ಸಲಹೆಗಳನ್ನು ಪಾಲಿಸಿದರೆ ಸಂಪತ್ತು ವೃದ್ಧಿ ಗ್ಯಾರಂಟಿ
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ತುಳಸಿ ಗಿಡ ಇರುವುದು ಶುಭ ಸಂಕೇತವೆನ್ನಲಾಗುತ್ತದೆ. ವಾಸ್ತು ನಿಯಮಗಳನ್ನು ಪಾಲಿಸಿ ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ತುಳಿಸಿ ನೆಟ್ಟರೆ ಹಲವಾರು ರೀತಿಯಲ್ಲಿ ಲಾಭಗಳು ಸಿಗುತ್ತವೆ. ಅಲ್ಲದೆ ಲಕ್ಷ್ಮೀವೂ ಒಲಿಯುತ್ತಾಳೆ.
Updated on: Jul 07, 2023 | 10:09 PM

ಹಿಂದೂ ಸಾಂಪ್ರದಾಯದಂತೆ ತುಳಸಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡ ನೆಟ್ಟು ಪ್ರತಿದಿನ ಪೂಜಿಸುವುದರಿಂದ ಲಕ್ಷ್ಮೀ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ವಿಶೇಷವಾಗಿ ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಳಸಿ ಗಿಡ ಋಣಾತ್ಮಕ ಅಂಶಗಳನ್ನು ಧನಾತ್ಮಕವಾಗಿ ಬದಲಾಯಿಸುವ ಶಕ್ತಿಯನ್ನು ಹೊಂದಿದೆ.

ಪ್ರತಿನಿತ್ಯ ಬೆಳಿಗ್ಗೆ ಜನರು ತುಳಿಸಿ ಗಿಡಕ್ಕೆ ನಮಸ್ಕರಿಸುತ್ತಾರೆ. ಜೊತೆಗೆ ತುಳಿಸಿ ಗಿಡಕ್ಕೆ ನೀರು ಅಥವಾ ಹಾಲನ್ನು ಹಾಕುತ್ತಾರೆ. ಹೀಗೆ ಮಾಡುವುದರಿಂದ ಸಂಪತ್ತು ಇದ್ದಕ್ಕಿದ್ದಂತೆ ಹೆಚ್ಚುತ್ತದೆ ಎಂದು ಭಾವಿಸಿದರೆ ಅದು ದೊಡ್ಡ ತಪ್ಪು. ಏಕೆಂದರೆ ಶ್ರೀ ಮಹಾಲಕ್ಷ್ಮಿಯು ಕೇವಲ ಹಾಲು ಮತ್ತು ನೀರಿನಿಂದ ತೃಪ್ತಳಾಗುವುದಿಲ್ಲ.

ಮನೆಯಲ್ಲಿ ಯಾವುದೇ ಸಮಸ್ಯೆ, ತೊಂದರೆ ಇರುವವರು ಹಾಲು ಅಥವಾ ನೀರಿನ ಬದಲು ತುಳಸಿ ಗಿಡಕ್ಕೆ ಕಬ್ಬಿನ ರಸವನ್ನು ಸುರಿಯಬೇಕು. ಇದನ್ನು ಮಾಡುವ ಮೊದಲು ಏಳು ಬಾರಿ ನಿಮ್ಮ ನಾಮ ಮತ್ತು ಗೋತ್ರವನ್ನು ಜಪಿಸಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ಪ್ರತಿದಿನ ಬೆಳಗ್ಗೆ ಮಂಗಳಾಸ್ನಾನ ಮಾಡಿ ತುಳಸಿ ಗಿಡಕ್ಕೆ ನಮಸ್ಕರಿಸುವುದರಿಂದ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದಾಗಿದೆ.

ತುಳಸಿ ಗಿಡದ ಬಳಿ ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಹಚ್ಚಿಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ ಎನ್ನುತ್ತಾರೆ ತಜ್ಞರು. ತುಳಸಿ ಬೆರನ್ನು ಕುತ್ತಿಗೆಗೆ ತಾಯತದಂತೆ ಧರಿಸುವುದು ಕೂಡ ತುಂಬಾ ಒಳ್ಳೆಯದು ಎನ್ನುತ್ತಾರೆ ತಜ್ಞರು.



















