- Kannada News Photo gallery Tumkur district administration negligence 70 year old man remove silt from Rajakaluve to avoid problems due to rain kannada news
ತುಮಕೂರು ಜಿಲ್ಲಾಡಳಿತ ನಿರ್ಲಕ್ಷ್ಯ: ಮಳೆಯಿಂದ ಸಮಸ್ಯೆಯಾಗಬಾರದೆಂದು ತಾವೇ ಗುದ್ದಲಿ ಹಿಡಿದು ರಾಜಕಾಲುವೆ ಹೂಳು ತೆಗೆದ 70ರ ವೃದ್ಧ
ತುಮಕೂರು ನಗರದ ಹೊರವಲಯದ ಗಣೇಶ ನಗರದ 70 ವರ್ಷದ ರೈತ ಲಕ್ಷ್ಮಯ್ಯ ಅವರು ಗುದ್ದಲಿ ಹಿಡಿದು ಹೂಳು ತೆಗೆಯುವ ಕಾರ್ಯ ಮಾಡಿದ್ದಾರೆ. ಕಳೆದ ಮೂರು ವರ್ಷದಿಂದ ಜಿಲ್ಲಾಡಳಿತ ರಾಜಕಾಲುವೆ ಹೂಳು ತೆಗೆದಿರಲಿಲ್ಲ. 70 ರ ಇಳಿವಯಸ್ಸಿನ ವೃದ್ದ ರೈತನ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ಮಹಾಪೂರ ಹರಿದು ಬಂದಿದೆ.
Updated on: Jun 09, 2024 | 12:18 PM

70 ವರ್ಷದ ವೃದ್ದ ರೈತ ರಾಜಕಾಲುವೆ ಹೂಳು ತೆಗೆಯಲು ಮುಂದಾಗಿದ್ದಾರೆ. ತುಮಕೂರು ನಗರದ ಹೊರವಲಯದ ಕುಂದೂರು ತೋಟ(ಗಣೇಶ ನಗರ)ದ ರೈತ ಲಕ್ಷ್ಮಯ್ಯ ಅವರು ಇಳಿವಯಸ್ಸಿನಲ್ಲೂ ಗುದ್ದಲಿ ಹಿಡಿದು ಹೂಳು ತೆಗೆಯುವ ಕಾರ್ಯ ಮಾಡಿದ್ದಾರೆ.

ಕುಂದೂರು ಬೆಟ್ಟದ ತಪ್ಪಲಿನಿಂದ ಅಮಾನಿಕೆರೆಗೆ ರಾಜಕಾಲುವೆ ಹಾದು ಹೋಗಿದೆ. ಕಳೆದ ಮೂರು ವರ್ಷದಿಂದ ಜಿಲ್ಲಾಡಳಿತ ರಾಜಕಾಲುವೆ ಹೂಳು ತೆಗೆದಿಲ್ಲ. ರಾಜಕಾಲುವೆ ಹೂಳು ತೆಗೆಯದೆ ನಿರ್ಲಕ್ಷ್ಯವಹಿಸಿದೆ.

ಬಾರಿ ಮಳೆಗೆ ರಾಜಕಾಲುವೆ ತುಂಬಿ ಬಡಾವಣೆಗೆ ನೀರು ನುಗ್ಗಿತ್ತು. ಇದರಿಂದ ಬೇಸತ್ತು ಸ್ವತಃ ತಾನೇ ಗುದ್ದಲಿ ಹಿಡಿದು ರೈತ ಲಕ್ಷ್ಮಯ್ಯ ತಮ್ಮ ತೋಟದ ಪಕ್ಕದಲ್ಲಿ ಹಾದು ಹೋಗಿರುವ ರಾಜಕಾಲುವೆ ಸ್ವಚ್ಚತೆ ಮಾಡಿದ್ದಾರೆ. ರಾಜಕಾಲುವೆ ಕಸ ಕಡ್ಡಿ, ಹೂಳು ತೆಗೆದಿದ್ದಾರೆ.

ಕಳೆದ ಎರಡು ದಿನದಿಂದ ಏಕಾಂಗಿಯಾಗಿ ರಾಜಕಾಲುವೆ ಅಗೆಯುತ್ತಿದ್ದಾರೆ. ಮಳೆ ನೀರು ಸರಾಗವಾಗಿ ಹರಿಯಲು ಶ್ರಮಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಮ್ಮ ಕೆಲಸವನ್ನ ನಾವೇ ಮಾಡಿಕೊಳ್ಳಬೇಕು ಎಂದರು.

ಮಳೆ ಬಂದರೆ ತೋಟಕ್ಕೆ, ಮನೆಗಳಿಗೆ ನೀರು ನುಗ್ಗುತ್ತಿದೆ. ಅಧಿಕಾರಿಗಳಿಗೆ ತಿಳಿಸಿದರೆ ಯಾರೂ ಸ್ಪಂದಿಸುತ್ತಿಲ್ಲ. ರಾಜಕಾಲುವೆ ಹೂಳು ತೆಗೆದು ಮೂರು ವರ್ಷವಾಗಿದೆ. ಪ್ರತಿದಿನ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡುತ್ತೆನೆಂದು ತಿಳಿಸಿದರು. 70 ರ ಇಳಿವಯಸ್ಸಿನ ವೃದ್ದ ರೈತನ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ಮಹಾಪೂರ ಹರಿದು ಬಂದಿದೆ.









