- Kannada News Photo gallery tumkur Siddaganga Mutt Swamiji Udupi swamiji panchamasali swamiji casted their votes
Karnataka Assembly Elections 2023: ರಾಜ್ಯದ ಹಲವೆಡೆ ಮಠಾಧೀಶರಿಂದ ಮತದಾನ, ಕೊಟ್ಟ ಸಂದೇಶವೇನು?
ಐದು ವರ್ಷಕ್ಕೊಮ್ಮೆ ಬರುವ ಪ್ರಜಾಪ್ರಭುತ್ವದ ಹಬ್ಬಕ್ಕೆ ಇಡೀ ರಾಜ್ಯ ಸಜ್ಜಾಗಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಸಂಜೆ 6 ಗಂಟೆಯ ವರೆಗೂ ಮತದಾನ ನಡೆಯಲಿದೆ.
Updated on:May 11, 2023 | 4:42 PM

ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದ್ದು ಮತಗಟ್ಟೆಗಳಿಗೆ ಮತದಾರರು ಬಂದು ತಮ್ಮ ಮತ ಚಲಾಯಿಸುತ್ತಿದ್ದಾರೆ. ಜೊತೆಗೆ ರಾಜ್ಯದ ಗಣ್ಯ ಸ್ವಾಮೀಜಿಗಳು, ಮಠಾಧೀಶರು ಕೂಡ ಮತ ಹಾಕುತ್ತಿದ್ದಾರೆ.

ತುಮಕೂರಿನ ಸಿದ್ಧಗಂಗಾ ಮಠದ ಸಿದ್ದಲಿಂಗ ಶ್ರೀಗಳು ಸಿದ್ಧಗಂಗಾ ಮಠದ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 116ರಲ್ಲಿ ಮತದಾನ ಮಾಡಿದರು.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದ ಮತಗಟ್ಟೆ ಸಂಖ್ಯೆ 8ರಲ್ಲಿ ಬಸವ ಜಯಮೃತ್ಯುಂಜಯ ಶ್ರೀ ಮತದಾನ ಮಾಡಿದರು. ಈ ವೇಳೆ ನಾನು ಮತ ಹಾಕಿದ್ದೇನೆ. ನೀವೂ ತಪ್ಪದೇ, ನಿಮ್ಮ ಮತದ ಹಕ್ಕನ್ನು ಹಾಕಿ. ಎಲ್ಲಾರಿಂದಲೂ ಹಾಕಿಸಿ ಎಂದರು.

ಬೆಂಗಳೂರಿನ ಭೂಪ್ಸಂದ್ರದ ವಿದ್ಯಾಸಾಗರ ಪ್ರಿ ಸ್ಕೂಲ್ ನ 55ನೇ ಮತಗಟ್ಟೆಯಲ್ಲಿ ವಚನಾನಂದ ಸ್ವಾಮೀಜಿ ಮತ ಚಲಾಯಿಸಿದರು. ಈ ವೇಳೆ ನಾನು ನನ್ನ ಮತ ಹಾಕುವುದರ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿದ್ದೇನೆ. ಈ ನಾಡಿನ ಪ್ರತಿಯೊಬ್ಬರೂ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿ ಹಬ್ಬವನ್ನು ಸಂಭ್ರಮಿಸೋಣ ಎಂದರು.

ಹುಬ್ಬಳ್ಳಿಯ ಮೂರುಸಾವಿರ ಮಠದ ಶಾಲೆಯ ಮತಗಟ್ಟೆಯಲ್ಲಿ ಮಠದ ಗುರುಸಿದ್ಧ ರಾಜಯೋಗಿಂದ್ರ ಶ್ರೀಗಳು ಮತದಾನ ಮಾಡಿದರು.

ಉಡುಪಿಯ ನಾರ್ತ್ ಶಾಲೆಯಲ್ಲಿ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು, ರಾಜರಾಜೇಶ್ವರ ತೀರ್ಥರು ಮತದಾನ ಮಾಡಿದರು.
Published On - 9:35 am, Wed, 10 May 23




