ಹಾಲಿನಂತೆ ಭೋರ್ಗರೆಯುತ್ತಿರೋ ತುಂಗಭದ್ರಾ! ಸೆಲ್ಫಿ ಕ್ಲಿಕ್ಕಿಸಿಕೊಂಡು ಪ್ರವಾಸಿಗರು ಖುಷ್
ಬರದ ನಾಡು ಎಂದೇ ಖ್ಯಾತಿ ಪಡೆದ ಗದಗ ಜಿಲ್ಲೆ. ಈಗ ಆ ಜಿಲ್ಲೆಯಲ್ಲಿ ನೀರೋ ನೀರು. ತುಂಗಾ ಡ್ಯಾಂನಿಂದ ಅಪಾರ ಪ್ರಮಾಣದಲ್ಲಿ ನೀರು ರಿಲೀಸ್ ಮಾಡಿದ್ದಾರೆ. ಹೀಗಾಗಿ ಸಿಂಗಟಾಲೂರ ಬ್ಯಾರೇಜ್ ಭರ್ತಿಯಾಗಿದ್ದು, 19 ಗೇಟ್ ಗಳು ಓಪನ್ ಮಾಡಲಾಗಿದೆ. ಇದರಿಂದ ಬ್ಯಾರೇಜ್ ಭೋರ್ಗರೆಯುತ್ತಿದೆ. ಈ ರಮಣೀಯ ದೃಶ್ಯ ಪ್ರವಾಸಿಗರ ಮನ ತಣಿಸುತ್ತಿದ್ದು, ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಸೆಲ್ಫಿ ಕ್ಲಿಕ್ಕಿಸಿಕೊಂಡು ಫುಲ್ ಎಂಜಾಯ್ ಮಾಡ್ತಿದ್ದಾರೆ.
1 / 6
ಮಲೆನಾಡಿನಲ್ಲಿ ಎಡೆಬಿಡದ ಧೋ ಎಂದು ಸುರಿದ ಮಳೆಗೆ ಬರದನಾಡು ಗದಗ ಕಂಗೊಳಿಸುತ್ತಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಬಳಿ ಸಿಂಗಟಾಲೂರು ಏತ ನೀರಾವರಿ ಬ್ಯಾರೇಜ್ ಈಗ ಕಳೆಕಟ್ಟಿದೆ. ಬ್ಯಾರೇಜ್ ಫುಲ್ ಆಗಿದ್ದರಿಂದ 19 ಗೇಟ್ಗಳು ಓಪನ್ ಮಾಡಿ 2 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಹೀಗಾಗಿ ಈ ರುದ್ರರಮಣೀಯ ದೃಶ್ಯ ಪ್ರವಾಸಿರಗನ್ನು ಕೈಬೀಸಿ ಕರೆಯುತ್ತಿದೆ.
2 / 6
ಬ್ಯಾರೇಜ್ ಫುಲ್ ಆಗಿದ್ದರಿಂದ ಸುಮಾರು 19 ಕ್ಕೂ ಹೆಚ್ಚು ಗೇಟ್ಗಳನ್ನ ಓಪನ್ ಮಾಡಿ ತುಂಗಭದ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದೆ. ಹೀಗಾಗಿ ಬ್ಯಾರೇಜ್ನಲ್ಲಿ ಹಾಲಿನ ನೊರೆಯಂತೆ ನೀರು ಭೋರ್ಗರೆಯುತ್ತಿರೋ ದೃಶ್ಯಗಳು ಮನಸ್ಸಿಗೆ ಮುದ ನೀಡುತ್ತಿದೆ.
3 / 6
ಬರದನಾಡಿನಲ್ಲಿ ಇಂತಹ ದೃಶ್ಯಗಳು ಅಪರೂಪ. ಹೀಗಾಗಿ ಈ ರಮಣೀಯ ದೃಶ್ಯಗಳಿಗೆ ಪ್ರವಾಸಿಗರು ಮನಸೋತಿದ್ದಾರೆ. ಸಿಂಗಟಾಲೂರ ಬ್ಯಾರೇಜ್ ಇದೀಗ ಪ್ರವಾಸಿಗರ ಪಿಕ್ನಿಕ್ ಹಾಟ್ ಸ್ಪಾಟ್ ಆಗಿದ್ದು, ವೀಕೆಂಡ್ನಲ್ಲಿ ಇಲ್ಲಿಗೆ ಆಗಮಿಸಿ ಮನಮೋಹಕ ದೃಶ್ಯಗಳನ್ನ ನೋಡಿ ಪ್ರವಾಸಿಗರು ಫುಲ್ ಎಂಜಾಯ್ ಮಾಡ್ತಾಯಿದ್ದಾರೆ. ಅಷ್ಟೇ ಅಲ್ಲ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಡ್ತಾಯಿದ್ದಾರೆ.
4 / 6
ಒಂದೆಡೆ ಮೈದುಂಬಿ ಹರಿಯುತ್ತಿರೋ ತುಂಗಭದ್ರ ನದಿಯನ್ನು ನೋಡೋದು ಕಣ್ಣಿಗೆ ಹಬ್ಬ. ಇನ್ನು ಈ ಬ್ಯಾರೇಜ್ 3.14 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಸದ್ಯ 2 ಲಕ್ಷ 9 ಸಾವಿರ ಕ್ಯೂಸೆಕ್ ನೀರನ್ನ ಹರಿಬಿಡಲಾಗಿದೆ. ಅಷ್ಟೇ ಪ್ರಮಾಣದಲ್ಲಿ ನದಿಗೆ ನೀರು ಹರಿದು ಬರ್ತಾಯಿದೆ. ಹೀಗಾಗಿ ಬ್ಯಾರೇಜ್‌ನ ಒಟ್ಟು 24 ಗೇಟ್ ಗಳಲ್ಲಿ 19 ಗೇಟ್ಗಳನ್ನ ತೆರೆಯಲಾಗಿದ್ದು, ಧುಮ್ಮಿಕ್ಕಿ ಹರಿಯುವ ಬ್ಯಾರೇಜ್‌ನ ರಮಣೀಯ ದೃಶಗಳು ಪ್ರವಾಸಿಗರನ್ನ ಸೆಳೆಯುವಂತೆ ಮಾಡಿದೆ.
5 / 6
ಅತ್ಯಂತ ಹತ್ತಿರದಿಂದ ಈ ಮನಮೋಹಕ ದೃಶ್ಯಗಳನ್ನ ಪ್ರವಾಸಿಗಳು ಕಣ್ತುಂಬಿಕೊಳ್ತಿದ್ದು, ಫುಲ್ ಖುಷ್ ಆಗಿದ್ದಾರೆ. ಬ್ಯಾರೇಜ್ ಪಕ್ಕದಲ್ಲೇ ನಿಂತ್ಕೊಂಡು ಸೇಲ್ಫಿ ತೆಗೆದುಕೊಂಡು ಎಂಜಾಯ್ ಮಾಡ್ತಿದ್ದಾರೆ. ಗದಗ ಅಷ್ಟೇ ಅಲ್ಲದೆ, ಪಕ್ಕದ ಬಳ್ಳಾರಿ, ಹಾವೇರಿ, ಕೊಪ್ಪಳ, ಹುಬ್ಬಳ್ಳಿ, ಧಾರವಾಡ ಜಿಲ್ಲೆಯ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ಪ್ರಕೃತಿ ಸೌಂದರ್ಯದ ಸೊಬಗು ನೋಡಿ ಆನಂದಿಸ್ತಾರೆ. ಆದ್ರೆ, ಇಲ್ಲಿಗೆ ಬರುವ ಪ್ರವಾಸಿಗರಿಗೆ ಯಾವುದೇ ಸೌಲಭ್ಯವಿಲ್ಲದಕ್ಕೆ ಮಹಿಳಾ ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
6 / 6
ಪ್ರವಾಸೋದ್ಯಮ ಇಲಾಖೆ ಕನಿಷ್ಠ ಮೂಲ ಸೌಕರ್ಯ ಒದಗಿಸಬೇಕು ಎಂದು ಮಹಿಳಾ ಪ್ರವಾಸಿಗರಾದ ಕಾವೇರಿ, ಗೌರಿ ಬೆಲ್ಲದ್ ಒತ್ತಾಯಿಸಿದ್ದಾರೆ. ಮಳೆಗಾಲದಲ್ಲಿನ ಈ ರಮಣೀಯರ ದೃಶ್ಯಗಳು ನೋಡಿ ಪ್ರವಾಸಿಗರು ಎಂಜಾಯ್ ಮಾಡ್ತಾಯಿದ್ದಾರೆ. ತಮ್ಮ ದಿನನಿತ್ಯದ ಕೆಲಸದ ಜಂಜಾಟದಲ್ಲಿ ತೊಡಗಿ ತಲೆ ಬಿಸಿ ಮಾಡಿಕೊಂಡಿರುವ ಜನರು ಸಿಂಗಟಾಲೂರ ಬ್ಯಾರೇಜ್‌ನ ರಮಣೀಯ ದೃಶ್ಯಗಳು ಮನ ತಣ್ಣಿಸಿರೋದಂತು ಸುಳ್ಳಲ್ಲ.