- Kannada News Photo gallery Special Puja Kainkarya performed for Madappa on Bhimana Amavasya, Millions of devotees gathered, Chamarajanagar news in kannada
ಭೀಮನ ಅಮಾವಾಸ್ಯೆಗೆ ಮಾದಪ್ಪನಿಗೆ ನೇರವೇರಿತು ವಿಶೇಷ ಪೂಜಾ ಕೈಂಕರ್ಯ! ಕಣ್ತುಂಬಿಕೊಂಡ ಲಕ್ಷಾಂತರ ಭಕ್ತಗಣ
ಇಂದು ಭೀಮನ ಅಮಾವಾಸ್ಯೆ ಹಿನ್ನಲೆ ವಿಶೇಷವಾಗಿ ಜಾತ್ರಾ ಮಹೋತ್ಸವವನ್ನ ಚಾಮರಾಜನಗರದಲ್ಲಿ ಆಚರಿಸಲಾಯ್ತು. ಮಹಿಳಾ ಮಣಿಗಳು ವಿಶೇಷವಾಗಿ ದೇವಾಲಯಕ್ಕೆ ಬಂದು ಪೂಜೆಯಲ್ಲಿ ಭಾಗಿಯಾದ್ರೆ, ಅತ್ತ ಸಾಂಪ್ರದಾಯಿಕ ಉಡುಗೆ ತೊಟ್ಟ ಯುವಕ-ಯುವತಿಯರು ಜಾತ್ರೆಯಲ್ಲಿ ಓಡಾಡುತ್ತ ಮೇರುಗು ಮೂಡಿಸಿದರು. ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ.
Updated on:Aug 04, 2024 | 9:33 PM

ಇಂದು ಭೀಮನ ಅಮವಾಸ್ಯೆ ಹಿನ್ನಲೆ ಮಹಿಳಾ ಮಣಿಗಳು ವಿಶೇಷವಾಗಿ ದೇವಾಲಯಕ್ಕೆ ಬಂದು ಪೂಜೆಯಲ್ಲಿ ಭಾಗಿಯಾದ್ರೆ, ಅತ್ತ ಸಾಂಪ್ರದಾಯಿಕ ಉಡುಗೆ ತೊಟ್ಟ ಯುವಕ-ಯುವತಿಯರು ಜಾತ್ರೆಯಲ್ಲಿ ಓಡಾಡುತ್ತ ಮೇರುಗು ಮೂಡಿಸಿದರು.

ಚಾಮರಾಜನಗರ ತಾಲೂಕಿನ ಸಂತೆಮರಳ್ಳಿ ಗ್ರಾಮದಲ್ಲಿನ ಮಾದಪ್ಪನ ದರ್ಶನಕ್ಕೆ ಭಕ್ತರ ದಂಡೆ ಹರಿದು ಬಂದಿತ್ತು. ಇಂದು (ಭಾನುವಾರ) ಭೀಮನ ಅಮವಾಸ್ಯೆಯಾದ ಕಾರಣ ಮಾದಪ್ಪನ ದರ್ಶನ ಪಡೆದರೆ ಒಳಿತಾಗುತ್ತೆಂಬ ಪ್ರತೀತಿ ಇದೆ. ಹಾಗಾಗಿ ರಾಜ್ಯದ ವಿವಿದೆಡೆಯಿಂದ ಜನರು ಆಗಮಿಸಿ ಮಾದಪ್ಪನ ದರ್ಶನ ಪಡೆದು ಪುನೀತರಾದ್ರು.

ಪ್ರತಿ ವರ್ಷ ಸಂತೆಮರಳ್ಳಿ ಗ್ರಾಮದಲ್ಲಿ ವಿಶೇಷ ಜಾತ್ರಾ ಮಹೋತ್ಸವ ನಡೆಯುತ್ತೆ. ಅದೆ ರೀತಿ ಈ ಬಾರಿಯು ಜಾತ್ರೆ ಮಹೋತ್ಸವವನ್ನ ಆಯೋಜಿಸಲಾಗಿತ್ತು. ಈ ಜಾತ್ರೆಗೆ ಸಾಂಪ್ರದಾಯಿಕ ಉಡುಗೆ ತೊಟ್ಟ ಯುವಕ-ಯುವತಿಯರು ಜಾತ್ರೆಯಲ್ಲಿ ಭಾಗಿಯಾಗಿ ಸಂತಸಪಟ್ಟರು.

ಇನ್ನು ಪುರಾಣದ ಐತಿಹ್ಯದ ಪ್ರಕಾರ ಈ ಹಿಂದೆ ಮಾದೇಶ್ವರು ಬಿಕ್ಷೆ ಬೇಡುತ್ತ ಬಂದು ಇಲ್ಲಿ ಐಕ್ಯರಾಗಿದ್ದಾರಂತೆ ಹಾಗಾಗಿ ಆಗಿನಿಂದಲೂ ಇಲ್ಲಿ ಭೀಮನ ಅಮವಾಸ್ಯೆಯಂದು ವಿಶೇಷ ಜಾತ್ರಾಮಹೋತ್ಸವ ನಡೆಯುತ್ತಿದೆ.

ಇನ್ನು ಭಾನುವಾರ ಹಾಗೂ ರಾಜ್ಯದಲ್ಲಿ ಶಕ್ತಿಯೋಜನೆ ಜಾರಿಯಲ್ಲಿರುವ ಹಿನ್ನಲೆ ಮಹಿಳಾ ಭಕ್ತರ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡಿದೆ. ಮಾದಪ್ಪನ ದರ್ಶನಕ್ಕಾಗಿ ಬಂದ ಭಕ್ತರಿಗೆ ವಿಶೇಷವಾಗಿ ಪ್ರಸಾದದ ವ್ಯವಸ್ಥೆ ಸಹ ಮಾಡಲಾಗಿತ್ತು. ಪಾಯಸ, ಹುಳಿ, ಅನ್ನ ಸಾಂಬಾರ್ ಹಾಗೂ ಮಜ್ಜಿಗೆಯನ್ನ ವಿತರಿಸಲಾಯ್ತು.

ಅದೇನೆ ಹೇಳಿ ಭೀಮನ ಅಮವಾಸೆಯನ್ನ ಚಾಮರಾಜನಗರದಲ್ಲಿ ವಿಶೇಷ ಹಾಗೂ ವಿಭಿನ್ನವಾಗಿ ಆಚರಿಸಲಾಯ್ತು, ಉಘೇ ಮಾದೇಶ ಎಂಬ ಘೋಷವಾಕ್ಯದಿಂದ ಮಾದಪ್ಪನ ದರ್ಶನ ಪಡೆದ ಲಕ್ಷಾಂತರ ಮಂದಿ ಪುನೀತರಾದರು.
Published On - 9:31 pm, Sun, 4 August 24




