Girish Bharadwaj: ತೂಗು ಸೇತುವೆ ನಿರ್ಮಿಸಿ ಜನರ ಕಷ್ಟ ಪರಿಹರಿಸಿದ ಬ್ರಿಡ್ಜ್ಮ್ಯಾನ್ ಗಿರೀಶ್ ಭಾರದ್ವಾಜರ ಸಾಧನೆಗೆ ನಮ್ಮದೊಂದು ಸನ್ಮಾನ
Navanakshatra Sanman 2021: ಅದು 1989ರ ಸಮಯ.. ದಕ್ಷಿಣ ಕನ್ನಡ ಜಿಲ್ಲೆಯ ಅರಂಬೂರಿನ ಜನ ಸಂಕಷ್ಟದಲ್ಲಿದ್ದರು. ಅನಾರೋಗ್ಯ ಕಾಣಿಸಿಕೊಂಡ್ರೆ ಆಸ್ಪತ್ರೆಗೆ ತೆರಳೋದೇ ಸಾಹಸವಾಗ್ತಿತ್ತು. ದೋಣಿಯಲ್ಲಿ ಪಯಸ್ವಿನಿ ನದಿ ದಾಟಿ ಸುಳ್ಯ ತಲುಪೋದು ನರಕಯಾತನೆ ನೀಡ್ತಿತ್ತು. ಆಗ ಅರಂಬೂರಿನ ಒಂದಿಷ್ಟು ಜನ, ಅದೊಬ್ಬ ಇಂಜಿನಿಯರ್ ಬಳಿ ತೆರಳಿ, ಈ ಯಮಯಾತನೆಯಿಂದ ಮುಕ್ತಿ ನೀಡಿ ಅಂತಾ ಅಂಗಲಾಚಿದ್ರು. ಯೋಚನೆಗಿಳಿದ ಮೆಕ್ಯಾನಿಕಲ್ ಇಂಜಿನಿಯರ್ ಗಿರೀಶ್ ಭಾರದ್ವಾಜ್ ಅದ್ಭುತವನ್ನೇ ಸೃಷ್ಟಿಸಿದ್ರು. ಅರಂಬೂರಿನಿಂದ ಸುಳ್ಯಕ್ಕೆ ಸಂಪರ್ಕ ಕಲ್ಪಿಸುವ 87ಮೀಟರ್ ಉದ್ದದ ತೂಗು ಸೇತುವೆ ನಿರ್ಮಿಸಿದ್ರು. ಅಂದು ತೂಗು ಸೇತುವೆ ನಿರ್ಮಿಸಿದ ಗಿರೀಶ್ ಇಂದು ಬ್ರಿಡ್ಜ್ಮ್ಯಾನ್ ಅಂತಲೇ ಚಿರಪರಿಚಿತ. ಗಿರೀಶ್ ಭಾರದ್ವಾಜರ ಈ ನಿಸ್ವಾರ್ಥ ಸೇವೆಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ. ಇಂತಹ ಲೋಕೊಪಕಾರಿ ಬ್ರಿಡ್ಜ್ಮ್ಯಾನ್ ಗಿರೀಶ್, ಟಿವಿ9ನ 2021ನೇ ಸಾಲಿನ ನವನಕ್ಷತ್ರ ಗೌರವಕ್ಕೆ ಭಾಜನರಾಗಿದ್ದಾರೆ.
Published On - 8:35 am, Wed, 5 January 22