ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಇದೇ ತಿಂಗಳು 17ಕ್ಕೆ ಬಿಡುಗಡೆ ಆಗಲಿದೆ.
ಇದರ ನಡುವೆ ರಕ್ಷಿತ್ ಶೆಟ್ಟಿಯವರ ಎರಡು ಸಿನಿಮಾಗಳ ಚಿತ್ರೀಕರಣ ಮುಗಿದಿದ್ದು, ಕುಂಬಳಕಾಯಿ ಹೊಡೆಯಲಾಗಿದೆ.
ಚಿತ್ರೀಕರಣ ಮುಗಿದಿರುವುದು ರಕ್ಷಿತ್ ಶೆಟ್ಟಿ ನಟಿಸಿರುವ ಸಿನಿಮಾಗಳದ್ದಲ್ಲ, ಬದಲಿಗೆ ರಕ್ಷಿತ್ ಶೆಟ್ಟಿ ಬಂಡವಾಳ ಹೂಡಿರುವ ಸಿನಿಮಾಗಳದ್ದು.
ರಕ್ಷಿತ್ ಶೆಟ್ಟಿ ನಿರ್ಮಾಣದ “ಇಬ್ಬನಿ ತಬ್ಬಿದ ಇಳೆಯಲಿ” ಮತ್ತು “ಬ್ಯಾಚುಲರ್ ಪಾರ್ಟಿ” ಸಿನಿಮಾದ ಚಿತ್ರೀಕರಣ ಮುಗಿದಿದೆ.
“ಬ್ಯಾಚುಲರ್ ಪಾರ್ಟಿ” ಸಿನಿಮಾದಲ್ಲಿ ಲೂಸ್ ಮಾದ ಯೋಗಿ, ಅಚ್ಯುತ್ ಕುಮಾರ್ ಮತ್ತು ಪ್ರಮೋದ್ ಶೆಟ್ಟಿ ನಟಿಸಿದ್ದಾರೆ.
ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾದಲ್ಲಿ ನಾಯಕನಾಗಿ ವಿಹಾನ್, ನಾಯಕಿಯಾಗಿ ಅಂಕಿತಾ ನಟಿಸಿದ್ದಾರೆ.
'ಕಥಾಸಂಗಮ' ಚಿತ್ರದ 'ರೇನ್ಬೋ ಲ್ಯಾಂಡ್' ಕಿರುಚಿತ್ರವನ್ನು ನಿರ್ದೇಶಿಸಿದ್ದ ಚಂದ್ರಜಿತ್ ಬೆಳ್ಳಿಯಪ್ಪ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.