- Kannada News Photo gallery Ukrainians and other people protest against Vladimir Putin all over world see pics
Ukraine Crisis: ಪುಟಿನ್ ನಡೆಯ ವಿರುದ್ಧ ತಿರುಗಿಬಿದ್ದ ಜಗತ್ತಿನ ಜನರು; ವಿಶ್ವದೆಲ್ಲೆಡೆ ಪ್ರತಿಭಟನೆ- ಫೋಟೋಗಳು ಇಲ್ಲಿವೆ
Protest against Putin: ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿರುವ ರಷ್ಯಾ ವಿರುದ್ಧ ಜಗತ್ತಿನೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ. ಹಲವೆಡೆ ರಷ್ಯಾ ರಾಯಭಾರ ಕಚೇರಿ ಎದುರು ಉಕ್ರೇನಿಯನ್ನರು ಪ್ರತಿಭಟಿಸಿದರೆ, ಮತ್ತಷ್ಟು ಕಡೆ vಇವಿಧ ದೇಶಗಳ ನಾಗರಿಕರು ಒಟ್ಟಾಗಿ ಪುಟಿನ್ ವಿರುದ್ಧ ಘೋಷಣೆ ಕೂಗಿದ್ದಾರೆ. ಜಗತ್ತಿನಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಫೋಟೋಗಳು ಇಲ್ಲಿವೆ.
Updated on:Feb 26, 2022 | 10:12 AM

ಉಕ್ರೇನ್ ಮೇಲೆ ರಷ್ಯಾ ದಾಳಿಯನ್ನು ವಿರೋಧಿಸಿ ಗುರುವಾರ ಲಾಸ್ ಏಂಜಲೀಸ್ನಲ್ಲಿ ಪ್ರತಿಭಟಿಸಿದ ಜನರು (AP Photo)

ಲಾಸ್ ಏಂಜಲೀಸ್ನ ಸ್ಟುಡಿಯೋ ಸಿಟಿಯಲ್ಲಿ ಯುದ್ಧ ಬೇಡ ಎಂದು ಪ್ರತಿಭಟಿಸುತ್ತಿರುವ ಪ್ರತಿಭಟನಾಕಾರ (AP Photo)

‘ಯುದ್ಧವನ್ನು ನಿಲ್ಲಿಸಿ’ ಎಂಬ ಬಿತ್ತಿ ಪತ್ರ ಹಿಡಿದು ಪ್ರತಿಭಟನೆ (AP Photo)

ಸೀಟಲ್ನಲ್ಲಿ ‘ಉಕ್ರೇನ್ನಲ್ಲಿ ಯುದ್ಧ ಬೇಡ’ ಎಂದು ಜನರ ಪ್ರತಿಭಟನೆ (AP Photo)

ಚಿಲಿಯ ಸ್ಯಾಂಡಿಗೋದಲ್ಲಿ ಉಕ್ರೇನ್ ಜನರ ಪರ ಜನರ ಮೆರವಣಿಗೆ (AP Photo)

ಜರ್ಮನಿಯ ಬರ್ಲಿನ್ನ ಜಗತ್ಪ್ರಸಿದ್ಧ ‘ದಿ ಬ್ರಂಡೆನ್ಬರ್ಗ್ ಗೇಟ್’ನಲ್ಲಿ ಉಕ್ರೇನ್ ರಾಷ್ಟ್ರಧ್ವಜವನ್ನು ಕಟ್ಟಡದ ಮೇಲೆ ಮೂಡಿಸಿ ಬೆಂಬಲ ನೀಡಲಾಯಿತು. (AP Photo)

ಲಂಡನ್ನಲ್ಲಿ ಪ್ರತಿಭಟನೆ (AP Photo)

ಲಿಸ್ಬನ್ನಲ್ಲಿ ರಷ್ಯಾ ರಾಯಭಾರ ಕಚೇರಿ ಎದುರು ಪುಟಿನ್, ರಷ್ಯಾದ ವಿರುದ್ಧ ಜನರ ಪ್ರತಿಭಟನೆ (AP Photo)

ಇಟಲಿಯ ‘ದುವಾಮೋ ಸ್ಕ್ವಾರ್’ನಲ್ಲಿ ಉಕ್ರೇನ್ ಧ್ವಜ ಹಿಡಿದು ರಷ್ಯಾದ ನೀತಿಯ ವಿರುದ್ಧ ಜನರ ಪ್ರತಿಭಟನೆ (AP Photo)

ಸ್ಪೇನ್ನಲ್ಲಿ ರಷ್ಯಾ ವಿರುದ್ಧ ಪ್ರತಿಭಟನೆ (Reuters Photo)

‘ಜೆಕ್ ಗಣರಾಜ್ಯದಲ್ಲಿ’ ಪುಟಿನ್ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ ಜನರು (Reuters Photo)

‘ಉಕ್ರೇನ್ನಿಂದ ಪುಟಿನ್ ದೂರ ಸರಿಯಿರಿ’ ಎಂಬ ಭಿತ್ತಿ ಪತ್ರ ಹಿಡಿದು ಬ್ರಿಟಿಷ್ ಕೊಲಂಬಿಯಾದಲ್ಲಿ ಪ್ರತಿಭಟನೆಯಲ್ಲಿ ಜತೆಯಾದ ಮಗು. (AP Photo)
Published On - 10:06 am, Sat, 26 February 22




