
ಕಾರವಾರದ ಸೀಬರ್ಡ್ ನೌಕಾನೆಲೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎರಡು ದಿನಗಳು ಭೇಟಿ ನೀಡಲಿದ್ದು, ಇಂದು ಆಗಮಿಸಿದ್ದಾರೆ.

ಸ್ವದೇಶಿ ನಿರ್ಮಿತ ಕಲ್ವಾರಿ ಕ್ಲಾಸ್ ಐಎನ್‌ಎಸ್ ಖಂಡೇರಿ ಸಬ್‌ಮೇರಿನ್‌ನಲ್ಲಿ ಸಚಿವ ರಾಜನಾಥ್ ಸಿಂಗ್ ಸಮುದ್ರಯಾನ ನಡೆಸಿದರು.

ಐಎನ್ಎಸ್ ಖಂಡೇರಿ ಭಾರತದ ಮೇಕ್ ಇನ್ ಇಂಡಿಯಾ ಉಪಕ್ರಮದ ಪ್ರಾಜೆಕ್ಟ್ 75 ಜಲಾಂತರ್ಗಾಮಿ ನೌಕೆಗಳಲ್ಲಿ ಎರಡನೇಯದ್ದಾಗಿದೆ. 2019ರಲ್ಲಿ ಈ ಸಬ್ ಮೆರಿನ್ನ್ನು ರಾಜನಾಥ್ ಸಿಂಗ್ ಅವರೇ ಲೋಕಾರ್ಪಣೆ ಮಾಡಿ, ಕರ್ತವ್ಯಕ್ಕೆ ನಿಯೋಜಿಸಿದ್ದರು.





Published On - 3:02 pm, Fri, 27 May 22