- Kannada News Photo gallery Union Finance Minister Nirmala Sitharaman laid foundation stone for the Cosmology Education and Research Training Center in Mysuru
ವಿಶ್ವ ವಿಜ್ಞಾನ ಕಲಿಕೆಗೆ ಮುನ್ನುಡಿ ಬರೆದ ಮೈಸೂರು ವಿಶ್ವವಿದ್ಯಾನಿಲಯ; ರಾಜ್ಯದ ಪ್ರಥಮ ಕಾಸ್ಮಾಸ್ ಕೇಂದ್ರಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಿಲಾನ್ಯಾಸ
ಮೈಸೂರು: ವಿಶ್ವವಿಜ್ಞಾನ ಕಲಿಕೆಗೆ ಮೈಸೂರು ವಿಶ್ವವಿದ್ಯಾನಿಲಯವು ಮುನ್ನುಡಿ ಬರೆದಿದೆ. ಮೈಸೂರು ವಿಶ್ವವಿದ್ಯಾನಿಲಯ ಮತ್ತು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ವತಿಯಿಂದ ನಗರದ ಚಾಮುಂಡಿಬೆಟ್ಟದ ಪಾದದ ಬಳಿ ಹಮ್ಮಿಕೊಂಡಿದ್ದ ಕಾಸ್ಮೋಲಜಿ ಶಿಕ್ಷಣ ಮತ್ತು ಸಂಶೋಧನಾ - ತರಬೇತಿ ಕೇಂದ್ರದ ಶಂಕುಸ್ಥಾಪನೆಯನ್ನು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ನೆರವೇರಿಸಿದ್ದಾರೆ.
Updated on: Mar 06, 2022 | 2:51 PM

ವಿಶ್ವ ವಿಜ್ಞಾನ ಕಲಿಕೆಗೆಮೈಸೂರು ವಿಶ್ವವಿದ್ಯಾನಿಲಯ ಮುನ್ನುಡಿ ಬರೆದಿದೆ.

ರಾಜ್ಯದ ಪ್ರಥಮ ಕಾಸ್ಮೊಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಿಲಾನ್ಯಾಸ ಮಾಡಿದ್ದಾರೆ.

ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ತಲೆಎತ್ತಲಿರುವ ಈ ಕೇಂದ್ರವು 81 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿದೆ.

ಮೈಸೂರು ವಿವಿ ಮತ್ತು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯಿಂದ ಕಾರ್ಯಕ್ರಮ ನಡೆಸಲಾಗಿದೆ.

ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಮಾತನಾಡಿದ್ದಾರೆ.

ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ ಸಿಂಹ, ಪ್ರಧಾನ ವೈಜ್ಞಾನಿಕ ಸಲಗೆಗಾರ ಪ್ರೊ.ಕೆ.ವಿಜಯರಾಘವನ್, ಅಟಾನಮಿ ಎನರ್ಜಿ ವಿಭಾಗದ ನಿರ್ದೇಶಕ ಕೆ.ಎನ್.ವ್ಯಾಸ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ.ಎಸ್.ಚಂದ್ರಶೇಖರ್, ಖಗೋಳ ಭೌತಶಾಸ್ತ್ರ ಸಂಸ್ಥೆ ನಿರ್ದೇಶಕಿ ಪ್ರೊ. ಅನ್ನಪೂರ್ಣಿ ಸುಬ್ರಮಣ್ಯ ಮೊದಲಾದವರು ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್.

ಯೋಜನೆಯ ವಿಶೇಷತೆಗಳು ಹೀಗಿದೆ.




