ಸ್ನೇಹದ ಕಡಲಲ್ಲೀ, ನೆನಪಿನ ದೋಣಿಯಲೀ: ಬಾಲ್ಯದ ಗೆಳೆಯರೊಂದಿಗೆ ಪ್ರಹ್ಲಾದ್ ಜೋಶಿ: ಫೋಟೋಸ್ ನೋಡಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಬೆಂಗಳೂರಿನಲ್ಲಿ ತಮ್ಮ ಹೈಸ್ಕೂಲ್ ಗೆಳೆಯರನ್ನು 47 ವರ್ಷಗಳ ಬಳಿಕ ಭೇಟಿಯಾದರು. 1978ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಒಟ್ಟಿಗೆ ಓದಿದ ಗೆಳೆಯರೊಂದಿಗೆ ಅವರು ಹುಬ್ಬಳ್ಳಿ ಭಾಷೆಯಲ್ಲಿ ಮಾತನಾಡಿ, ಚಹಾ ಮತ್ತು ಚೂಡಾ ಸವಿದರು. ಈ ಭಾವನಾತ್ಮಕ ಭೇಟಿಯನ್ನು ಅವರು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
Updated on:Mar 15, 2025 | 2:51 PM

ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿಯವರು ಶುಕ್ರವಾರ ತಮ್ಮ ಬಾಲ್ಯದ ಗೆಳೆಯರನ್ನು ಭೇಟಿಯಾದರು. ಬೆಂಗಳೂರಿನಲ್ಲಿ ತಮ್ಮನ್ನು ಭೇಟಿಯಾದ ಹೈಸ್ಕೂಲ್ ಗೆಳಯರ ಜೊತೆ ಕೆಲ ಕಾಲ ಹರಟೆ ಹೊಡೆದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ತಮ್ಮ ಮೆಟ್ರಿಕ್ ಶಿಕ್ಷಣವನ್ನು ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ.

ಮೆಟ್ರಿಕ್ನಲ್ಲಿ ಪ್ರಹ್ಲಾದ್ ಜೋಶಿಯವರಿಗೆ ಸಹಪಾಠಿಗಳಾಗಿದ್ದವರು 47 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಅವರನ್ನು ಭೇಟಿಯಾಗಿದ್ದಾರೆ. 1978ರಲ್ಲಿ ತಮ್ಮಂದಿಗೆ ಓದಿದ ಸ್ನೇಹಿತರನನ್ನು ಕಂಡು ಪ್ರಹ್ಲಾದ್ ಜೋಶಿಯವರು ಹರ್ಷಗೊಂಡಿದ್ದಾರೆ. ಪ್ರಹ್ಲಾದ್ ಜೋಶಿ ತಮ್ಮ ಸ್ನೇಹಿತರೊಂದಿಗೆ ಹುಬ್ಬಳ್ಳಿ ಭಾಷೆಯಲ್ಲೇ ಮಾತನಾಡಿ, ಚಹಾದ ಜೋಡಿ ಚೂಡಾ ಸವಿದಿದ್ದಾರೆ. ಈ ಭಾವನಾತ್ಮಕ ಭೇಟಿಯನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

"ಏನ್ ದೋಸ್ತ...ಹೆಂಗ ಇದ್ದಿ...ಎಷ್ಟ ದಿವಸದ ಮ್ಯಾಲೆ ಭೇಟಿ...ಏನ್ತಾನ...ಎಲ್ಲಾ ಆರಾಮ ಅಲಾ ಮತ್ತ..." ’ಮತ್ತೇನಪಾ...ಮಕ್ಕಳದೇಲ್ಲಾ ಲಗ್ನ ಆತ ಇಲ್ಲ...ಎಷ್ಟ ಮೊಮ್ಮಕ್ಕಳ ಈಗ....’ ’ಹೆಂಗಿದ್ದಿ ದೋಸ್ತ...ಏನ ಎಲ್ಲಾರೂ ಮಕ್ಕಳ ಜೊತಿ ಬೆಂಗಳೂರ ಸೇರಿ...ಹುಬ್ಬಳ್ಳಿ ಮರತ ಬಿಟ್ಟಿರಿ ಕಾಣ್ತದ...’ ’ನೀ ಏನಪಾ...ದೊಡ್ಡ ಮನಷ್ಯಾ ಈಗ.....union minister ನಮ್ಮ ಕೈಯಾಗ ಎಲ್ಲಿ ಸಿಗ್ತಿ....’

ಇದ ಇವತ್ತ ನಾ 1978ರಾಗ ಮ್ಯಾಟ್ರಿಕ್ ಕಲಿಬೇಕಾರ ನನ್ನ ಜೊತಿ ನ್ಯೂ ಇಂಗ್ಲೀಷ್ ಸ್ಕೂಲ ಒಳಗ ಕಲಿತಿದ್ದ ದೋಸ್ತರ ಬೆಂಗಳೂರಾಗ ಸಿಕ್ಕಾಗ ನಡೆದ ಹರಟಿ... ಒಂದಿಷ್ಟ ದೋಸ್ತರನ್ನಂತೂ ಭೇಟ್ಟಿ ಆಗಲಾರದ ಎಷ್ಟ ವರ್ಷ ಆಗಿತ್ತೋ ಏನೋ...ಆದರ ಆತ್ಮೀಯತೆ ಏನ ಕಡಮಿ ಇರಲಿಲ್ಲಾ...ಎಷ್ಟಂದರೂ ದೋಸ್ತರ ದೋಸ್ತರ...ಯಾರ ಯಾ ಪೋಸ್ಟನಾಗ ಇದ್ದರೇನ ’ಬಾಲ್ಯದ ಆಟ.... ಆ ಹುಡುಗಾಟ... ಇನ್ನು ಮಾಸಿಲ್ಲಾ!’

ಅಂತಾರಲಾ ಹಂಗ ಇವತ್ತ ನನ್ನ ಹಳೇ ದೋಸ್ತರನ್ನ ಎಲ್ಲಾ ಭೇಟ್ಟಿ ಆಗಿ ಭಾರಿ ಖುಶಿ ಆತ.....ಹಂಗ ಎಲ್ಲಾರೂ ಸೇರಿ ಹಳೇದನ್ನ ಎಲ್ಲಾ ನೆನಸಿಗೊಂಡ ಅದರಾಗ ನಮಗ ಕಲಿಸಿದ್ದ ಗುರುಗಳ... ಲಕ್ಷ್ಮೇಶ್ವರ ಸರ್, ಕೊಪ್ಪರ ಸರ್ , ಭುಜಂಗ ಸರ್ ...ನಾತು ಸರ್ ....ಏನ್ ಜಿ ರಾಯಚೂರು ಸರ್. ಮುದಕವಿ ಸರ್ ಎಲ್ಲಾರನೂ ನೆನಸಿಕೊಂಡ, ನಮಿಸಿಕೊಂಡ ಅಗದಿ ಸಂತೋಷ ಆತ ಅನ್ನರಿ....

ಏನ ಅನ್ನರಿ...’ ಸ್ನೇಹದ ಕಡಲಲ್ಲೀ..ನೆನಪಿನ ದೋಣಿಯಲೀ ’ ಮನಷ್ಯಾ ಆವಾಗ ಇವಾಗ ಟೈಮ್ ತಗದ ಪ್ರಯಾಣ ಮಾಡಬೇಕ... ಆವಾಗ ನಾವ ಎಷ್ಟ ದೂರ ಜೀವನದಾಗ ನಡದೇವಿ ಅನ್ನೋದ ಗೊತ್ತಾಗೋದ...
Published On - 2:50 pm, Sat, 15 March 25



















