ನೋಡಲು ಮುಷ್ಟಿಯಷ್ಟು ಚಿಕ್ಕದಾಗಿ, ವರ್ಣ ರಂಜಿತವಾಗಿ ವಿಮಾನದಂತೆ ಸದ್ದು ಮಾಡುತ್ತ ಹಾರಾಡುವ ಹಮ್ಮಿಂಗ್ ಬರ್ಡ್ಗಳನ್ನು ನೋಡುವುದೇ ಹಬ್ಬ. ಇವುಗಳು ಭಾರತದಲ್ಲಿ ಕಂಡುಬರುವುದಿಲ್ಲ. ಹೀಗಾಗಿ ಇಲ್ಲಿನ ಜನರಿಗೆ ಈ ಪಕ್ಷಿಯ ಪರಿಚಯ ಕಡಿಮೆ.
ಜಗತ್ತಿನ ಅತಿ ಪುಟ್ಟ ಪಕ್ಷಿ ಹಮ್ಮಿಂಗ್ ಬರ್ಡ್ ಸಾಮಾನ್ಯವಾಗಿ 3-5 ಇಂಚು ಸುತ್ತಳತೆ ಇರುತ್ತದೆ. ಅವುಗಳಲ್ಲಿ ಅತಿ ಚಿಕ್ಕದು 2 ಇಂಚು ಸುತ್ತಳತೆ ಹೊಂದಿರುತ್ತದೆ. ಇವು ಸುಲಭವಾಗಿ ಕ್ಯಾಮರಾ ಕಣ್ಣಿಗೆ ಬೀಳುವುದಿಲ್ಲ.
ಹಮ್ಮಿಂಗ್ ಬರ್ಡ್ ಚಳಿಗಾಲದಲ್ಲಿ ಹೆಚ್ಚು ಬೆಚ್ಚಗಿನ ಪ್ರದೇಶಗಳಿಗೆ ವಲಸೆ ಹೋಗುತ್ತವೆ. ಬಳಿಕ ಸಂಗಾತಿಯಾಗಲು ವಸಂತಕಾಲದಲ್ಲಿ ಅದರ ಪ್ರದೇಶಕ್ಕೆ ಮರಳುತ್ತವೆ.
ಹಮ್ಮಿಂಗ್ ಬರ್ಡ್ ಹಾರಾಡುವಾಗ ಕಿವಿಗೆ ಇಂಪಾದ ನಾದ ಹೊಮ್ಮಿಸುವ ಕಾರಣದಿಂದ ಹಮ್ಮಿಂಗ್ ಬರ್ಡ್ ಗೆ ಝೇಂಕಾರ ಹಕ್ಕಿಯಂದೂ ಕರೆಯಲಾಗುತ್ತೆ. ಇದು ಸೆಕೆಂಡಿಗೆ 40ರಿಂದ 60 ಬಾರಿ ತ್ವರಿತವಾಗಿ ತನ್ನ ರೆಕ್ಕೆಗಳನ್ನು ಬಡಿಯುವುದರಿಂದ ಆ ನಾದ ಹೊಮ್ಮುತ್ತದೆ ಎನ್ನಲಾಗಿದೆ.
ರಿವೋಲಿಯ ಡಚೆಸ್ ಅನ್ನಾ ಮಸೆನಾ ಎಂಬ ರಾಣಿಯ ಹೆಸರನ್ನು ಹಮ್ಮಿಂಗ್ ಬರ್ಡ್ಗೆ ಇಡಲಾಗಿದೆ. ಹೀಗಾಗಿ ಅನ್ನಾ ಹಮ್ಮಿಂಗ್ ಬರ್ಡ್ ಎಂದು ಕರೆಯಲಾಗುತ್ತದೆ. ಇದು ಉತ್ತರ ಅಮೆರಿಕಾದ ಪಶ್ಚಿಮ ಕರಾವಳಿ ಪ್ರದೇಶಗಳಿಗೆ ಸ್ಥಳೀಯವಾಗಿದೆ. 20 ನೇ ಶತಮಾನದ ಆರಂಭದಲ್ಲಿ, ಅನ್ನಾ ಹಮ್ಮಿಂಗ್ ಬರ್ಡ್‌ಗಳು ಉತ್ತರ ಬಾಜಾ ಕ್ಯಾಲಿಫೋರ್ನಿಯಾ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಮಾತ್ರ ಸಾಕಲಾಗುತ್ತಿದ್ದವು.
ಹಮ್ಮಿಂಗ್ ಬರ್ಡ್ಗಳ ರೆಕ್ಕೆಯ ಬಣ್ಣ ಹೆಚ್ಚಾಗಿ ತಿಳಿ ಬೂದು ಮತ್ತು ಹಸಿರು ಬಣ್ಣವನ್ನು ಹೊಂದಿರುತ್ತವೆ. ಇವು 3ರಿಂದ 5 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತವೆ.
ಹಿಮ್ಮುಖವಾಗಿ ಹಾರಬಲ್ಲ ಏಕೈಕ ಪಕ್ಷಿ ಹಮ್ಮಿಂಗ್ ಬರ್ಡ್. ಈ ಪಕ್ಷಿಗೆ ನೆಲದ ಮೇಲೆ ನಡೆಯಲಾಗುವುದಿಲ್ಲ. ಇವು ಭಾರತದಲ್ಲಿ ಸಾಮಾನ್ಯವಾಗಿ ಕಾಣಲು ಸಿಗುವುದಿಲ್ಲ. ಆದ್ರೆ ಅಮೆರಿಕಾದಲ್ಲಿ ಇವುಗಳನ್ನು ಹೆಚ್ಚಾಗಿ ಕಾಣಬಹುದು.
ಹಮ್ಮಿಂಗ್ ಬರ್ಡ್‍ನ ನಾಲಗೆ ಹೆಚ್ಚಿನ ಎಲಾಸ್ಟಿಕ್ ಗುಣಗಳನ್ನು ಹೊಂದಿದೆ. ಹೀಗಾಗಿ ಅದು ತನ್ನ ನಾಲಿಗೆಯನ್ನು ಹೇಗೆಂದರೆ ಹಾಗೆ ತಿರುಚಿ, ಬಾಗಿ, ಕ್ಷಣಾರ್ಧದಲ್ಲಿಯೇ ಮೊದಲಿನಂತೆ ಮಾಡಿಕೊಳ್ಳಬಹುದು.
ಹಮ್ಮಿಂಗ್ ಬರ್ಡ್‍ಗಳು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಕನಿಷ್ಟ ನೂರು ಹೂವುಗಳತ್ತಲಾದರೂ ಹಾರಲೇಬೇಕು. ಪೆರು ದೇಶದಲ್ಲಿನ ಅಮೆಝಾನ್ ಕಾಡಿನ ಭಾಗದಲ್ಲಿ ಈ ಪಕ್ಷಿಗಳ ಬಹಳಷ್ಟು ಪ್ರಬೇಧಗಳನ್ನು ಕಾಣಬಹುದು.
Published On - 10:02 pm, Sun, 28 August 22