ನಟಿ ಉರ್ಫಿ ಜಾವೇದ್ ಅವರನ್ನು ಕಂಡರೆ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ವಿಚಿತ್ರವಾಗಿ ಬಟ್ಟೆ ಧರಿಸಿಕೊಂಡು ಬರುವ ಅವರ ಫೋಟೋ ಕ್ಲಿಕ್ಕಿಸಲು ಹತ್ತಾರು ಕ್ಯಾಮೆರಾಗಳು ಸದಾ ರೆಡಿ ಇರುತ್ತವೆ. ಆದರೆ ಈಗ ಅದೇ ಪಾಪರಾಜಿಗಳ ವಿರುದ್ಧ ಉರ್ಫಿ ಜಾವೇದ್ ಗರಂ ಆಗಿದ್ದಾರೆ.
‘ಇವತ್ತು ಸರಿಯಾಗಿ ಬಟ್ಟೆ ಧರಿಸಿ ಬಂದಿದ್ದಾಳೆ’ ಎಂದು ಪಾಪರಾಜಿಯೊಬ್ಬರು ವ್ಯಂಗ್ಯವಾಗಿ ಹೇಳಿರುವುದು ಉರ್ಫಿ ಜಾವೇದ್ ಕಿವಿಗೆ ಬಿದ್ದಿದೆ. ಅದನ್ನು ಕೇಳಿಸಿಕೊಂಡು ಅವರು ಕೆಂಡಾಮಂಡಲ ಆಗಿದ್ದಾರೆ. ಎಲ್ಲರ ಎದುರಲ್ಲಿ ಉರ್ಫಿ ಕೂಗಾಡಿದ್ದಾರೆ.
‘ನಿಮ್ಮ ತಾಯಿ, ತಂಗಿ, ಗರ್ಲ್ಫ್ರೆಂಡ್ ಬಟ್ಟೆಯ ಬಗ್ಗೆ ಕೆಟ್ಟದಾಗಿ ಮಾತನಾಡಿ, ನನ್ನ ಬಟ್ಟೆ ಬಗ್ಗೆ ಮಾತನಾಡಬೇಡಿ’ ಎಂದು ಉರ್ಫಿ ಜಾವೇದ್ ಅವರು ಖಡಕ್ ವಾರ್ನಿಂಗ್ ನೀಡಿದ್ದಾರೆ. ಇನ್ನೊಮ್ಮೆ ಈ ರೀತಿ ಮಾತನಾಡಿದರೆ ಹುಷಾರ್ ಎಂದು ಅವರು ಆವಾಜ್ ಹಾಕಿದ್ದಾರೆ.
ಪಾಪರಾಜಿಗಳನ್ನು ಉರ್ಫಿ ಜಾವೇದ್ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉರ್ಫಿ ಮಾಡಿದ್ದು ಸರಿ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಇಷ್ಟು ಒರಟಾಗಿ ನಡೆದುಕೊಳ್ಳಬಾರದಿತ್ತು ಎಂದು ಇನ್ನು ಕೆಲವರು ಅಭಿಪ್ರಾಯ ತಿಳಿಸಿದ್ದಾರೆ.
‘ಬಿಗ್ ಬಾಸ್ ಒಟಿಟಿ’ ಶೋನಲ್ಲಿ ಸ್ಪರ್ಧಿಸಿದ ಬಳಿಕ ಉರ್ಫಿ ಜಾವೇದ್ ಅವರ ಜನಪ್ರಿಯತೆ ಹೆಚ್ಚಿತು. ನಂತರ ಅವರು ವಿಚಿತ್ರ ಬಟ್ಟೆಗಳ ಮೂಲಕವೇ ಹೆಚ್ಚು ಗುರುತಿಸಿಕೊಳ್ಳಲು ಆರಂಭಿಸಿದರು. ಪ್ರತಿ ದಿನ ಅವರ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತವೆ.
Published On - 2:42 pm, Wed, 7 September 22