
ನಟಿ ಊರ್ವಶಿ ರೌಟೇಲಾ ಅವರು ಆಗಾಗ ಸುದ್ದಿ ಆಗುತ್ತಿರುತ್ತಾರೆ. ಅವರು ಕ್ರಿಕೆಟರ್ ರಿಷಭ್ ಪಂತ್ ಹಿಂದೆ ಬಿದ್ದು ಸುದ್ದಿ ಆಗಿದ್ದರು. ಈಗ ಅವರ ಹೊಸ ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳು ಅಚ್ಚರಿ ಮೂಡಿಸಿದ್ದಾರೆ.

ಊರ್ವಶಿ ರೌಟೇಲಾ ಅವರು ಕಾನ್ ಚಿತ್ರೋತ್ಸವದಲ್ಲಿ ಭಾಗಿ ಆಗಿದ್ದಾರೆ. ಪಿಂಕ್ ಬಣ್ಣ ಗೌನ್ ಧರಿಸಿ ಅವರು ಗಮನ ಸೆಳೆದಿದ್ದಾರೆ.

ಇಷ್ಟೇ ಆಗಿದ್ದರೆ ಊರ್ವಶಿ ಅವರು ಹೆಚ್ಚು ಸುದ್ದಿ ಆಗುತ್ತಿರಲಿಲ್ಲವೇನೋ. ಆದರೆ, ಅವರು ಧರಿಸಿರೋ ನೆಕ್ಪೀಸ್ ಎಲ್ಲರ ಗಮನ ಸೆಳೆದಿದೆ. ಮೊಸಳೆ ಮರಿಯ ನೆಕ್ಪೀಸ್ ಎಲ್ಲರ ಗಮನ ಸೆಳೆದಿದೆ.

ಅನೇಕರು ನಟಿಯನ್ನು ಈ ವಿಚಾರದಲ್ಲಿ ಟೀಕೆ ಮಾಡಿದ್ದಾರೆ. ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಈ ರೀತಿ ಅವತಾರ ತಾಳಿದ್ದು ಅನೇಕರಿಗೆ ಬೇಸರ ಮೂಡಿಸಿದೆ.

ಮಂಗಳವಾರ (ಮೇ 16) ಕಾನ್ ಚಿತ್ರೋತ್ಸವ ಆರಂಭ ಆಗಿದೆ. ಮೇ 27ರವರೆಗೆ ಈ ಚಿತ್ರೋತ್ಸವ ನಡೆಯಲಿದೆ. ಫ್ರಾನ್ಸ್ನಲ್ಲಿ ಕಾರ್ಯಕ್ರಮ ನಡೆಯುತ್ತಿದೆ.