ವ್ಯಾಲೆಂಟೈನ್ಸ್​ ಡೇ ವಿಶೇಷ: ಸ್ಯಾಂಡಲ್​ವುಡ್​ನಲ್ಲಿ ಪ್ರೀತಿಸಿ ಮದುವೆ ಆದ ಜೋಡಿಗಳ ಬಗ್ಗೆ ಇಲ್ಲಿದೆ ಮಾಹಿತಿ

| Updated By: ರಾಜೇಶ್ ದುಗ್ಗುಮನೆ

Updated on: Feb 14, 2022 | 6:00 AM

Valentine's Day: ಸ್ಯಾಂಡಲ್​ವುಡ್​ನಲ್ಲಿ ಅನೇಕರು ಅನೇಕರು ಪ್ರೇಮ ವಿವಾಹವಾಗಿದ್ದಾರೆ. ಪ್ರೇಮದ ಪಾತ್ರ ಮಾಡುತ್ತಲೇ ಸಪ್ತಪದಿ ತುಳಿದ ಸ್ಯಾಂಡಲ್​ವುಡ್​ ಜೋಡಿಗಳ ಪಟ್ಟಿ ಇಲ್ಲಿದೆ.

1 / 7
ತೆರೆಯ ಮೇಲೆ ಮಾಡುವುದು ಕೇವಲ ಪಾತ್ರ. ಅಲ್ಲಿ ನಟಿಸುತ್ತಲೇ ಪ್ರೀತಿಗೆ ಬಿದ್ದವರು ಅನೇಕರಿದ್ದಾರೆ. ಸೆಟ್​ನಲ್ಲಿ ಉಂಟಾಗುವ ಗೆಳೆತನ ನಂತರ ಹಸೆಮಣೆವರೆಗೂ ಕರೆದುಕೊಂಡು ಹೋಗಿಬಿಡುತ್ತದೆ. ಸ್ಯಾಂಡಲ್​ವುಡ್​ನಲ್ಲೂ ಇದೇ ರೀತಿ ಅನೇಕರು ವಿವಾಹವಾಗಿದ್ದಾರೆ. ಪ್ರೇಮದ ಪಾತ್ರ ಮಾಡುತ್ತಲೇ ಸಪ್ತಪದಿ ತುಳಿದ ಸ್ಯಾಂಡಲ್​ವುಡ್​ ಜೋಡಿಗಳ ಪಟ್ಟಿ ಇಲ್ಲಿದೆ.

2 / 7
ಯಶ್​-ರಾಧಿಕಾ: ಯಶ್​ ಹಾಗೂ ರಾಧಿಕಾ ಪಂಡಿತ್​ ಸ್ಯಾಂಡಲ್​ವುಡ್​ನ ತುಂಬಾನೇ ಖ್ಯಾತಿ ಪಡೆದಿರುವ ಸೆಲೆಬ್ರಿಟಿಗಳು. ಇಬ್ಬರೂ ಕಿರುತೆರೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು ‘ನಂದಗೋಕುಲ’ ಧಾರಾವಾಹಿಯಲ್ಲಿ. ನಂತರ, ಇಬ್ಬರೂ ‘ಮೊಗ್ಗಿನ ಮನಸು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅದನ್ನು ಸಾರ್ವಜನಿಕವಾಗಿ ಹೇಳಿಕೊಂಡಿರಲಿಲ್ಲ. ನಂತರ ಈ ಜೋಡಿ ಮದುವೆ ಆಯಿತು.

3 / 7
ಐಂದ್ರಿತಾ-ದಿಗಂತ್​: ಐಂದ್ರಿತಾ ರೇ ಹಾಗೂ ದಿಗಂತ್​ ಇಬ್ಬರೂ ಮದುವೆ ಆಗಿದ್ದಾರೆ. ಇವರದ್ದು ಲವ್​ ಮ್ಯಾರೇಜ್​. ಐಂದ್ರಿತಾ ಸಂದರ್ಶನ ನೋಡಿದ್ದ ದಿಗಂತ್​, ಈ ಹುಡುಗಿ ತುಂಬಾನೇ ಕ್ಯೂಟ್​ ಆಗಿದ್ದಾರೆ ಎಂದುಕೊಂಡಿದ್ದರು. ಅಚ್ಚರಿ ಎಂಬಂತೆ, ‘ಮನಸಾರೆ’ ಸಿನಿಮಾದಲ್ಲಿ ಐಂದ್ರಿತಾ ಜತೆ ತೆರೆ ಹಂಚಿಕೊಳ್ಳುವ ಅವಕಾಶ ದಿಗಂತ್​ಗೆ ಸಿಕ್ಕಿತ್ತು. ಈ ಸಿನಿಮಾ ಶೂಟಿಂಗ್​ ವೇಳೆ ದಿಗಂತ್​ ಅನಾರೋಗ್ಯಕ್ಕೆ ತುತ್ತಾದಾಗ ಐಂದ್ರಿತಾ ಹಣ್ಣನ್ನು ಕಳುಹಿಸಿದ್ದರು ಎನ್ನಲಾಗಿದೆ. ಇಬ್ಬರ ನಡುವೆ ಪ್ರೀತಿ ಮೊಳೆಯಲು ಇಷ್ಟು ಸಾಕಿತ್ತು.

4 / 7
ಅಂಬರೀಶ್​-ಸುಮಲತಾ: ಅಂಬರೀಶ್​-ಸುಮಲತಾ ಪ್ರೇಮಕತೆ ನಡೆದಿದ್ದು 90ರ ದಶಕದಲ್ಲಿ. ಇಬ್ಬರೂ ಅಂದಿನ ಕಾಲದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್​ನಲ್ಲಿದ್ದವರು. 1984ರಲ್ಲಿ ಮೊಟ್ಟ ಮೊದಲ ಬಾರಿಗೆ ಸುಮಲತಾ, ಅಂಬರೀಶ್​ ಅವರನ್ನು ನೋಡಿದ್ದು. ಅದೂ ಕಾರ್ಯಕ್ರಮವೊಂದರಲ್ಲಿ. ನಂತರ ‘ಆಹುತಿ’ ಸಿನಿಮಾದ ಸೆಟ್​ನಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಮೊದಲ ಬಾರಿಗೆ ಭೇಟಿ ಮಾಡಿದ್ದರು. ಅಲ್ಲಿಂದ ಆರಂಭವಾದ ಪರಿಚಯ ಮದುವೆಗೆ ತಂದು ನಿಲ್ಲಿಸಿತ್ತು.  

5 / 7
ಪ್ರಜ್ವಲ್​ ದೇವರಾಜ್​-ರಾಗಿಣಿ: ಪ್ರಜ್ವಲ್​ ದೇವರಾಜ್​-ರಾಗಿಣಿ ಅವರದ್ದು ಇಂದು ನಿನ್ನೆಯ ಪ್ರೀತಿಯಲ್ಲ. ಪ್ರಜ್ವಲ್ ದೇವರಾಜ್ 9ನೇ ಕ್ಲಾಸ್​​ನಲ್ಲಿದ್ದಾಗ ಅವರು ರಾಗಿಣಿ ಚಂದ್ರನ್ ಮೊದಲ ಬಾರಿಗೆ ನೋಡಿದ್ದರು. ಆಗ ರಾಗಿಣಿ ಚಂದ್ರನ್ 6ನೇ ಕ್ಲಾಸ್​​ನಲ್ಲಿದ್ದರು. ನಂತರ ಡ್ಯಾನ್ಸ್​ ಕ್ಲಾಸ್​ನಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಲು ಆರಂಭಿಸಿದ್ದರು. ಇವರ ಪ್ರೀತಿಗೆ ಮನೆಯಲ್ಲೂ ಒಪ್ಪಿಗೆ ಸಿಕ್ಕಿತ್ತು.

6 / 7
ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್​: ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗರಾಜ್​ ‘ಲವ್‌ ಮಾಕ್‌ಟೇಲ್‌ 2’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. 2015ರಲ್ಲಿ ತೆರೆಕಂಡ ‘ಚಾರ್ಲಿ’ ಚಿತ್ರದಲ್ಲಿ ಇವರಿಬ್ಬರೂ ಒಟ್ಟಿಗೆ ನಟಿಸಿದ್ದರು. ‘ಚಾರ್ಲಿ’ ಚಿತ್ರದ ಶೂಟಿಂಗ್‌ ಮುಗಿಯುತ್ತಾ ಬಂದಿತ್ತು. ಈ ವೇಳೆ ಒಂದು ದಿನ ಮಿಲನಾ ಅವರನ್ನು ಕಾರಿನಲ್ಲಿ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗಿದ್ದ ಕೃಷ್ಣ ಮದುವೆಗೆ ನೇರವಾಗಿ ಪ್ರಪೋಸ್‌ ಮಾಡಿದ್ದರು. ಮಿಲನಾ ಕೂಡ ಇವರ ಪ್ರಪೋಸ್​ ಒಪ್ಪಿಕೊಂಡಿದ್ದರು.

7 / 7
ಮೇಘನಾ ರಾಜ್​- ಚಿರು ಸರ್ಜಾ: ‘ಪೈರಸಿ ಮುಕ್ತ ಕನ್ನಡ ಚಲನಚಿತ್ರ’ ಹೆಸರಿನ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ಮೊಟ್ಟ ಮೊದಲ ಬಾರಿಗೆ ಮೇಘನಾ ರಾಜ್​-ಚಿರಂಜೀವಿ ಸರ್ಜಾ ಭೇಟಿ ಆಗಿದ್ದರು. ನಂತರ ಮೇಘನಾಗೆ ಮೆಸೇಜ್​ ಮಾಡಿ ಚಿರು ಮಾತು ಆರಂಭಿಸಿದ್ದರು. ದ್ವಾರಕೀಶ್ ನಿರ್ಮಾಣದ ಆಟಗಾರ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಇಬ್ಬರು ಒಟ್ಟಿಗೆ ನಟಿಸಿದ್ದರು. ಗೆಳೆತನದ ಮೂಲಕ ಆರಂಭವಾದ ಇವರ ಸಂಬಂಧ ನಂತರ ಪ್ರೇಮದ ಹಾದಿ ತುಳಿದಿತ್ತು.