- Kannada News Photo gallery Venus transit to sagittarius on december 30 2021 it will bring good fortune for 4 zodiac signs zodiac signs in kannada sas
New Year 2022: ಈ ರಾಶಿಯವರಿಗೆ ಡಿಸೆಂಬರ್ 30 ರಿಂದ ಒಳ್ಳೆಯ ಕಾಲ. ಈ ನಾಲ್ಕು ರಾಶಿಯವರು ಇದರ ಲಾಭ ಪಡೆಯಿರಿ
ಹೊಸ ವರ್ಷಾರಂಭದ ಸಮಯಕ್ಕೂ ಮುನ್ನ (2022) ಡಿಸೆಂಬರ್ 30 ರಿಂದ ಈ ರಾಶಿಯವರಿಗೆ ಒಳ್ಳೆಯ ಸಮಯ ಕೂಡಿಬರಲಿದೆ. ಈ ನಾಲ್ಕು ರಾಶಿಯವರು ಇದರ ಲಾಭ ಪಡೆಯಬಹುದು. ಶುಕ್ರ ಗ್ರಹ ಧನ ವೈಭವ ತರುವ ಮತ್ತು ವಿಲಾಸಿತ ಪ್ರಧಾನ ಗ್ರಹ ಎನ್ನಲಾಗುತ್ತದೆ. ಹಾಗಾಗಿ 2021 ಡಿಸೆಂಬರ್ 30 ರಿಂದ ಶುಕ್ರ ಗ್ರಹ ಧನು ರಾಶಿಯಲ್ಲಿ ಪ್ರವೇಶಿಸುತ್ತಾನೆ. 2022 ಫೆಬ್ರವರಿ 27 ವರೆಗೂ ಶುಕ್ರ ಗ್ರಹ ಧನು ರಾಶಿಯಲ್ಲೇ ಸಂಚರಿಸುತ್ತಿರುತ್ತಾನೆ. ಶುಕ್ರ ಗ್ರಹದ ಈ ಪಥ ಬದಲಾವಣೆ ಕೆಳಗಿನ ನಾಲ್ಕು ರಾಶಿಯವರಿಗೆ ಶುಭಪ್ರದ ಫಲಪ್ರದವಾಗಲಿದೆ (venus transit to sagittarius).
Updated on: Dec 23, 2021 | 6:06 AM

ಮೇಷ (Aries): ಶುಕ್ರ ಗ್ರಹ ಪಥ ಬದಲಾವಣೆಯು ಮೇಷ ರಾಶಿಯ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ. ಇದು ಶುಭದಾಯಕವಾಗಿರುತ್ತದೆ. ಈ ಸಮಯದಲ್ಲಿ ನಮ್ಮ ಪರಿಶ್ರಮಕ್ಕೆ ತಕ್ಕತೆ ಎಲ್ಲಾ ಯಶಸ್ಸು ಲಭಿಸುತ್ತದೆ. ನಿಮಗೆ ಕೈಗೂಡಬೇಕಾದ ಕೆಲಸಗಳ ಬಗೆಗೆ ನೀವು ಹೆಚ್ಚಿನ ಕಾಳಜಿ ವಹಿಸಿ ಶರಮ ಹಾಕಿದ್ದೇ ಆದರೆ ಖಂಡಿತಾ ಜಯ ನಿಮ್ಮದಾಗಲಿದೆ.

ವೃಷಭ (Taurus): ವೃಷಭ ರಾಶಿ ಜಾತಕದವರಿಗೆ ಶುಕ್ರ ಗ್ರಹ ಗೋಚರವು ಆರ್ಥಿಕವಾಗಿ ಶುಭದಾಯಕವಾಗಲಿದೆ. ನಿಮಗೆ ದಿಢೀರನೆ ಆರ್ಥಿಕ ಲಾಭ ಗೋಚರಿಸಲಿದೆ. ಇನ್ನು ಉದ್ಯೋಗಿಗಳಿಗೆ ದೊಡ್ಡ ಜವಾಬ್ದಾರಿ ಸ್ಥಾನ ಪ್ರಾಪ್ತಿಯಾಗಲಿದೆ. ಇದರಿಂದ ನೀವು ಪ್ರವಾಸವೂ ಹೋಗಬೇಕಾದೀತು. ಸರಿಯಾದ ರಣನೀತಿ ಅಳವಡಿಸಿಕೊಂಡಿದ್ದೇ ಆದರೆ ಏನೂ ಬೇಕಾದರೂ ನೀವು ಸಾಧಿಸಬಹುದಾಗಿದೆ. ಮುಂದಿನೆ ಎರಡು ತಿಂಗಳೂ ನೀವು ಅದೃಷ್ಟವಂತರು ಎಂಬುದು ಸಾಬೀತಾಗಲಿದೆ.

3. ಕರ್ಕಾಟಕ (Cancer): ಕರ್ಕ ರಾಶಿ ಜಾತಕದವರಿಗೆ ಮುಂದಿನ ಎರಡು ತಿಂಗಳು ಅದೃಷ್ಟ ತರಲಿದೆ. ನೌಕರಿಯಲ್ಲಿ ಇನ್ನೂ ಹೆಚ್ಚಿನ ಅದೃಷ್ಟ ನಿಮ್ಮದಾಗಲಿದೆ. ನೌಕರರಿಗೆ ಪದೋನ್ನತಿ ಸಿಗುವ ಸಂಭಾವ್ಯತೆ ಇರುತ್ತದೆ. ಸರಿಕಾರಿ ನೌಕರಿ ತಲಾಶೆಯಲ್ಲಿ ಇರುವವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಹಾಗಾಗಿ ಪರಿಶ್ರಮ ಹಾಕುವ ಕಸರತ್ತನ್ನು ಕೈಗೊಳ್ಳಿ.

ವೃಶ್ಚಿಕ (Scorpio): ವೃಶ್ಚಿಕ ರಾಶಿ ಜಾತಕದವರ ಮೇಲೆಯೂ ಸಹ ಶುಕ್ರ ಗೋಚರ ಲಾಭದಾಯಕವಾಗಲಿದೆ. ಉದ್ಯೋಗದಲ್ಲಿ ಪ್ರಮೋಶನ್ ಸಿಗುವ ಸಾಧ್ಯತೆ ನಿಚ್ಚಳವಾಗಿದೆ. ಧನ ಲಾಭವಾಗಲಿದೆ. ಯಾವುದಾದರೂ ವ್ಯಾಪಾರ ಶುರು ಮಾಡಬೇಕೆಂದರೂ ಇದು ಪ್ರಶಸತ ಸಮಯವಾಗಿದೆ.




