ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದರು. ಅವರ ಜೊತೆ ವಿಜಯ್ ದೇವರಕೊಂಡ ಕೂಡ ಹೋಗಿದ್ದರು ಎಂಬುದು ಹಲವರ ಗುಮಾನಿ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿಲ್ಲ. ಆದರೆ ಅವರಿಬ್ಬರು ಒಟ್ಟಿಗೆ ಪ್ರವಾಸ ಮಾಡಿದ್ದಾರೆ ಎಂಬುದು ಗಾಸಿಪ್ ಮಂದಿಯ ವಾದ.
ಅಕ್ಟೋಬರ್ 7ರಂದು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಕೆಲವೇ ನಿಮಿಷಗಳ ಅಂತರದಲ್ಲಿ ಮುಂಬೈ ವಿಮಾನ ನಿಲ್ದಾಣ ಪ್ರವೇಶ ಮಾಡಿದ್ದರು. ವಾಪಸ್ ಬರುವಾಗಲೂ ಅದು ಮರುಕಳಿಸಿದೆ.
ಅ.11ರ ರಾತ್ರಿ ರಶ್ಮಿಕಾ ಮಂದಣ್ಣ ಅವರು ಮಾಲ್ಡೀವ್ಸ್ನಿಂದ ವಾಪಸ್ ಬಂದಿದ್ದಾರೆ. ಅದೇ ಸಮಯದ ಆಸುಪಾಸಿನಲ್ಲಿ ವಿಜಯ್ ದೇವರಕೊಂಡ ಕೂಡ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.
ಇಬ್ಬರೂ ಒಂದೇ ದಿನ ಹೋಗಿ, ಒಂದೇ ದಿನ ವಾಪಸ್ ಬಂದಿರುವುದು ಬರೀ ಕಾಕತಾಳೀಯ ಅಲ್ಲ ಎಂಬುದು ನೆಟ್ಟಿಗರ ಅಭಿಪ್ರಾಯ. ಹಾಗಾಗಿ ರಶ್ಮಿಕಾ ಜತೆ ವಿಜಯ್ ದೇವರಕೊಂಡ ಕೂಡ ಸೀಕ್ರೆಟ್ ಆಗಿ ಮಾಲ್ಡೀವ್ಸ್ ಪ್ರವಾಸ ಮಾಡಿದ್ದಾರೆ ಎನ್ನಲಾಗಿದೆ.
Published On - 3:34 pm, Wed, 12 October 22