
ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಸಿನಿಮಾ ಆಗಸ್ಟ್ 25ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಮೂಲಕ ಖಳನಟನಾಗಿ ವಿಶ್ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಮಾಡೆಲ್ ಆಗಿದ್ದ ಅವರೀಗ ವಿಲನ್ ಆಗಿ ಅಬ್ಬರಿಸಲಿದ್ದಾರೆ.

ನಟ ಆಗಬೇಕು ಎಂಬುದು ವಿಶ್ ಅವರ ಹಲವು ವರ್ಷಗಳ ಕನಸು. ಅದು ‘ಲೈಗರ್’ ಮೂಲಕ ನನಸಾಗುತ್ತಿದೆ. ಮಾಡೆಲ್ ಆಗಿ ವೃತ್ತಿ ಬದುಕು ಆರಂಭಿಸಿದ ಅವರು ನಂತರ ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು.

ಆ ನಂತರ Puri Connects ಸಂಸ್ಥೆಯಲ್ಲಿ ಸಿಇಒ ವಿಶ್ ಕಾರ್ಯನಿರ್ವಹಿಸಿದರು. ಯಾವುದೇ ಗಾಡ್ ಫಾದರ್ ಇಲ್ಲದೇ ಬಣ್ಣದ ಲೋಕಕ್ಕೆ ಬಂದ ಅವರು ‘ಲೈಗರ್’ ಚಿತ್ರದ ಮೂಲಕ ಮಿಂಚಲಿದ್ದಾರೆ.

‘ನಿರ್ದೇಶಕ ಪುರಿ ಜಗನ್ನಾಥ್ ಅವರೇ ನನ್ನ ಗುರು, ಬೆಸ್ಟ್ ಫ್ರೆಂಡ್, ಮೆಂಟರ್’ ಎಂದು ವಿಶ್ ಹೇಳಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ನಲ್ಲಿ ಅವರು ಗಮನ ಸೆಳೆದಿದ್ದಾರೆ. ಬಾಕ್ಸರ್ ಆಗಿ ಅವರು ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ‘ಲೈಗರ್’ ಬಿಡುಗಡೆ ಆಗಲಿದೆ. ಮೊದಲ ಸಿನಿಮಾದಲ್ಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸುವ ಅವಕಾಶ ವಿಶ್ ಅವರಿಗೆ ಸಿಕ್ಕಿದೆ.
Published On - 9:33 am, Tue, 23 August 22