
ನಟ ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಅವರು ಹಾಯಾಗಿ ಸಂಸಾರ ನಡೆಸುತ್ತಿದ್ದರು. ಆದರೆ ಅವರ ಕುಟುಂಬದಲ್ಲಿ ಈಗ ಶೋಕದ ವಾತಾವರಣ ನಿರ್ಮಾಣ ಆಗಿದೆ.

2007ರಲ್ಲಿ ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಬ್ಬರ ಜೋಡಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದರು.

ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ ಅವರ ಮಗಳು ಸ್ಪಂದನಾ. ಅವರನ್ನು ಮೊದಲ ಸಲ ನೋಡಿದಾಗಲೇ ವಿಜಯ್ ರಾಘವೇಂದ್ರ ಮನ ಸೋತಿದ್ದರು.

ಎರಡೂ ಕುಟುಂಬದವರ ಒಪ್ಪಿಗೆ ಸಿಕ್ಕ ಬಳಿಕ ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಅವರ ಮದುವೆ ನೆರವೇರಿತ್ತು. ಈ ದಂಪತಿಗೆ ಶೌರ್ಯ ಎಂಬ ಮಗನಿದ್ದಾನೆ.

ಈಗ ಸ್ಪಂದನಾ ಅವರನ್ನು ಕಳೆದುಕೊಂಡು ವಿಜಯ್ ರಾಘವೇಂದ್ರ ಅವರು ಮರುಗುತ್ತಿದ್ದಾರೆ. ಆಪ್ತರಿಂದ ಮತ್ತು ಸ್ನೇಹಿತರಿಂದ ಅವರನ್ನು ಸಂತೈಸುವ ಕೆಲಸ ಆಗುತ್ತಿದೆ.

ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಸ್ಪಂದನಾ ಅವರಿಗೆ ಆಸಕ್ತಿ ಇರಲಿಲ್ಲ. ‘ಅಪೂರ್ವ’ ಸಿನಿಮಾದಲ್ಲಿ ಅವರು ವಿಜಯ್ ರಾಜವೇಂದ್ರ ಜೊತೆ ತೆರೆಹಂಚಿಕೊಂಡಿದ್ದರು.

ಬ್ಯಾಂಕಾಕ್ಗೆ ಪ್ರವಾಸಕ್ಕೆ ತೆರಳಿದ್ದ ಸ್ಪಂದನಾ ಅವರಿಗೆ ಹೃದಯಾಘಾತ ಆಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನ ಆಗಲಿಲ್ಲ.