
ತಮಿಳಿನ ನಟ ವಿಜಯ್ ಸೇತುಪತಿ ಅವರ ಸಿನಿಮಾ ಜರ್ನಿ ರೋಚಕವಾದದ್ದು, ಕಷ್ಟಪಟ್ಟು ಇಂದಿನ ಸ್ಥಿತಿ ತಲುಪಿದ್ದಾರೆ.

ಶಾರ್ಟ್ ಫಿಲಮ್ಗಳಲ್ಲಿ ನಟಿಸಿ, ಬಳಿಕ ಎಕ್ಸ್ಟ್ರಾ ಆಗಿ ನಟಿಸಿ, ತೀರ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು ವಿಜಯ್ ಸೇತುಪತಿ.

ವಿಜಯ್ ಸೇತುಪತಿಯವರ ಪ್ರತಿಭೆಯನ್ನು ಬಹಳ ತಡವಾಗಿ ತಮಿಳು ಚಿತ್ರರಂಗ ಗುರುತಿಸಿತು.

ವಿಜಯ್ ಸೇತುಪತಿ ತಮ್ಮ ಪ್ರತಿಭೆಯಿಂದ ತಮಿಳು ಮಾತ್ರವೇ ಅಲ್ಲದೆ ಹಲವು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ತೆಲುಗು, ಹಿಂದಿ ಭಾಷೆಗಳಲ್ಲಿಯೂ ವಿಜಯ್ ನಟಿಸುತ್ತಿದ್ದಾರೆ.

ಇದೀಗ ಬಾಲಿವುಡ್ಗೂ ವಿಜಯ್ ಸೇತುಪತಿ ಪ್ರವೇಶಿಸಿದ್ದಾರೆ, ‘ಜವಾನ್’ ಸಿನಿಮಾದ ಅದ್ಭುತ ನಟನೆ ಅವರಿಗೆ ಇನ್ನಷ್ಟು ಬಾಲಿವುಡ್ ಅವಕಾಶಗಳನ್ನು ಗಳಿಸಿಕೊಡುತ್ತಿದೆ.

ಕತ್ರಿನಾ ಕೈಫ್ ಜೊತೆ ನಟಿಸಿರುವ ‘ಮೇರಿ ಕ್ರಿಸ್ಮಸ್’ ಬಿಡುಗಡೆಗೆ ರೆಡಿಯಾಗಿದೆ. ಇದರ ಬೆನ್ನಲ್ಲೆ ಇನ್ನೂ ಕೆಲವು ಅವಕಾಶಗಳು ಬಾಲಿವುಡ್ನಿಂದ ವಿಜಯ್ಗೆ ಲಭಿಸಿದೆ.

ಮತ್ತೊಬ್ಬ ಸ್ಟಾರ್ ನಟನ ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾವನ್ನು ದೊಡ್ಡ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ.