- Kannada News Photo gallery Vijayapura Cold and dense fog in Vijayapura district Farmers worried about crop loss Vijayapura news in kannada
ಸೂರ್ಯನಿಗೆ ಸೆಡ್ಡು ಹೊಡೆದು ವಿಜಯಪುರ ಜಿಲ್ಲೆಯನ್ನು ಆವರಿಸಿದ ಮಂಜು; ಹೆಚ್ಚಿದ ಆತಂಕ
ವಿಜಯಪುರ ಜಿಲ್ಲೆಯಲ್ಲಿ ಚಳಿಯ ಜೊತೆಗೆ ದಟ್ಟವಾದ ಮಂಜು ಕೂಡ ಆವರಿಸುತ್ತಿದೆ. ಆ ಮೂಲಕ ಜಿಲ್ಲೆಯು ಮಂಜಿನ ನಗರಿಯಾಗಿ ಪರಿವರ್ತನೆಯಾದಂತೆ ಗೋಚರಿಸಲು ಆರಂಭಿಸಿದೆ.
Updated on:Nov 24, 2022 | 9:40 AM

Vijayapura Cold and dense fog in Vijayapura district Farmers worried about crop loss Vijayapura news in kannada

Vijayapura Cold and dense fog in Vijayapura district Farmers worried about crop loss Vijayapura news in kannada

ಮದ್ಯಾಹ್ನವಾಗುತ್ತಾ ಬಂದರೂ ಇನ್ನೂ ಸೂರ್ಯನ ಬಿಸಿಲು ಕಾಣದಂತಾಗಿದೆ. ನಗರದ ಐತಿಹಾಸಿಕ ಸ್ಮಾಕರಗಳು ಮಂಜಿನಲ್ಲಿ ಮಿಂದೇಳುತ್ತಿವೆ. ಮಂಜು ಆವರಿಸಿದ ಕಾರಣ ವಿಜಯಪುರ ನಗರ ಮಂಜಿನಲ್ಲಿ ಅಡಗಿ ಕೂತಂತಾಗಿದೆ.

ಇನ್ನು ಈ ರೀತಿ ಸತತ ಮಂಜು ಸುರಿದರೆ ತೋಟಗಾರಿಕೆ ಬೆಳೆಯಾದ ದ್ರಾಕ್ಷಿ ಹಾಗೂ ಈರುಳ್ಳಿ ಸೂರ್ಯಕಾಂತಿ ಬೆಳೆಗೆ ಹಾನಿಯಾಗೋ ಸಾಧ್ಯತೆಯಿದೆ. ಹೆಚ್ಚು ಮಂಜಿನ ಹಾವಳಿ ಉಂಟಾದರೆ ಇತರೆ ಬೆಳೆಗಳಿಗೂ ತೊಂದರೆಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ನಡುಕ ಚಳಿಯ ಜೊತೆಗೆ ತುಂತುರು ಮಳೆಯೂ ಸುರಿಯುತ್ತಿದೆ. (ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ)
Published On - 9:39 am, Thu, 24 November 22




