- Kannada News Photo gallery Vitamin A: Eat these foods to increase vitamin A in your body in kannada Health Tips
Vitamin A: ನಿಮ್ಮ ದೇಹದಲ್ಲಿ ವಿಟಮಿನ್ ಎ ಹೆಚ್ಚಿಸಲು ಈ ಆಹಾರ ಸೇವಿಸಿ
ನಿಮ್ಮನ್ನು ಆರೋಗ್ಯವಾಗಿರಿಸಲು ದೇಹದಲ್ಲಿ ಪೋಷಕಾಂಶಗಳು ಹಾಗೂ ಸಾಕಷ್ಟು ಅಗತ್ಯವಾಗಿರುತ್ತದೆ. ಆದ್ದರಿಂದ ನಿಮ್ಮ ದೇಹದಲ್ಲಿ ವಿಟಮಿನ್ ಎ ಅಂಶವನ್ನು ಹೆಚ್ಚಿಸಲು ಈ ಆಹಾರ ಕ್ರಮವನ್ನು ರೂಡಿಸಿಕೊಳ್ಳಿ.
Updated on:Jan 25, 2023 | 11:48 AM

ನಿಮ್ಮನ್ನು ಆರೋಗ್ಯವಾಗಿರಿಸಲು ದೇಹದಲ್ಲಿ ಪೋಷಕಾಂಶಗಳು ಹಾಗೂ ಸಾಕಷ್ಟು ಅಗತ್ಯವಾಗಿರುತ್ತದೆ. ಆದ್ದರಿಂದ ನಿಮ್ಮ ದೇಹದಲ್ಲಿ ವಿಟಮಿನ್ ಎ ಅಂಶವನ್ನು ಹೆಚ್ಚಿಸಲು ಈ ಆಹಾರ ಕ್ರಮವನ್ನು ರೂಡಿಸಿಕೊಳ್ಳಿ.

ದೇಹದಲ್ಲಿ ವಿಟಮಿನ್ ಎ ಕೊರತೆ ಉಂಟಾದರೆ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದು ವಿಶೇಷವಾಗಿ ಚಳಿಗಾಲದಲ್ಲಿ ಶೀತ, ಕೆಮ್ಮು ಹಾಗೂ ಜ್ವರ ವೇಗವಾಗಿ ಹರಡಲು ಕಾರಣವಾಗುತ್ತದೆ.

ವಿಟಮಿನ್ ಎ ನಿಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ದೃಷ್ಟಿ ದೋಷದ ಸಮಸ್ಯೆಯಿಂದ ನಿಮ್ಮನ್ನು ದೂರವಿರಿಸುತ್ತದೆ.

ಹಾಲು: ಹಾಲಿನಿಂದ ತಯಾರಿಸಲಾಗುವ ಪದಾರ್ಥಗಳಲ್ಲಿ ಮಿಟಮಿನ್ ಎ ಸಮೃದ್ದವಾಗಿದೆ. ಆದ್ದರಿಂದ ಹಾಲು, ಚೀಸ್ ಮುಂತಾದ ಹಾಲಿನ ಉತ್ಪನ್ನವನ್ನು ಆಹಾರ ಕ್ರಮದಲ್ಲಿ ಜೋಡಿಸಿ.

ಮೊಟ್ಟೆ: ಪ್ರತಿ ದಿನ ಮೊಟ್ಟೆಯನ್ನು ಸೇವಿಸಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಇದರಲ್ಲಿ ಆಮೈನೋ ಆಮ್ಲ ಸಮೃದ್ದವಾಗಿದ್ದು, ಜೊತೆಗೆ ಮೊಟ್ಟೆಯ ಹಳದಿ ಲೋಳೆಯಲ್ಲಿ ಮಿಟಮಿನ್ ಡಿ ಹೇರಳವಾಗಿದೆ.

ತರಕಾರಿಗಳು: ವಿಟಮಿನ್ ಎ ಸಮೃದ್ದವಾಗಿರುವ ತರಕಾರಿಗಳಾದ ಟೊಮಾಟೋ, ಬೀಟ್ರೂಟ್, ಕ್ಯಾರೆಟ್, ಸಿಹಿ ಗೆಣಸು ಮುಂತಾದವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

ಮೀನು ಅಥವಾ ಮೀನಿನ ಎಣ್ಣೆ: ಇದರಲ್ಲಿ ವಿಟಮಿನ್ ಎ ಹಾಗೂ ಒಮೆಗಾ 3 ಸಮೃದ್ದವಾಗಿದ್ದು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
Published On - 11:48 am, Wed, 25 January 23



















