Vivo X100 Series: ದುಬಾರಿ ಬೆಲೆ, ಆಕರ್ಷಕ ಫೀಚರ್ಸ್: ವಿವೋ X100, ವಿವೋ X100 ಪ್ರೊ ಈಗ ಖರೀದಿಗೆ ಲಭ್ಯ

Updated on: Jan 12, 2024 | 6:55 AM

Vivo X100, Vivo X100 Pro Sale: ವಿವೋ X100 ಪ್ರೊ ಬೆಲೆ ಏಕೈಕ 16GB RAM + 512GB ಸ್ಟೋರೇಜ್ ಮಾದರಿಗೆ 89,999 ರೂ. ನಿಗದಿ ಮಾಡಲಾಗಿದೆ. ವಿವೋ X100 ಬೆಲೆ 12GB RAM + 256GB ಸ್ಟೋರೇಜ್ ರೂಪಾಂತರಕ್ಕೆ 63,999 ರೂ. ಈ ಎರಡೂ ಫೋನ್‌ಗಳು ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಆನ್‌ಲೈನ್ ಸ್ಟೋರ್ ಮತ್ತು ದೇಶದಾದ್ಯಂತದ ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಕಾಣುತ್ತಿದೆ.

1 / 8
ಪ್ರಸಿದ್ಧ ವಿವೋ ಕಂಪನಿ ಭಾರತದಲ್ಲಿ ತನ್ನ ವಿವೋ ಎಕ್ಸ್100 ಸರಣಿ ಅಡಿಯಲ್ಲಿ ಮೊನ್ನೆಯಷ್ಟೆ ಹೊಸ ವಿವೋ X100 ಮತ್ತು ವಿವೋ X100 ಪ್ರೊ ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿತ್ತು ಸೋನಿ ಲೆನ್ಸ್​ನಿಂದ ಕೂಡಿರುವ ಅದ್ಭುತ ಕ್ಯಾಮೆರಾದ ಈ ಫೋನುಗಳು ಇದೀಗ ಭಾರತದಲ್ಲಿ ಮಾರಾಟ ಕಾಣುತ್ತಿದೆ.

ಪ್ರಸಿದ್ಧ ವಿವೋ ಕಂಪನಿ ಭಾರತದಲ್ಲಿ ತನ್ನ ವಿವೋ ಎಕ್ಸ್100 ಸರಣಿ ಅಡಿಯಲ್ಲಿ ಮೊನ್ನೆಯಷ್ಟೆ ಹೊಸ ವಿವೋ X100 ಮತ್ತು ವಿವೋ X100 ಪ್ರೊ ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿತ್ತು ಸೋನಿ ಲೆನ್ಸ್​ನಿಂದ ಕೂಡಿರುವ ಅದ್ಭುತ ಕ್ಯಾಮೆರಾದ ಈ ಫೋನುಗಳು ಇದೀಗ ಭಾರತದಲ್ಲಿ ಮಾರಾಟ ಕಾಣುತ್ತಿದೆ.

2 / 8

ವಿವೋ X100 ಪ್ರೊ ಬೆಲೆ ಏಕೈಕ 16GB RAM + 512GB ಸ್ಟೋರೇಜ್ ಮಾದರಿಗೆ 89,999 ರೂ. ನಿಗದಿ ಮಾಡಲಾಗಿದೆ. ವಿವೋ X100 ಬೆಲೆ 12GB RAM + 256GB ಸ್ಟೋರೇಜ್ ರೂಪಾಂತರಕ್ಕೆ 63,999 ರೂ. ಈ ಎರಡೂ ಫೋನ್‌ಗಳು ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಆನ್‌ಲೈನ್ ಸ್ಟೋರ್ ಮತ್ತು ದೇಶದಾದ್ಯಂತದ ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಕಾಣುತ್ತಿದೆ.

3 / 8

ಡ್ಯುಯಲ್ ಸಿಮ್ (ನ್ಯಾನೋ) ವಿವೋ X100 ಪ್ರೊ ಆಂಡ್ರಾಯ್ಡ್ 14-ಆಧಾರಿತ FunTouch OS 14 ಮೂಲಕ ರನ್ ಆಗುತ್ತದೆ. ಇದು 6.78-ಇಂಚಿನ (1,260 x 2,800 ಪಿಕ್ಸೆಲ್‌ಗಳು) AMOLED 8T LTPO ಡಿಸ್‌ಪ್ಲೇ, 120Hz ರಿಫ್ರೆಶ್ ದರ ಹೊಂದಿದೆ. ಇದು ಆಕ್ಟಾ-ಕೋರ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9300 SoC ನಲ್ಲಿ ಕಾರ್ಯನಿರ್ವಹಿಸುತ್ತದೆ.

4 / 8

ವಿವೋ X100 ಪ್ರೊ 50-ಮೆಗಾಪಿಕ್ಸೆಲ್ Sony IMX989 OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲದೊಂದಿಗೆ ಮುಖ್ಯ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್​ನ Zeiss ಬ್ರಾಂಡ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

5 / 8

OIS ಜೊತೆಗೆ ಮೆಗಾಪಿಕ್ಸೆಲ್ ಝೈಸ್ APO ಸೂಪರ್-ಟೆಲಿಫೋಟೋ ಕ್ಯಾಮೆರಾ ಇದೆ. ಟೆಲಿಫೋಟೋ ಕ್ಯಾಮೆರಾ 4.3x ಆಪ್ಟಿಕಲ್ ಜೂಮ್ ಅನ್ನು ಬೆಂಬಲಿಸುತ್ತದೆ. ಪ್ರಾಥಮಿಕ ಶೂಟರ್ ಮತ್ತು ಟೆಲಿಫೋಟೋ ಕ್ಯಾಮೆರಾ ಎರಡೂ 100x ಡಿಜಿಟಲ್ ಜೂಮ್ ಅನ್ನು ಬೆಂಬಲಿಸುತ್ತವೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ, 32-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

6 / 8

ವಿವೋ X100 ಪ್ರೊ 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 5,400mAh ಬ್ಯಾಟರಿಯನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi 7, ಬ್ಲೂಟೂತ್ 5.4, NFC, GPS, ಮತ್ತು USB ಟೈಪ್-C ಪೋರ್ಟ್ ಸೇರಿವೆ. ದೃಢೀಕರಣಕ್ಕಾಗಿ ಹ್ಯಾಂಡ್ಸೆಟ್ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿದೆ.

7 / 8

ಇನ್ನು ವಿವೋ X100 ಪ್ರೊ ಮಾದರಿಯಂತೆಯೇ ಇದು ಕೂಡ ಅದೇ ಸಾಫ್ಟ್‌ವೇರ್ ಮತ್ತು ಡಿಸ್​ಪ್ಲೇ ಫೀಚರ್ಸ್ ಹೊಂದಿದೆ. ಇದು ಆಕ್ಟಾ-ಕೋರ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9300 SoC ನಲ್ಲಿ ಕಾರ್ಯನಿರ್ವಹಿಸುತ್ತದೆ. ವಿವೋ X100 ಸಹ OIS ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ Sony IMX920 VCS ಮುಖ್ಯ ಕ್ಯಾಮೆರಾ ಇದೆ.

8 / 8

ಅಂತೆಯೆ 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 64-ಮೆಗಾಪಿಕ್ಸೆಲ್ Zeiss ಕ್ಯಾಮೆರಾ ಜೊತೆಗೆ ಸೂಪರ್-ಟೆಲಿಫೋಟೋಕ್ಸ್ ಅನ್ನು ಪ್ಯಾಕ್ ಮಾಡುತ್ತದೆ. 32 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಇದೆ. ಇದು 120W ವೇಗದ ಚಾರ್ಜಿಂಗ್ ಬೆಂಬಲಕ್ಕಾಗಿ 5,000mAh ಬ್ಯಾಟರಿಯನ್ನು ಹೊಂದಿದೆ

Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Loading...
Unable to load recommendations.
Follow Us