ಬಿಗ್ ಬಾಸ್​​ನಲ್ಲಿ ಇಬ್ಬರಿಗೆ ರೆಡ್ ಕಾರ್ಡ್; ಮೂರು ತಿಂಗಳ ಸಂಬಳ ಕಟ್, ಫಿನಾಲೆಗೂ ಇಲ್ಲ ಅವಕಾಶ

Updated on: Jan 06, 2026 | 11:02 AM

ತಮಿಳು ಬಿಗ್ ಬಾಸ್ ಅಲ್ಲಿ ಇತ್ತೀಚೆಗೆ ಒಂದು ದೊಡ್ಡ ಘಟನೆ ನಡೆದಿದೆ. ನಟ ಹಾಗೂ ಹೋಸ್ಟ್ ದಳಪತಿ ವಿಜಯ್ ಅವರು ಇಬ್ಬರಿಗೆ ರೆಡ್ ಕಾರ್ಡ್ ಕೊಟ್ಟಿದ್ದಾರೆ. ಇದರ ಪ್ರಕಾರ ಸ್ಪರ್ಧಿಗಳಿಗೆ ಈಗ ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನದ ಸಂಬಳ ಕೊಡೋದಿಲ್ಲ ಎನ್ನಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

1 / 5
‘ಬಿಗ್ ಬಾಸ್ ತಮಿಳು ಸೀಸನ್ 9’ ನಡೆಯುತ್ತಿದೆ. ತಮಿಳು ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಬ್ಬರಿಗೆ ರೆಡ್ ಕಾರ್ಡ್ ಕೊಟ್ಟು ಮನೆಯಿಂದ ಹೊರಕ್ಕೆ ಕಳುಹಿಸಲಾಗಿದೆ. ಈ ಘಟನೆ ಚರ್ಚೆಯನ್ನು ಹುಟ್ಟುಹಾಕಿದೆ. ಇದು ಸರಿಯಾದ ನಿರ್ಧಾರ ಎಂದು ಅನೇಕರು ಹೇಳಿದ್ದಾರೆ.

2 / 5
ವಿಜೆ ಪಾರ್ವತಿ ಹಾಗೂ ಕಮರುದ್ದೀನ್ ಅವರು ಮನೆಯಿಂದ ಹೊರ ಹೋದವರು. ಅವರು ‘ಟಿಕೆಟ್​ ಟು ಫಿನಾಲೆ’ಯ ಕಾರಿನ ಟಾಸ್ಕ್​​ನಲ್ಲಿ ಸಹಸ್ಪರ್ಧಿ ಸಾಂಧ್ರಾಗೆ ಕಿರುಕುಳ ನೀಡಿದ್ದರು. ಕಾರಿನಿಂದ ಒದ್ದು ಅವರನ್ನು ತಳ್ಳಿದ್ದರು. ಸಾಂಧ್ರಾ ಪೆಟ್ಟಾಗಿ ಆಸ್ಪತ್ರೆ ಕೂಡ ಸೇರಿದರು. ಇದನ್ನು ಅನೇಕರು ಖಂಡಿಸಿದ್ದರು.

3 / 5
ಈಗ ಪಾರ್ವತಿ ಹಾಗೂ ಕಮರುದ್ದೀನ್​ಗೆ ಶೋನ ಹೋಸ್ಟ್ ವಿಜಯ್ ಸೇತುಪತಿ ರೆಡ್ ಕಾರ್ಡ್ ಕೊಟ್ಟಿದ್ದಾರೆ. ಈ ಮೂಲಕ ಅವರನ್ನು ಹೊರಕ್ಕೆ ಕಳುಹಿಸಲಾಗಿದೆ. ರೆಡ್ ಕಾರ್ಡ್ ಪಡೆದರೆ ಆ ಸ್ಪರ್ಧಿಗೆ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಆ ಬಗ್ಗೆ ಇಲ್ಲಿದೆ ವಿವರ.

4 / 5
ಬಿಗ್ ಬಾಸ್​ ಆಟವನ್ನು ಒಳ್ಳೆಯ ರೀತಿಯಲ್ಲಿ ನಡೆಸಬೇಕು ಎಂಬ ಉದ್ದೇಶದಿಂದ ಕಠಿಣ ನಿಯಮ ತರಲಾಗಿದೆ. ಒಂದೊಮ್ಮೆ ಬಿಗ್ ಬಾಸ್​​ನಿಂದ ತಾವಾಗೇ ಹೊರ ಹೋಗಲು ಬಯಸಿದರೆ ಅವರು ಬಿಗ್ ಬಾಸ್ ತಯಾರಕರಿಗೆ ಹಣ ಕೊಡಬೇಕು ಎನ್ನಲಾಗಿದೆ. ಅದೇ ರೀತಿ ರೆಡ್ ಕಾರ್ಡ್ ಪಡೆದರೆ ಕೆಲವು ಕಠಿಣ ನಿಯಮ ಇದೆ.

5 / 5
ರೆಡ್ ಕಾರ್ಡ್ ತೋರಿಸಿದ ಬಳಿಕ ಅದನ್ನು ಪಡೆದ ಸ್ಪರ್ಧಿಗಳು ತಕ್ಷಣ ಬಿಗ್ ಬಾಸ್ ಮನೆಯಿಂದ ಹೊರ ಹೋಗಬೇಕು. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನದ ಸಂಬಳ ಅವರಿಗೆ ಸಿಗೋದಿಲ್ಲ. ಇನ್ನು, ಬಿಗ್ ಬಾಸ್ ಫಿನಾಲೆಗೆ ಬರುವಂತೆ ಇಲ್ಲ. ಇದರ ಜೊತೆಗೆ ಅವರು ಮುಂದೆ ಯಾವ ಸೀಸನ್​ಗೂ ಬರಲು ಅರ್ಹರಲ್ಲ ಎನ್ನಲಾಗಿದೆ.