ವೋಟ್ ಫ್ರಂ ಹೋಮ್: ತಮ್ಮ ಮನೆಯಿಂದಲೇ ಮತ ಚಲಾಯಿಸಿದ 104 ವರ್ಷದ ವೃದ್ಧೆ
ಸಾರ್ವತ್ರಿಕ ಚುನಾವಣೆ 2023ರ ಅಂಗವಾಗಿ ಕೇಂದ್ರ ಚುನಾವಣಾ ಆಯೋಗ, ಇದೇ ಮೊದಲ ಬಾರಿಗೆ ದಿವ್ಯಾಂಗರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡುವುದಕ್ಕೆ ಅವಕಾಶ ನೀಡಿದೆ. ಈ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವಯೋವೃದ್ಧರು ಮನೆಯಿಂದಲೇ ಮತಗಳನ್ನು ಚಲಾಯಿಸಿದ್ದಾರೆ.