
ಅತಿ ಆದರೆ ಅಮೃತ ಕೂಡ ವಿಷ ಎನ್ನುವ ಮಾತೊಂದು ಇದೆ. ಹೆಚ್ಚು ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುವುದು ನಮಗೆ ಗೊತ್ತಿದೆ. ಆದರೆ ಹೆಚ್ಚು ಹೆಚ್ಚು ನೀರು ಕುಡಿಯುವುದರಿಂದ ಆರೊಗ್ಯಕ್ಕೆ ಒಳ್ಳೆಯದಲ್ಲ. ಮತ್ತು ಇದು ಸಾವಿಗೂ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು. ಹಾಗಾಗಿ ಅಗತ್ಯಕ್ಕೆ ತಕ್ಕಂತೆ ನೀರು ಕುಡಿಯುವಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ನಮ್ಮ ದೇಹದ ಶೇ75 ರಷ್ಟು ನೀರಿನಿಂದ ಆಮೃತವಾಗಿದೆ. ನೀರು ನಮ್ಮ ಜೀವವನ್ನು ಕಾಪಾಡುತ್ತದೆ. ಅದಕ್ಕಾಗಿಯೇ ನಾವು ನೀರಿಲ್ಲದೆ ಇರಲು ಸಾಧ್ಯವಿಲ್ಲ. ಆದರೆ ಹೆಚ್ಚು ನೀರು ಕುಡಿಯುವುದರಿಂದ ಗಂಭೀರ ಅಡ್ಡ ಪರಿಣಾಮಗಳು ಉಂಟಾಗಬಹುದು ಎನ್ನುತ್ತಾರೆ ತಜ್ಞರು.

ಹೆಚ್ಚು ನೀರು ಕುಡಿಯುವುದರಿಂದ ನಶೆಯ ಅನುಭವ ಉಂಟಾಗಬಹುದು. ಮೆದುಳಿನ ಕ್ರಿಯೆಯ ಮೇಲೆ ಪರಿಣಾಮ ಬೀರಲುಬಹುದು. ಮೆದುಳಿನ ಕೋಶಗಳನ್ನು ಊದಿಕೊಳ್ಳಲು ಕಾರಣವಾಗುತ್ತದೆ. ಪರಿಣಾಮವಾಗಿ, ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಕೆಲವೊಮ್ಮೆ ಇದು ಮಾರಣಾಂತಿಕವಾಗಬಹುದು.

ಮೆದುಳಿನ ಕೋಶಗಳು ಉಬ್ಬಿದಾಗ ಅವು ಒತ್ತಡವನ್ನು ಉಂಟುಮಾಡುತ್ತವೆ. ಇದು ಮಾನಸಿಕ ಗೊಂದಲ, ಅರೆನಿದ್ರಾವಸ್ಥೆ ಮತ್ತು ತಲೆನೋವು ಉಂಟುಮಾಡುತ್ತದೆ. ಹೆಚ್ಚಿದ ಒತ್ತಡವು ಅಧಿಕ ರಕ್ತದೊತ್ತಡ ಮತ್ತು ಕಡಿಮೆ ಹೃದಯ ಬಡಿತಕ್ಕೆ ಕಾರಣವಾಗಬಹುದು.

ಹೆಚ್ಚುವರಿ ನೀರು ಕುಡಿಯುವುದರಿಂದ ದೇಹದ ನೀರಿನ ಮಟ್ಟ ಕಡಿಮೆಯಾದಾಗ, ದ್ರವಗಳು ಜೀವಕೋಶಗಳಿಗೆ ಪ್ರವೇಶಿಸುತ್ತವೆ. ನಂತರ ಜೀವಕೋಶಗಳು ಊದಿಕೊಳ್ಳುತ್ತವೆ ಮತ್ತು ಮೂರ್ಛೆ, ಕೋಮಾ, ಸಾವಿನ ಅಪಾಯವೂ ಇರುತ್ತದೆ ಎನ್ನುತ್ತಾರೆ ತಜ್ಞರು.