- Kannada News Photo gallery Millets Food Festival 2022: PM Modi attended a Had lunch with Union Ministers and MPs
Millets Food Festival: ಕೇಂದ್ರ ಸಚಿವರು, ಸಂಸದರ ಜೊತೆಗೆ ಭೋಜನ ಕೂಟದಲ್ಲಿ ಭಾಗಿಯಾದ ಪ್ರಧಾನಿ ಮೋದಿ
ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023 ಆಚರಣೆಯ ಅಂಗವಾಗಿ ಇಂದು (ಮಂಗಳವಾರ) ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಸಂಸತ್ ನಲ್ಲಿ ಸಿರಿಧಾನ್ಯ ಆಹಾರ ಉತ್ಸವವನ್ನು ಆಯೋಜಿಸಿದ್ದರು. ಇಂದು ಮಧ್ಯಾಹ್ನ ಸಂಸದರು ಪ್ರಧಾನಿ ಮೋದಿ ಜೊತೆಗೆ ಸಿರಿಧಾನ್ಯ ಭೋಜನ ಸವಿದರು.
Updated on:Dec 20, 2022 | 6:13 PM

ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023ರ ಅಂಗವಾಗಿ ಕೃಷಿ ಸಚಿವ ನರೇಂದ್ರ ತೋಮರ್ ಅವರು ಆಯೋಜಿಸಿದ್ದ ಭೋಜನ ಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಸತ್ತು ಸದಸ್ಯ ಭಾಗವಹಿಸಿದರು.

ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಸುಮಾರು 40 ನಿಮಿಷಗಳ ಕಾಲ ಉಪಸ್ಥಿತರಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಯಲ್ಲಿ ಕೃಷಿ ಸಚಿವ ನರೇಂದ್ರ ತೋಮರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉಪರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭೂಜನ ಕೂಟದಲ್ಲಿ ಭಾಗವಹಿಸಿದರು.

ವಿಶ್ವಸಂಸ್ಥೆಯು 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ (IYOM) ಎಂದು ಘೋಷಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು

ಭಾರತ ಸರ್ಕಾರವು ಏಪ್ರಿಲ್ 2018 ರಲ್ಲಿ ಸಿರಿಧಾನ್ಯಗಳ ಪೌಷ್ಠಿಕ-ಧಾನ್ಯವೆಂದು ಘೋಷಿಸಿತ್ತು ಮತ್ತು ಪೋಶನ್ ಮಿಷನ್ ಅಭಿಯಾನದಲ್ಲಿ ರಾಗಿಯನ್ನು ಸಹ ಸೇರಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಸಂಸದರು ಕೂಡ ಭಾಗವಹಿಸಿದರು, ಆಹಾರ ಪ್ರದರ್ಶನಗಳನ್ನು ಕೂಡ ಮಾಡಲಾಗಿದೆ.

ಸಿರಿಧಾನ್ಯ ಆಹಾರ ಉತ್ಸವದಲ್ಲಿ ಹೂವಿನ ಪ್ರದರ್ಶನ ಹಾಗೂ ಸಿರಿಧಾನ್ಯಗಳಲ್ಲಿ ತಯಾರಿಸಲಾದ ಆಹಾರಗಳನ್ನು ಪ್ರದರ್ಶನ ಮಾಡಲಾಗಿತ್ತು.

ಭಾರತವು ರಾಗಿ ಉತ್ಪಾದನೆಯ ಪ್ರಮುಖ ದೇಶವಾಗಿದ್ದು, ಇದರಲ್ಲಿ ಕಂಗ್ನಿ, ಕುಟ್ಕಿ ಅಥವಾ ಸಣ್ಣ ರಾಗಿ, ಕೊಡೋನ್, ಗಂಗೋರಾ ಅಥವಾ ಬಾರ್ನ್ಯಾರ್ಡ್, ಚೀನಾ ಮತ್ತು ಬ್ರೌನ್ ಟಾಪ್ ಅನ್ನು ಜೋವರ್, ಬಜ್ರಾ, ರಾಗಿ ಮತ್ತು ಸಣ್ಣ ರಾಗಿಗಳನ್ನು ಸೇರಿಸಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ವಿದೇಶಾಂಗ ಸಚಿವ ಜೈಶಂಕರ್, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕೂಡ ಭಾಗಿಯಾಗಿದ್ದರು.
Published On - 5:57 pm, Tue, 20 December 22




