ಸಿತಾರಾ ಘಟ್ಟಮನೇನಿ ಅವರು ಸಣ್ಣ ವಯಸ್ಸಿನಲ್ಲೇ ಅಪಾರ ಜನಪ್ರಿಯತೆ ಪಡೆದಿದ್ದಾರೆ. ಅವರಿಗೆ ಇನ್ನೂ 12 ವರ್ಷ. ಹಾಗಾದರೆ ಅವರು ಚಿತ್ರರಂಗಕ್ಕೆ ಬರುತ್ತಾರಾ? ಈ ಪ್ರಶ್ನೆಗೆ ಅವರ ತಾಯಿ ನಮ್ರತಾ ಶಿರೋಡ್ಕರ್ ಅವರು ಉತ್ತರಿಸಿದ್ದಾರೆ.

ಸಿತಾರಾ ಅವರು ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಭಾಗಿ ಆಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ಬ್ರ್ಯಾಂಡ್ ಪ್ರಚಾರ ಮಾಡಿದ್ದಾರೆ. ಅವರು ಈ ಸಂದರ್ಭದಲ್ಲಿ ಅಪ್ಸರೆಯಂತೆ ಕಾಣಿಸಿದರು. ಈಗ ಸಿತಾರಾ ಅವರ ಚಿತ್ರರಂಗದ ಎಂಟ್ರಿ ಬಗ್ಗೆ ಅವರ ತಾಯಿ ಮಾತನಾಡಿದ್ದಾರೆ.

‘ಸಿತಾರಾ ಅವರು ಚಿತ್ರರಂಗಕ್ಕೆ ಯಾವಾಗ ಬರ್ತಾರೆ’ ಎಂದು ಕೇಳಲಾಯಿತು. ಇದಕ್ಕೆ ನಮ್ರತಾ ಅವರು ನೇರವಾಗಿ ಉತ್ತರಿಸಿದ್ದಾರೆ. ಆದರೆ, ಇಷ್ಟು ಬೇಗ ಅವರು ಚಿತ್ರರಂಗಕ್ಕೆ ಬರಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

‘ಸಿತಾರಾ ಅವರು ಚಿತ್ರರಂಗಕ್ಕೆ ಯಾವಾಗ ಬರ್ತಾರೆ’ ಎಂದು ಕೇಳಲಾಯಿತು. ಇದಕ್ಕೆ ನಮ್ರತಾ ಅವರು ನೇರವಾಗಿ ಉತ್ತರಿಸಿದ್ದಾರೆ. ಆದರೆ, ಇಷ್ಟು ಬೇಗ ಅವರು ಚಿತ್ರರಂಗಕ್ಕೆ ಬರಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಕೆಲವು ವರದಿಗಳ ಪ್ರಕಾರ ಸಿತಾರಾ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಬರುತ್ತಾರೆ ಎಂದು ಹೇಳಲಾಗುತ್ತಿದೆ. ಅವರು ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಅದಕ್ಕೆ ಇನ್ನೂ 10 ವರ್ಷಗಳು ಹಿಡಿಯಲಿವೆ.